ವಿದ್ಯಾನಿಧಿ ಸಮಿತಿ(ರಿ.) ಪುತ್ತೂರು, ಉಡುಪಿ ₹ 8.5 ಲಕ್ಷಕ್ಕೂ ಮಿಕ್ಕಿ ವಿದ್ಯಾ ಸಹಾಯ ಧನ ವಿತರಣೆ

ಉಡುಪಿ ವಿದ್ಯಾನಿಧಿ ಸಮಿತಿ(ರಿ.)ಯ ವಾರ್ಷಿಕ ಮಹಾಸಭೆ ಮತ್ತು ವಿವಿಧ
ವಿದ್ಯಾದಾನ ವಿತರಣಾ ಕಾರ್ಯಕ್ರಮವು ತಾರೀಕು 16-06-2024ರಂದು “ವಿದ್ಯಾ ದೇಗುಲದ “ ಸುಜ್ಞಾನ ಮಂಟಪದಲ್ಲಿ ಸಂಪನ್ನಗೊಂಡಿತು .

ಮುಖ್ಯ ಅತಿಥಿ ಉದ್ಯಮಿ ಶ್ರೀಯುತ ಶ್ರೀಕಾಂತ್ ಕೆ. ಅರಿಮಣಿತ್ತಾಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಶಾರೀರಿಕ ,ಬೌದ್ಧಿಕ ,ಮಾನಸಿಕ ಮತ್ತು ದೈವಿಕ ಎಂಬ ನಾಲ್ಕು ಶಕ್ತಿಗಳ ಸಮತೋಲನವನ್ನು ಸಾಧಿಸಿ ಹೇಗೆ ಯಶಸ್ವಿಯಾಗಬಹುದೆಂದು ಪರಿಣಾಮಕಾರಿಯಾಗಿ ವಿವರಿಸಿದರು. ಈ ಸಂಸ್ಥೆಯ ಕೆಲಸ ಶ್ಲಾಘನೀಯವೆಂದು ತಿಳಿಸಿದರು. ಉಡುಪಿ ಜಿಲ್ಲೆಯಲ್ಲಿ ಉದ್ಯಮ ಸ್ಥಾಪಿಸುವ ತಮ್ಮ ಕನಸು ನನಸಾಗುವತ್ತ ಸಾಗಿದ್ದು ಸಂಭಾವ್ಯ ಉದ್ಯೋಗಾವಕಾಶಗಳ ಬಗ್ಗೆ ತನ್ನ ಆಶಾಭಾವನೆಯನ್ನು ವಿವರಿಸಿದರು.

ಕರ್ನಾಟಕ ಬ್ಯಾಂಕ್ ನ ಪ್ರಾದೇಶಿಕ ಕಚೇರಿ, ಉಡುಪಿಯ ಎ. ಜಿ. ಎಂ. ಶ್ರೀ ವಾದಿರಾಜ ಕೆ. ಇವರು ಮಾತನಾಡುತ್ತಾ 2005 ರಿಂದಲೂ ಬ್ಯಾಂಕ್ ಈ ಸಂಸ್ಥೆಯೊಂದಿಗಿನ ಅವಿನಾಭಾವ ಸಂಬಂಧವನ್ನು ಎಳೆ ಎಳೆಯಾಗಿ ವಿವರಿಸಿ ಈ ಸಂಸ್ಥೆಯ ಒಳ್ಳೆಯ ಕೆಲಸಗಳಿಗೆ ಬ್ಯಾಂಕಿನ ಸಹಕಾರ ಮುಂದೆಯೂ ಇರುವುದಾಗಿ ತಿಳಿಸಿ, ಮಕ್ಕಳಿಗೆ ದಾನಿಗಳಿಂದ ನೀಡಿದ ಪ್ರೋತ್ಸಾಹ ಧನವನ್ನು ವಿತರಿಸಿದರು.

ಸ್ಥಾಪಕ ಅಧ್ಯಕ್ಷ ಶ್ರೀ. ಮಾಧವ ಉಪಾಧ್ಯಾಯ ಕೆ. ರವರು ಶ್ರೀ. ಶ್ರೀಕಾಂತ್ ಕೆ. ಆರಿಮಣಿತ್ತಾಯರನ್ನು ಸನ್ಮಾನಿಸಿದರು. ಪ್ರಾರಂಭದಲ್ಲಿ ಪ್ರಾರ್ಥನೆಯನ್ನು ಯಕ್ಷಸೇವೆಯ ಮೂಲಕ ಎಂಟನೇ ತರಗತಿಯ ಬಾಲಕಿ ಪ್ರಾರ್ಥನಾಳ ಹಾಡುಗಾರಿಕೆ ಮತ್ತು ಆದ್ಯ ಭಟ್ ಕೆ. ಗಣೇಶ ವೇಷ, ಹಾಗೂ ತಂಡ ನಡೆಸಿಕೊಟ್ಟರು. ಅತಿಥಿಗಳನ್ನು ಶ್ರೀ. ಶ್ರೀಪಾದ ಹೆಬ್ಬಾರ್ ಮತ್ತು ಶ್ರೀ. ಪುರಂದರ ರಾವ್ ಪರಿಚಯಿಸಿದರು. ಶ್ರೀ. ದೇವರಾಜ
ಭಟ್ ಸ್ವಾಗತಿಸಿದರು. ಶ್ರೀ. ಹರಿಪ್ರಸಾದ್ ಪ್ರಸ್ತಾವನೆಗೆದರು.

ಮಕ್ಕಳಿಗೆ ವಿದ್ಯಾದಾನ ವಿತರಣೆಯನ್ನು ಶ್ರೀ. ವಾಸುದೇವ ಭಟ್, ಶ್ರೀ. ಹಯವದನ ಭಟ್ ಮತ್ತು ಶ್ರೀ. ವಿಷ್ಣು ಪ್ರಸಾದ್ ನಿರ್ವಹಿಸಿದರು. ಅಧ್ಯಕ್ಷೆ ಶ್ರೀಮತಿ ವೀಣಾ ಜಿ. ಹತ್ವಾರ್ ರವರು ₹ 8.5 ಲಕ್ಷಕ್ಕೂ ಮಿಕ್ಕಿ ಕಲಿಕೆಗೆ ಪ್ರೋತ್ಸಾಹ ನೀಡಲು ಸಹಕರಿಸಿದ
ದಾನಿಗಳ ತುಂಬು ಸಹಕಾರವನ್ನು ಸ್ಮರಿಸಿದರು. ಕಾರ್ಯದರ್ಶಿ ಶ್ರೀ.ಮುರಳಿಧರ್ ಭಟ್
ವಂದನಾರ್ಪಣೆಯನ್ನು ನೆರವೇರಿಸಿದರು.ಕೋಶಾಧಿಕಾರಿ ಶ್ರೀ . ಕೃಷ್ಣರಾಜ ರಾವ್ ಸಹಕರಿಸಿದರು. ಶ್ರೀ. ಷಣ್ಮುಖರಾಜ್ ಎಂ ಮತ್ತು ಶ್ರೀ. ಸುಷೇಣ ಬಾಯರಿ ಅಂದವಾಗಿ ಫೋಟೋಗ್ರಫಿ ನಡೆಸಿಕೊಟ್ಟರು ಡಾ. ಟಿ . ಶ್ರೀಧರ ಬಾಯರಿಯವರು ಕಾರ್ಯಕ್ರಮವನ್ನು ಸೊಗಸಾಗಿ ನಿರೂಪಿಸಿದರು.

 
 
 
 
 
 
 
 
 
 
 

Leave a Reply