ಜು.6: ತುಳುಕೂಟ ಉಡುಪಿ ವತಿಯಿಂದ “ಮದರೆಂಗಿದರಂಗ್”

ತುಳುಕೂಟ ಉಡುಪಿ(ರಿ) ವತಿಯಿಂದ ಇದೇ ಬರುವ ಜುಲೈ 6 ತಾರೀಕಿನಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ತುಳುನಾಡ ಬದುಕಿನ ವಿಶೇಷತೆಯನ್ನು ಸಾರುವ ತುಳು ಸಾಂಪ್ರದಾಯಿಕ ಸ್ಪರ್ಧೆಗಳು ನಡೆಯಲಿವೆ.ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮೇಲ್ಭಾಗದಲ್ಲಿರುವ ಜಗನ್ನಾಥ ಸಭಾಭವನದಲ್ಲಿ ನಡೆಯಲಿರುವ ಈ ಸ್ಪರ್ಧೆಗಳಲ್ಲಿ ಉಡುಪಿ ಜಿಲ್ಲಾ ಶಾಲಾ ಕಾಲೇಜು ಹಾಗೂ ಸಾರ್ವಜನಿಕರು ಭಾಗವಹಿಸುವಂತೆ ಕೋರಲಾಗಿದೆ.

ಈ ಕಾರ್ಯಕ್ರಮವನ್ನು ಮಲ್ಪೆ ಪರ್ಸೀನ್ ಮೀನುಗಾರರ ಸಂಘದ ಅಧ್ಯಕ್ಷರಾದ ಶ್ರೀ ನಾಗರಾಜ್ ಸುವರ್ಣ ಇವರು ಉದ್ಘಾಟನೆ ಮಾಡಲಿರುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ, ಉಡುಪಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕಿ ಶ್ರೀಮತಿ ಫರ್ಝಾನಾ ಎಮ್., ಮಣಿಪಾಲ ಆಶ್ಲೇಷ್ ಟೂರ್ಸ್ & ಟ್ರಾವೆಲ್ಸ್ ನ ಕೋ-ಫೌಂಡರ್ ಶ್ರೀಮತಿ ಶ್ರುತಿ ಗಣೇಶ್ ಶೆಣೈ, ಉದ್ಯಮಿ ಶ್ರೀಮತಿ ರಮಿತಾ ಶೈಲೇಂದ್ರ ಕಾರ್ಕಳ, ಸಮಾಜಸೇವಕರಾದ ಯು. ವಿಶ್ವನಾಥ ಶೆಣೈ, ಬಡಗಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ರಾಜೇಶ್ ಶೇರಿಗಾರ್, ಸಮಾಜಸೇವಕಿ ಶ್ರೀಮತಿ ಮಮತಾ ಪಿ. ಶೆಟ್ಟಿ, ತುಳುಕೂಟದ ಉಪಾಧ್ಯಕ್ಷೆ ಶ್ರೀಮತಿ ಮನೋರಮ ಶೆಟ್ಟಿ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ

ಸ್ಪರ್ಧೆಯ ವಿವರ:

1 ನೇ ತರಗತಿಯಿಂದ 5 ನೇ ತರಗತಿಯವರೆಗೆ

 1.ಪೀಂಪಿರಿ ಊದುವ ಸ್ಪರ್ಧೆ.2.ಹಲಸಿನ ಹಣ್ಣಿನ ಬೀಜದ ಸಿಪ್ಪೆ ತೆಗೆಯುವುದು.

6 ರಿಂದ 10 ನೇ ತರಗತಿಯ ಮಕ್ಕಳಿಗೆ 

1.ಮದರಂಗಿ ಸ್ಪರ್ಧೆ.2.ಔಷಧದ ಎಲೆಯ ಹೆಸರು ಬರೆಯುವುದು.3.ತೆಂಗಿನ ಗರಿ(ಒಲಿ) ಯಲ್ಲಿ ಆಟಿಕೆ ತಯಾರಿಸುವುದು.

ಕಾಲೇಜ್ ಮಕ್ಕಳಿಗೆ

1.ಮದರಂಗಿ ಸ್ಪರ್ಧೆ2.ಕೇಶಾಲಂಕಾರ 3. ಮುಂಡಾಸು ಕಟ್ಟುವ ಸ್ಪರ್ಧೆ 4.ಹೂ ಕಟ್ಟುವ ಸ್ಪರ್ಧೆ 

ಸಾರ್ವಜನಿಕರಿಗಾಗಿ

1.ಮದರಂಗಿ ಸ್ಪರ್ಧೆ 2. ಜಲ್ಲಿ ಬಿಡಿಸುವ ಸ್ಪರ್ಧೆ 3. ಬತ್ತಿ ಕಟ್ಟುವ ಸ್ಪರ್ಧೆ 4. ಹೂ ಜೋಡಣೆ ಸ್ಪರ್ಧೆಯು ನಡೆಯಲಿದೆ.

ಹಾಗೆಯೇ ಎಲ್ಲಾ ವಿಭಾಗದ ಮಕ್ಕಳಿಗಾಗಿ ತುಳು ರಸಪ್ರಶ್ನೆ ಮತ್ತು ಎಲ್ಲಾ ವಿಭಾಗದವರಿಗಾಗಿ ತುಳು ಲಿಪಿಯಲ್ಲಿ ಬರೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಎಂದು ತುಳುಕೂಟದ ಅಧ್ಯಕ್ಷರಾದ ಬಿ.ಜಯಕರ ಶೆಟ್ಟಿ ಇಂದ್ರಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಯಮಗಳು:

ಮದರಂಗಿ ಸ್ಪರ್ಧೆ ಸಾಂಪ್ರದಾಯಿಕವಾಗಿರುತ್ತದೆ.ಮಾರುಕಟ್ಟೆಯಲ್ಲಿ ಸಿಗುವ ಕೋನ್ ಬಳಸುವ ಹಾಗಿಲ್ಲ.ಮದರಂಗಿ ಸೊಪ್ಪನ್ನು ಅರೆದು ತರಬೇಕು.ಕಡ್ಡಿ ಮಾತ್ರ ಬಳಸತಕ್ಕದ್ದು.ಮದರಂಗಿ ಬಿಡಿಸಲು ನಿಮ್ಮ ಜೊತೆ ಒಬ್ಬರನ್ನು ಕರೆದುಕೊಂಡು ಬರಬೇಕು.ಒಂದು ಗಂಟೆಯ ಕಾಲಾವಕಾಶ ಇರುತ್ತದೆ.

ಬತ್ತಿ ಕಟ್ಟುವವರು ಹತ್ತಿ ಹಾಗೂ ಹೂ ಕಟ್ಟುವವರು ಹೂ ತರಬೇಕು.ಸಂಘಟಕರ ತೀರ್ಮಾನವೇ ಅಂತಿಮವಾಗಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9035483463.

 
 
 
 
 
 
 
 
 
 
 

Leave a Reply