Janardhan Kodavoor/ Team KaravaliXpress
23.4 C
Udupi
Saturday, February 4, 2023
Sathyanatha Stores Brahmavara

ತುಳುಕೂಟ ಉಡುಪಿ (ರಿ.)ವತಿಯಿಂದ ಶಿರ್ವದಲ್ಲಿ ಜೋಕ್ಲೆಗಾದ್ ತುಳು ನಡಕೆ ಕಾರ್ಯಕ್ರಮ

ಶಿರ್ವ: ರಾಜ್ಯಪ್ರಶಸ್ತಿ ವಿಜೇತ ತುಳುಕೂಟ ಉಡುಪಿ (ರಿ.) ವತಿಯಿಂದ ಶಿರ್ವ ವಿದ್ಯಾವರ್ಧಕ ಸಂಘದ ಸಹಯೋಗ ದೊಂದಿಗೆ   ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಜೋಕ್ಲೆಗಾದ್ ತುಳು ನಡಕೆ ವಿವಿಧ ಸ್ಫರ್ಧಾ
ಕಾರ್ಯಕ್ರಮ ಮಾ.28ರಂದು ಬೆಳಗ್ಗೆ 9.30ಕ್ಕೆ ಶಿರ್ವ ಪದವು ಹಿಂದೂ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಲಿದೆ.

ಅರಮನೆಯ ಮುಖ್ಯಸ್ಥ ಜಿನೇಶ್ ಬಲ್ಲಾಳ್ ಮತ್ತು ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ ಅವರು ಜಂಟಿಯಾಗಿ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ ಭಾಸ್ಕರ ಶೆಟ್ಟಿ, ಸಮಾಜ ಸೇವಕ ಸುರೇಶ್ ಶೆಟ್ಟಿ ಗುರ್ಮೆ, ಶಿರ್ವ ಸಿಎ ಬ್ಯಾಂಕ್ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ, ಬ್ರಹ್ಮಾವರ ನ್ಯೂ ಕರ್ನಾಟಕ ಬಿಲ್ರ‍್ಸ್ ಸಂಸ್ಥೆಯ ದೀಪಾ ಚೇತನ್ ಕುಮಾರ್ ಶೆಟ್ಟಿ, ಕಾಪು ವಲಯ ಸೌಂದರ್ಯ ತಜ್ಞೆಯರ ಸಂಘದ ಅಧ್ಯಕ್ಷೆ
ಜೆಸಿಂತ ಎಸ್.ಕೊರ್ಡ , ಉಡುಪಿ ರಾಮರಕ್ಷಾ ಸೇವಾ ಟ್ರಸ್ಟ್ ಅಧ್ಯಕ್ಷ ರಾಮ್ ವಿ.ಕುಂದರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಈ ಸಂದರ್ಭ ಅಲೆವೂರು ಲಕ್ಷ್ಮೀ ಶೇರಿಗಾರ್ತಿ ಅವರಿಗೆ ದೆಂದೂರು ದಿ.ಕೊಲ್ಲು ಕೆ.ಶೆಟ್ಟಿ ಸ್ಮರಣಾರ್ಥ ಪಾಡ್ದನ ಪ್ರಶಸ್ತಿ
ನೀಡಲಾಗುವುದು. ಹಾಗೂ ಶಿರ್ವ ರೋಟರಿ ಸಂಸ್ಥೆಯ ರೆಹಮತ್ತುಲ್ಲಾ ಖಾದರ್, ಹಿರಿಯ ಬರಹಗಾರ ವಸಂತ ಎನ್. ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು. ಸಂಜೆ 3.45ಕ್ಕೆ ಉಡುಪಿ ತುಳುಕೂಟದ ಅಧ್ಯಕ್ಷ ಬಿ ಜಯಕರ್ ಶೆಟ್ಟಿ ಅವರ ಅಧ್ಯಕ್ಷತೆ ಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.

ಶಿರ್ವ ವಿದ್ಯಾವರ್ಧಕ ಸಂಘದ ಸಂಚಾಲಕ ವಿ.ಸುಬ್ಬಯ್ಯ ಹೆಗ್ಡೆ, ಅನಿವಾಸಿ ಭಾರತೀಯ ಉದ್ಯಮಿ ಕಳತ್ತೂರು ಶೇಖರ್
ಶೆಟ್ಟಿ, ಕಾಪು ವೃತ್ತ ನಿರೀಕ್ಷಕ ಪ್ರಕಾಶ್, ತುಳು ರಂಗಭೂಮಿ ನಟ ಮರ್ವಿನ್ ಶಿರ್ವ, ಸಮಾಜ ಸೇವಾ ವೇದಿಕೆ ಅಧ್ಯಕ್ಷ ಸಂಚಾಲಕ ದಿವಾಕರ್ ಡಿ.ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಜೋಕ್ಲೆಗಾದ್ ತುಳು ನಡಕೆ ಕಾರ್ಯಕ್ರಮದ ಸಂಚಾಲಕ ದಯಾನಂದ ಕೆ.ಶೆಟ್ಟಿ ದೆಂದೂರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!