ಮೂರು ದಿನಗಳ ಬ್ಯಾಟರಿ ಚಾಲಿತ ಉಚಿತ ಹ್ಯಾಂಡ್ ಫಿಟ್‌ಮೆಂಟ್ ಶಿಬಿರ ಉದ್ಘಾಟನೆ

ಮೂರು ದಿನಗಳ ಬ್ಯಾಟರಿ ಚಾಲಿತ ಉಚಿತ ಹ್ಯಾಂಡ್ ಫಿಟ್‌ಮೆಂಟ್ ಶಿಬಿರದ ಉದ್ಘಾಟನೆಯು ಮಣಿಪಾಲದ ರೋಟರಿ ಕ್ಲಬ್‌ನಲ್ಲಿ ಭಾನುವಾರ 24 ರಂದು ನಡೆಯಿತು. ಡಾ.ಗೌರಿ ನಿಕಟಪೂರ್ವ ಜಿಲ್ಲಾ ಗವರ್ನರ್ ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು.

 ಶ್ರೀ ಪ್ರಶಾಂತ್ ಭಟ್ ಸಿಟಿಒ ಮಣಿಪಾಲ ಡಾಟ್ ನೆಟ್, ಶ್ರೀಮತಿ ಪ್ರೇಮಲೀಲಾ ಭಟ್ ಛೇರ್ಮನ್ ಮಣಿಪಾಲ್ ಡಾಟ್ ನೆಟ್, ಶ್ರೀಮತಿ ಸಂಧ್ಯಾ ಕಾಮತ್ ಆಭರಣ ಗ್ರೂಪ್ ಉಡುಪಿ, ಶ್ರೀಮತಿ ರತ್ನ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ, ಡಾ.ಗಿರಿಜಾ ರಾವ್, ರೋ. ಶ್ರೀಪತಿ ಅಧ್ಯಕ್ಷರು ರೋಟರಿ ಕ್ಲಬ್ ಮಣಿಪಾಲ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಮಣಿಪಾಲ,ಇನಾಲಿ ಫೌಂಡೇಶನ್ ಮತ್ತು ರೋಟರಿ ಕ್ಲಬ್ ಪೂನಾ ಡೌನ್ ಟೌನ್ ಸಹಯೋಗದಲ್ಲಿ ಈ ಶಿಬಿರ ನಡೆಯುತ್ತಿದ್ದು ಮೊದಲ ದಿನ 88 ಕ್ಕೂ ಹೆಚ್ಚು ಜನರು ಪ್ರಯೋಜನ ಪಡೆದರು. ಇನ್ನೆರಡು ದಿನಗಳಲ್ಲಿ 250ಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದೆ.

 
 
 
 
 
 
 
 
 
 
 

Leave a Reply