ಕಲಾ ಚಟುವಟಿಕೆಗಳ “ಮಕ್ಕಳ ಮೇಳ”

ಕಲ್ಯಾಣಿ ಕಲಾಕೇಂದ್ರ(ರಿ.) ಸುಬ್ರಹ್ಮಣ್ಯ ನಗರ, ಉಡುಪಿ ಮತ್ತು ಅರಿತೋಡು ಶ್ರೀ ಜನಾರ್ದನ ಸುಬ್ರಹ್ಮಣ್ಯ ದೇವಸ್ಥಾನ (ಸೋದೆ ಶ್ರೀ ವಾದಿರಾಜ ಮಠ ಉಡುಪಿ )ಇವರ ಸಹಯೋಗದಲ್ಲಿ 8 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಮೇ ತಿಂಗಳ ದಿನಾಂಕ 20 ಮತ್ತು 21ರಂದು ಬೆಳಿಗ್ಗೆ 9-30 ರಿಂದ ಸಂಜೆ 5 -30 ರವರೆಗೆ ವಿವಿಧ ಕಲಾ ಚಟುವಟಿಕೆಗಳಿಂದ ಕೂಡಿದ ” ಮಕ್ಕಳ ಮೇಳ ” ಶಿಬಿರವು ಅರಿತೋಡು ಶ್ರೀ ಜನಾರ್ದನ ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಜೋತಿಷ್ಯ ವಿದ್ವಾನ್ ಶ್ರೀ ಶ್ರೀಕಾಂತ ಉಪಾಧ್ಯ ಸುಬ್ರಹ್ಮಣ್ಯನಗರ ಇವರು ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿ ಮಕ್ಕಳಿಗೆ ಶುಭವನ್ನು ಹಾರೈಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಬಂದಿದ್ದ ಶ್ರೀ ಬಾಸುಮ ಕೊಡಗು ಇವರು ಕ್ರಾಫ್ಟ್, ಸುದರ್ಶನ ಆಚಾರ್ಯ ಮುದರಂಗಡಿ ಇವರು ಮಿಮಿಕ್ರಿ, ಪ್ರಥಮ್ ಕಾಮತ್ ಕಟಪಾಡಿ ಇವರು ಜಾದೂ ಪ್ರದರ್ಶನ, ಶ್ರೀಮತಿ ಮಂಜುಳಾ ವಿ ಪ್ರಸಾದ್ ರವರು ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಚಟುವಟಿಕೆ,ಶ್ರೀ ಉಮಾಶಂಕರ್ ಸುಳ್ಯ ಇವರು ಮೋಜಿನಗಣಿತ, ಶ್ರೀಮತಿ ಪ್ರಿಯಂವದಾ ಐತಾಳ್ ಕರಂಬಳ್ಳಿ ಇವರು ಸರಳ ಚಿತ್ರಕಲೆ, ಶ್ರೀಮತಿ ಸುನೀತಾ ಚೈತನ್ಯ ಸುಬ್ರಹ್ಮಣ್ಯ ನಗರ ಮತ್ತು ಬಳಗದವರು ಸರಳ ಯೋಗಾಸನಗಳನ್ನು ಮಾಡಿಸಿದರು. ಕಲಾ ಕೇಂದ್ರದ ಕೋಶಾಧಿಕಾರಿ ಆದ್ಯತಾ ಭಟ್ ಇವರು ಶಿಬಿರದ ಎರಡೂ ದಿನಗಳ ಚಟುವಟಿಕೆಗಳನ್ನು ಸಂಯೋಜಿಸಿ ಮಕ್ಕಳಿಗೆ ಮನರಂಜನಾ ಚಟುವಟಿಕೆಗಳನ್ನು ಮಾಡಿಸುತ್ತಾ ಶಿಬಿರವನ್ನು ನಿರ್ದೇಶಿಸಿದರು. 

ಶಿಬಿರದ ಅಂತ್ಯದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ವಿದ್ವಾನ್ ಶ್ರೀ ಗೋಪಾಲಕೃಷ್ಣ ಉಪಾಧ್ಯ ಬನ್ನಂಜೆ, ಶ್ರೀ ಮುರಳಿ ಕಡೇಕಾರ್ ರ್ಕಾರ್ಯದರ್ಶಿ ಯಕ್ಷಗಾನ ಕಲಾರಂಗ ಉಡುಪಿ, ಶ್ರೀ ಬಾಸುಮ ಕೊಡಗು ಇವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಕ್ಕಳು ಮತ್ತು ಪೋಷಕರಿಗೆ ಸೂಕ್ತ ಹಿತನುಡಿಗಳನ್ನಾಡಿದರು ಮತ್ತು ಶಿಬಿರದ ಆಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಲಾಕೇಂದ್ರದ ಅಧ್ಯಕ್ಷರಾದ ಶ್ರೀ ನಿರಂಜನ್ ಭಟ್ ರವರು ಕಲಾಕೇಂದ್ರದ ಚಟುವಟಿಗೆಗಳ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿ, ಅತಿಥಿಗಳನ್ನು ಸ್ವಾಗತಿಸಿದರು. ಕಲಾಕೇಂದ್ರದ ಕಾರ್ಯದರ್ಶಿ ಶ್ರೀ ಸುಬ್ರಹ್ಮಣ್ಯ ಜೋಶಿಯವರು ಶಿಬಿರದ ಚಟುವಟಿಕೆಗಳ ವರದಿಯನ್ನು ವಾಚಿಸಿದರು. ಮಕ್ಕಳು ಶಿಬಿರದ ಅನುಭವಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಲಾಕೇಂದ್ರದ ಹಿರಿಯ ಸದಸ್ಯರಾದ ಶ್ರೀ ವೆಂಕಟಕೃಷ್ಣಭಟ್ ಮತ್ತು ಸದಸ್ಯರಾದ ಶ್ರೀಮತಿ ಸಮತಾರವರು ಶಿಬಿರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಕೊನೆಯಲ್ಲಿ ಶಿಬಿರದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಅಧ್ಯಕ್ಷರು ವಂದನೆ ಗೈದರು. ಕಲಾಕೇಂದ್ರದ ಸದಸ್ಯರಾದ ಶ್ರೀ ವಸಂತ ಪಾಲನ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

 
 
 
 
 
 
 
 
 
 
 

Leave a Reply