ಮಣಿಪಾಲ ಪೋಲಿಸ್ ನಿರೀಕ್ಷಕ ಮಂಜುನಾಥ ಗೌಡರಿಗೆ ಲಯನ್ಸ್ ಗೌರವ ಸದಸ್ಯತ್ವ ಪ್ರದಾನ

ಅಂತರ್ ರಾಷ್ಟ್ರೀಯ ಲಯನ್ಸ್ ಸಂಸ್ಥೆ ಯ ಅಂಗವಾದ ಮಣಿಪಾಲ ವ್ಯಾಲಿ ಲಯನ್ಸ್ ಕ್ಲಬ್ ತನ್ನದೇ ಆದ ವೈಶಿಷ್ಟ್ಯ ಪೂರ್ಣ ಚಟುವಟಿಕೆ ಗಳಿಂದ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಸಮಾಜಕ್ಕೆ ಗಣನೀಯ ಸೇವೆಯನ್ನು ಸಲ್ಲಿಸಿದವರನ್ನು, ಸಮಾಜ​ ​ಸೇವಕರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಮಾಡುತ್ತಾ ಬಂದಿದೆ. 
ಸಾರ್ವಜನಿಕ ವಲಯದಲ್ಲಿ ತಮ್ಮ ಕರ್ತವ್ಯನಿಷ್ಠೆ ಹಾಗೂ ಕಾರ್ಯ​ ​ತತ್ಪರತೆಯಿಂದ​ಜನಪ್ರಿಯರಾದ   ಮಣಿಪಾಲ ಪೋಲಿಸ್ ಠಾಣೆಯ ದಕ್ಷ, ಪ್ರಾಮಾಣಿಕ ಪೋಲಿಸ್ ನಿರೀಕ್ಷಕರಾದ  ಮಂಜುನಾಥ ಗೌಡ ಅವರನ್ನು  ಲಯನ್ಸ್ ಸಂಸ್ಥೆಯ ಗೌರವ ಸದಸ್ಯ ರನ್ನಾಗಿ  ಮಣಿಪಾಲ ವ್ಯಾಲಿ ಲಯನ್ಸ್ ಕ್ಲಬ್ ವತಿಯಿಂದ ನೇಮಿಸಲಾಗಿದೆ.

​ ಈ ಸಂದರ್ಭದಲ್ಲಿ ​ಕ್ಲಬ್‌ ನ ಅಧ್ಯಕ್ಷ ಲಯನ್ ಡಾ. ಸಂದೀಪ್ ಚೌಹಾಣ್, ಸ್ಥಾಪಕ ಅಧ್ಯಕ್ಷೆ ಲಯನ್ ಸಾಧನಾ ಕಿಣಿ​,​ ಕೋಶಾಧಿಕಾರಿ ಭೂಮಿಕಾ ಪಹುಜಾ, ಸ್ಥಾಪಕ ಸದಸ್ಯ ಲಯನ್ ರಾಜು ಪಹುಜಾ, ಜಿಲ್ಲಾ ವರ್ಚುವಲ್ ಮೀಟ್ ಸಂಪುಟ ರಾಯಭಾರಿ ಲಯನ್ ಕಿರಣ್ ರಂಗಯ್ಯ ಮುಂತಾದವರು ​ಉಪಸ್ಥಿತರಿದ್ದರು 

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply