ಹೇ ಸಾರಿಗೆ ಎಂದು ನೀ ಬರುವೆ ಸರಿ ದಾರಿಗೆ?!

ಸಾರಿಗೆ ಸಂಪರ್ಕ ಇದು ಹೇಗೆ ಮನುಷ್ಯನ ಅಂಗಾಂಗಗಳಿಗೆ ಪೋಷಕಾಂಶಗಳನ್ನು ಸಾಗಿಸಲು ನರಮಂಡಲಗಳಿವೆಯೋ, ಹಾಗೇಯೇ ಈ ಸಾರಿಗೆಗಳು ದೇಶದ ಉದ್ದಗಲಕ್ಕೆ ಜನಸಂಪರ್ಕ, ಪೇಟೆ ಪಟ್ಟಣಗಳ ಸಂಪರ್ಕ ಸಾಧಿಸಲು ಸಾಧನವಾಗಿದೆ. 
ಕೊರೋನ ಕಾಲದ ಮೊದಲು ರಸ್ತೆ ಸಾರಿಗೆಗಳ ವ್ಯವಸ್ಥೆ ಹೇಗಿತ್ತು ನೀವೇ ಒಮ್ಮೆ ಊಹಿಸಿ, ಸೆಕೆಂಡ್ ಸೆಕೆಂಡ್ ಗಳು ಒಂದೊಂದು ಬಸ್ ಗೆ ತುಂಬಾ ಪ್ರಾಮುಖ್ಯತೆ ಪಡೆದಿತ್ತು, ಅದರ ನಡುವೆಯೂ ಸಣ್ಣಪುಟ್ಟ ಬೈಗುಳಗಳು, ಒಂದಕ್ಕೊಂದು ಪೈಪೋಟಿಗಳು, ​ಬಸ್ ನಲ್ಲಿ ಕುಳಿತ ಪ್ಯಾಸೆಂಜರ್ ಜೀವ ಕೈಯಲ್ಲಿ ಇರೋತರ ಭಯ, ಎಷ್ಟೋ ಬಸ್ ಗಳಂತು ಆಯಾಯಾ ಸ್ಟಾಪ್ ಗಳಿಗೆ ಸರಿಯಾದ ಸಮಯದಲ್ಲಿ ಬಂದು, ​ಆ ಬಸ್ಗೆ ಅದೇ ಸಮಯದಲ್ಲೇ ಅದರ ಹೆಸರು ಹೀಗೆ ಕರಿತಾ ಇದ್ವಿ, ಏಳು ಕಾಲ್ ಮಿನಿ, ಏಳು ಮುಕ್ಕಾಲು ಮಿನಿ ಅಂತ ಇಲ್ಲಿನ ಉದಾಹರಣೆ ಆಗಿನ ಸಹಕಾರ ಸಾರಿಗೆ ಬಸ್ ಬಗ್ಗೆ ಹೇಳಿದ್ದು.​ ​

ಹೀಗೆ ರಸ್ತೆ ಸಾರಿಗೆಗಳು ಅಗತ್ಯ ಕೆಲಸಗಳಿಗೆ ತುಂಬಾ ಸಹಕಾರಿಯಾಗಿರುತ್ತಿದ್ದವು. ಅಗತ್ಯ ಅಂದರೆ ವಸ್ತುಗಳ ಖರೀದಿಗೆ ಹೋಗಲು, ಆಸ್ಪತ್ರೆಗಳಿಗೆ ತೆರಳಲು, ಶುಭ ಕಾರ್ಯಕ್ರಮಗಳಿಗೆ, ಮೀಟಿಂಗ್ ಗಳಿಗೆ, ಪೇಟೆ ಪಟ್ಟಣಗಳಿಗೆ, ಶಾಲಾ ಕಾಲೇಜುಗಳಿಗೆ, ಬ್ಯಾಂಕ್ ಇನ್ನಿತರ ವ್ಯವಹಾರಗಳಿಗೆ ತೆರಳಲು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಕಾರ್ಯನಿರ್ವಾಹಿಸುತ್ತಿತ್ತು.

ಆದರೆ, ಈ ಕ್ರೂರಿ ಕೊರೋನ ಇದಕ್ಕೆಲ್ಲ ಸಡನ್ ಬ್ರೇಕ್ ಹಾಕಿ, ಸಾರಿಗೆ ವ್ಯವಸ್ಥೆಯ ಕ್ಷೇತ್ರಕ್ಕೆ ಬರ ಸಿಡಿಲು ಹೊಡೆದಂತಾಗಿತು. ಎಂಬತ್ತು, ನೂರು ಬಸ್ ಗಳ ಮಾಲಿಕರುಗಳು ತಮ್ಮ ತಮ್ಮ ಮನೆಯಂಗಳ, ಪಕ್ಕದ ಖಾಲಿ ಮೈದಾನ, ಕಚ್ಚಾ ರಸ್ತೆಗಳ ಇಕ್ಕೆಲ ಗಳಲ್ಲಿ ಸರಿ ಸುಮಾರು ಮಾರ್ಚ್ 22ರಿಂದ ಮೊದಲುಗೊಂಡು ಇಲ್ಲಿಯವರೆಗೆ ನಿಲ್ಲಿಸಿದ ಎಷ್ಟೋ ಬಸ್ ಗಳು ಕಾಣಸಿತ್ತವೆ.  ಕೆಲವೇ ಕೆಲವು ಬಸ್ ಗಳು ಮಾತ್ರ ರಸ್ತೆ ಗಿಳಿದಿವೆ,ಅದರಲ್ಲೂ ಸಾಮಾಜಿಕ ಅಂತರ, ಸೀಟಿಗೊಬ್ಬ, ಸ್ಯಾನಿಟೈಸರ್ ನ ದಿನ ಬಳಕೆ ಹೀಗೆ ಅನೇಕ ನಿಬಂಧನೆಗಳಿಂದ ಬಸ್ ಮಾಲಿಕನೂ ಮೀನಾಮೇಶ ಎಣಿಸಿ ಹಾಕಿದ ಡೀಸೆಲ್‌ ಗಾದ್ರೂ ಗಿಟ್ಟಿಸಿ ಬೇಕೆಂದು ಓಡಿಸುತ್ತಾ ಇದ್ದಾರೆ. 

ಹೀಗಿರುವಾಗ ಮೊನ್ನೆ ವಾಟ್ಸ್ ಆಪ್ ಲಿ ನೋಡಿದಂತೆ ಕಾಟು ಬಳ್ಳಿಗಳು ಬಸ್ ಹಿಂಬದಿಯ ಮೆಟ್ಟಿಲುಗಳಿಗೆ ಹಬ್ಬಿ ಬಸ್ ಗಳ ಶಾಶ್ವತ ಬಂದನ್ನು ಎತ್ತಿ ತೋರುವಂತಿತ್ತು. ಇನ್ನೂ ಕೆಲವು ಬಸ್ ನಿಂತಲ್ಲೇ ನಿಂತು ಮೇಲ್ಹೊದಿಕೆಯಂತೆ ಟಾರ್ಪಲ್ ಹಾಸಿದ್ದು ಉಂಟು. ಇದೇ ತರ ಮುಂದುವರಿದಲ್ಲಿ ಮಾಲಿಕ ಅನುಭವಿಸೋ ನಷ್ಟ ಒಂದೆಡೆಯಾದರೆ, ಇನ್ನು ಬಸ್ ಚಾಲಕ, ನಿರ್ವಾಹಕ, ಕ್ಲೀನರ್, ಕಟ್ಟೆ ಕಂಡಕ್ಟರ್, ಟೈಮ್ ಕೀಪರ್, ಬಸ್ ಮೆಕಾನಿಕ್ ಹೀಗೆ ಒಂದೇ ಎರಡೇ ಇವರೆಲ್ಲರ ಹೊಟ್ಟೆಗೆ ತಣ್ಣೀರುಬಟ್ಟೆಯೇ ಸರಿ.​

ಓ ದೇವಾ ಇದಕೆಲ್ಲ  ಪರಿಹಾರ ತೋರಿಸು, ಸಮಸ್ಯೆ ಸುಧಾರಿಸು, ಸಾರಿಗೆಯನ್ನು  ಸರಿದಾರಿಗೆ ತರಿಸು.

 
 
 
 
 
 
 
 
 
 
 

Leave a Reply