Janardhan Kodavoor/ Team KaravaliXpress
24.6 C
Udupi
Friday, December 2, 2022
Sathyanatha Stores Brahmavara

ಬಂಟಕಲ್ಲು- ಇಂಟರ‍್ಯಾಕ್ಟ್ ವಲಯ ಅಧಿವೇಶನ ಉದ್ಘಾಟನೆ

ಶಿರ್ವ:-ಫ್ರೌಢ ಹಂತದಲ್ಲೇ ರೋಟರಿ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಸಮರ್ಥ ನಾಯಕತ್ವದ ಜೊತೆಗೆ ಪ್ರತಿಭಾ ವಿಕಸನಕ್ಕೆ ಇಂರ‍್ಯಾಕ್ಟ್ ಉತ್ತಮ ವೇದಿಕೆಯಾಗಿದೆ ಎಂದು ರೋಟರಿ ಜಿಲ್ಲಾ ವಲಯ ೫ರ ಸಹಾಯಕ ಗವರ್ನರ್ ಡಾ.ಶಶಿಕಾಂತ್ ಕರೀಂಕ ನುಡಿದರು.
ಅವರು ರವಿವಾರ ಬಂಟಕಲ್ಲು ರೋಟರಿ ಸಭಾಭವನದಲ್ಲಿ ಶಿರ್ವ ರೋಟರಿ ಪ್ರಾಯೋಜಕತ್ವದಲ್ಲಿ ಜರುಗಿದ ಇಂರ‍್ಯಾಕ್ಟ್ ವಲಯ ಅಧೀವೇಶನ ಉದ್ಘಾಟಿಸಿ ಮಾತನಾಡಿದರು. ಇಂರ‍್ಯಾಕ್ಟ್ ವಲಯ ೫ರ ಸಭಾಪತಿ ನ್ಯಾಯವಾದಿ ಜಯಕೃಷ್ಣ ಆಳ್ವ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಲಯಸೇನಾನಿಗಳಾದ ವಿಘ್ನೇಶ್ ಶೆಣೈ ಬೆಳ್ಮಣ್, ಸುವರ್ಣ ತುಕಾರಾಮ್ ನಾಯಕ್ ಕಾರ್ಕಳ, ಬಾಲಕೃಷ್ಣ ಆಚಾರ್ಯ ಕಾಪು ಶುಭಾಶಂಸನೆಗೈದರು. ಸಂಪನ್ಮೂಲವ್ಯಕ್ತಿಗಳಾಗಿ ಕೃಷ್ಣ ಕಾಂಚನ್ ಕುಂದಾಪುರ, ಬಿ.ಪುಂಡಲೀಕ ಮರಾಠೆ ಭಾಗವಹಿಸಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಶಿರ್ವ ರೋಟರಿ ಅಧ್ಯಕ್ಷ ಡಾ.ವಿಠಲ್ ನಾಯಕ್ ವಹಿಸಿದ್ದರು. ವೇದಿಕೆಯಲ್ಲಿ ಇಂರ‍್ಯಾಕ್ಟ್ ಸಭಾಪತಿಗಳಾದ ವಿಷ್ಣುಮೂರ್ತಿ ಸರಳಾಯ, ಹೊನ್ನಯ್ಯ ಶೆಟ್ಟಿಗಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಇಂರ‍್ಯಾಕ್ಟ್ ಜಿಲ್ಲಾ ಛರ‍್ಮನ್ ಆಲನ್ ಲೂವಿಸ್ ಉಪಸ್ಥಿತರಿದ್ದರು. ಇಂರ‍್ಯಾಕ್ಟ್ ಅಧ್ಯಕ್ಷೆ ಕಾವ್ಯಾ ಪಡುಕಳತ್ತೂರು ಮಾತನಾಡಿದರು. ಇಂರ‍್ಯಾಕ್ಟರ್ ಶರಣ್ಯಾ ಪಡುಬೆಳ್ಳೆ ಪ್ರಾರ್ಥಿಸಿದರು. ವಿಲಿಯಮ್ ಮಚಾದೊ ನಿರೂಪಿಸಿದರು. ರೋಟರಿ ಕಾರ್ಯದರ್ಶಿ ದಿನೇಶ್ ಕುಲಾಲ್ ಧನ್ಯವಾದವಿತ್ತರು. ವಲಯದ ವಿವಿಧ ಶಾಲೆಗಳಿಂದ ಇಂರ‍್ಯಾಕ್ಟ್ ವಿದ್ಯಾರ್ಥಿಗಳು, ಶಿಕ್ಷಕ ಸಂಯೋಜಕರು ಪಾಲ್ಗೊಂಡಿದ್ದರು.

ನಂತರ ಜರುಗಿದ ರೋಟರಿ ವಲಯ ೫ರ ಎರಡನೆಯ ಸಮಾವೇಶದ ನೇತೃತ್ವವನ್ನು ವಲಯ ಸಹಾಯಕ ಗವರ್ನರ್ ಡಾ.ಶಶಿಕಾಂತ್ ಕರೀಂಕ ವಹಿಸಿದ್ದರು. ಈ ಸಂದರ್ಭದಲ್ಲಿ ಶಿರ್ವ ರೋಟರಿಗೆ ನೂತನ ಸದಸ್ಯರಾಗಿ ಬಂಟಕಲ್ಲು ರಾಮಕೃಷ್ಣ ಶರ್ಮಾ, ಗ್ರೇಸಿ ಕರ್ಡೋಜಾ, ಡೇವಿಡ್ ಫೆರ್ನಾಂಡಿಸ್, ಸಿಎ.ಈವನ್ ಜೂಡ್ ಡಿಸೋಜರವರನ್ನು ಸದಸ್ಯತನ ಅಭಿವೃದ್ಧಿ ಸಮಿತಿಯ ಜಿಲ್ಲಾ ಛರ‍್ಮನ್ ಕೃಷ್ಣ ಕಾಂಚನ್ ಪ್ರಮಾಣವಚನ ಬೋಧಿಸುವ ಮೂಲಕ ಸ್ವಾಗತಿಸಿದರು. ನೂತನ ಸದಸ್ಯರನ್ನು ಮೆಲ್ವಿನ್ ಡಿಸೋಜ, ಅಮಿತ್ ಅರಾನ್ಹಾ ಪರಿಚಯಿಸಿದರು.

ಮಾಜಿ ವಲಯ ಸಾಯಕ ಗವರ್ನರ್‌ಗಳಾದ ಕೆ.ಸೂರ್ಯಕಾಂತ್ ಶೆಟ್ಟಿ, ಡಾ.ಅರುಣ್ ಹೆಗ್ಡೆ, ನಿಯೋಜಿತ ವಲಯ ಸಹಾಯಕ ಗವರ್ನರ್ ಶೈಲೇಂದ್ರ ರಾವ್ ಕಾರ್ಕಳ ಮಾಹಿತಿ ನೀಡಿದರು. ಶಿರ್ವ ರೋಟರಿ ಅಧ್ಯಕ್ಷ ಡಾ.ವಿಟ್ಠಲ್ ನಾಯಕ್, ವಲಯ ಸೇನಾನಿಗಳಾದ ವಿಘ್ನೇಶ್ ಶೆಣೈ, ಸುವರ್ಣ ತುಕಾರಾಮ್ ನಾಯಕ್, ರೋಟರಿ ಕಾರ್ಯದರ್ಶಿ ದಿನೆಸ್ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹೊನ್ನಯ್ಯ ಶೆಟ್ಟಿಗಾರ್ ಧನ್ಯವಾದವಿತ್ತರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!