ಜ್ಞಾನಾರ್ಜನೆಯ ಮೂಲಕ ಸಮಾಜಕ್ಕೆ ಮಾದರಿ ಪ್ರಜೆಯಾಗಿ: ಶ್ರೀಧರ ಮೊಯ್ಲಿ

ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ.) ಮಂಗಳೂರು ಇದರ ಅಧ್ಯಕ್ಷರಾದ ಕೆ, ಶ್ರೀಧರ ಮೊಯ್ಲಿ ಇವರು ಹಿರಿಯಡ್ಕ ಉಪಸಂಘದಲ್ಲಿ ಜರುಗಿದ ಶ್ರೀ ಸತ್ಯ ನಾರಾಯಣ ಪೂಜೆ, ವಿದ್ಯಾರ್ಥಿ ವೇತನ, ಸನ್ಮಾನ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಘ ಸಂಸ್ಥೆಗಳು ನೀಡುವ ಶೈಕ್ಷಣಿಕ ಸೌಲಭ್ಯಗಳನ್ನು ಪಡೆದು ಜ್ಞಾನಾರ್ಜನೆಯ ಮೂಲಕ ಸಮಾಜಕ್ಕೆ ಮಾದರಿ ಪ್ರಜೆಯಾಗಿ ನಮ್ಮ ಸಂಸ್ಕೃತಿಯನ್ನು ಬೆಳೆಸಿ ಉಳಿಸಬೇಕೆಂದು ಹೇಳಿದರು.

ಉಪಸಂಘದ ಅಧ್ಯಕ್ಷರಾದ ಶ್ರೀ ರಾಜೇಂದ್ರ ಕುಮಾರ್ ದೇವಾಡಿಗ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಅಶೋಕ್ ಮೊಯ್ಲಿ ಉದ್ಯಮಿ ಮಂಗಳೂರು, ಶ್ರೀ ಬಿ ಜಿ ಲಕ್ಷ್ಮಿಕಾಂತ್ ಬೆಸ್ಕೂರ್ ಮಾಲಕರು ಕೃಷ್ಣ ಪೆಟ್ರೋಲಿಯಂ ಕಡಿಯಾಳಿ, ಗೌರವ ಅತಿಥಿಗಳಾಗಿ ಶ್ರೀ H ಮೊಹಿದಿನ್ ಎಚ್ ಎಂ ಬ್ರದರ್ಸ್ ಹಿರಿಯಡ್ಕ ಹಾಗು ಶ್ರೀ ಸುಧಾಕರ ಕುಲಾಲ್ ಪಟ್ಲಾ ಕಾರ್ಯನಿವಹಣಾಧಿಕಾರಿ ಕುಂಬಾರ ಗುಡಿಕೈಗಾರಿಕೆ ಸಹಕಾರ ಸಂಘ ಪೆರ್ಡೂರು ಇವರುಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ ಗಣ್ಯರುಗಳಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಶಾಲಾ ಪುಸ್ತಕ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ವೈದ್ಯಕೀಯ ನೆರವು ವಿತರಿಸಲಾಯಿತು. ನಂತರ ಮಯೂರ ತಂಡದಿಂದ ನೃತ್ಯ ಹಾಗೂ ಕೃಷ್ಣ ತಂಡದಿಂದ ಆರ್ಕೆಷ್ಟ್ರಾ ಕಾರ್ಯಕ್ರಮ ಜರಗಿತು.

ಶ್ರೀಮತಿ ಲತಾ, ಕು| ರಚನಾ ಇವರ ಪಾರ್ಥನೆಯೊಂದಿಗೆ . ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಎಚ್ ಗಣೇಶ್ ಸೇರಿಗಾರ್ ರವರು ಪ್ರಾಸ್ತಾವಿಕ ಭಾಷಣವನ್ನು ನೆರವೇರಿಸಿ, ಕಾರ್ಯದರ್ಶಿ ಶ್ರೀ ರಮೇಶ್ ಸೇರಿಗಾರ್ ಧನ್ಯವಾದ ಸಮರ್ಪಿಸಿದರು.

ಪೂರ್ಣಿಮಾ ದಿನೇಶ್ ಹಾಗೂ ಶತ ದೇವಾಡಿಗ ಇವರು ಕಾರ್ಯಕ್ರಮ ನಿರೂಪಿಸಿ, ಜ್ಯೋತಿ ಕುಮಾರ್, ಆಶಾ ರಮೇಶ್, M ಕುಸುಮ ಸದಾಶಿವ್ ಇವರುಗಳು ಸಹಕರಿಸಿದರು.

 
 
 
 
 
 
 
 
 
 
 

Leave a Reply