ಫೆ:25,ಮುಚ್ಲುಕೋಡುನಲ್ಲಿ’ ಸಂಸ್ಕೃತಿ ಸಂಭ್ರಮ -2024′ ಸ್ಪರ್ಧಾ ಕಾರ್ಯಕ್ರಮ..

ಚಿಟ್ಪಾಡಿ ವಲಯ ಬ್ರಾಹ್ಮಣ ಸಭಾದ ವಿಂಶತಿ ವರ್ಷದ ಪ್ರಯುಕ್ತ “ಸಂಸ್ಕೃತಿ ಸಂಭ್ರಮ-2024” ಕಾರ್ಯಕ್ರಮವು ಫೆ:25 ರ ಭಾನುವಾರ ಉಡುಪಿ ಮುಚ್ಲುಕೋಡು ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ಜರುಗಲಿದೆ.

ಉಡುಪಿ ತಾಲೂಕಿನ ಆಯ್ದ ಬ್ರಾಹ್ಮಣ ವಲಯಗಳ ತಂಡಗಳಿಗೆ ಸಮೂಹ ಗೀತೆ, ಸಮೂಹ ನೃತ್ಯ, ಆಶುಭಾಷಣ, ರಂಗೋಲಿ ಮತ್ತು ಛದ್ಮವೇಷ ಸ್ಪರ್ಧೆಗಳನ್ನು ಅಯೋಜಿಸಲಾಗಿದೆ ಎಂದು ಸಭಾದ ಅಧ್ಯಕ್ಷ ವಿಶ್ವನಾಥ ಬಾಯರಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply