ಪರ್ಕಳ ಲಯನ್ಸ್ ಪದಗ್ರಹಣ

ಉಡುಪಿ: ಇಲ್ಲಿಗೆ ಸಮೀಪದ ಪರ್ಕಳ ಲಯನ್ಸ್ ಮತ್ತು ಲಿಯೋ ಕ್ಲಬ್ ಪದಗ್ರಹಣ ಸಮಾರಂಭ ಈಚೆಗೆ ಇಲ್ಲಿನ ಪುತ್ತೂರು ಅಮೃತ ಗಾರ್ಡನ್‌ನಲ್ಲಿ ನಡೆಯಿತು.
ಲಯನ್ಸ್ ಜಿಲ್ಲೆ 317ಸಿ ಗವರ್ನರ್ ಎನ್. ಎಂ. ಹೆಗಡೆ ಪದಗ್ರಹಣ ಅಧಿಕಾರಿಯಾಗಿ ಆಗಮಿಸಿ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಲಯನ್ಸ್ ಕ್ಲಬ್‌ಗಳ ಮೂಲಕ ಪ್ರಾಮಾಣಿಕ ಸೇವೆ ಮಾಡುವುದರೊಂದಿಗೆ ಸಮಾಜದ ಋಣ ತೀರಿಸೋಣ. ಸಮಾಜದಲ್ಲಿ ಸಮಾನತೆಗಾಗಿ ಶ್ರಮಿಸೋಣ ಎಂದರು.
2020- 21ರ ನೂತನ ಅಧ್ಯಕ್ಷರಾಗಿ ಅಶೋಕ ಪಣಿಯಾಡಿ ಮತ್ತವರ ತಂಡ ಅಧಿಕಾರ ಸ್ವೀಕರಿಸಿತು. ಈ ಸಂದರ್ಭದಲ್ಲಿ ಕೆಲವು ಫಲಾನುಭವಿಗಳಿಗೆ ಅಕ್ಕಿ ಕಿಟ್ ವಿತರಿಸಲಾಯಿತು. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಹೆಚ್ಚು ಅಂಕ ಗಳಿಸಿದ ಅಂಕಿತ ಹೆಗಡೆ ಅವರನ್ನು ಸನ್ಮಾನಿಸಲಾಯಿತು.
ವಿಶ್ವನಾಥ ಶೆಟ್ಟಿ, ಸುರೇಶ ಪ್ರಭು, ಗಣೇಶ ಸುವರ್ಣ, ಜೆ. ಪಿ. ಭಂಡಾರಿ, ಆರ್. ಕೆ. ಮೆಂಡನ್, ಶಶಿಧರ ಕುಂದರ್ ಇದ್ದರು.
ನಿರ್ಗಮನ ಅಧ್ಯಕ್ಷ ಜಯರಾಮ ಸ್ವಾಗತಿಸಿದರು. ಕಾರ್ಯದರ್ಶಿ ಮೇಟಿ ಮುದಿಯಪ್ಪ ವಂದಿಸಿದರು. ಸಪ್ನಾ ಸುರೇಶ್ ನಿರೂಪಿಸಿದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply