Janardhan Kodavoor/ Team KaravaliXpress
25.6 C
Udupi
Monday, June 27, 2022
Sathyanatha Stores Brahmavara

ನರೇಂದ್ರ ಮೋದಿ ಅಭಿಮಾನಿ ಬಳಗದ ಸೇವಾ ಸಪ್ತಾಹ

ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಸೇವಾ ಸಪ್ತಾಹದ ಅಂಗವಾಗಿ ನರೇಂದ್ರ ಮೋದಿ ಅಭಿಮಾನಿ ಬಳಗ ಉಡುಪಿ ಇದರ ವತಿಯಿಂದ ಇಂದು ಉಡುಪಿ ನಗರದ ಬೀದಿ ಬದಿ ವ್ಯಾಪಾರಸ್ಥರಿಗೆ ಉಚಿತವಾಗಿ ಕೋವಿಡ್ ಫೇಸ್ ಶೀಲ್ಡ್ ವಿತರಿಸಲಾಯಿತು. ಶಿರಿಬೀಡು ವಾರ್ಡ್ ನಗರಸಭಾ ಸದಸ್ಯರಾದ ಟಿ.ಜಿ. ಹೆಗ್ಡೆ ಅಭಿಯಾನಕ್ಕೆ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು ಜಗತ್ತು ಕಂಡ ಶ್ರೇಷ್ಠ ನಾಯಕ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಆಚರಣೆಯನ್ನು ಬೀದಿ ಬದಿಯ ವ್ಯಾಪಾರಸ್ಥರ ಸುರಕ್ಷೆತೆಗೆ ಒತ್ತು ನೀಡುವ ಮೂಲಕ ಆಚರಣೆ ಮಾಡುತ್ತಿರುವುದು ಶ್ಲಾಘನೀಯ. ಆದಷ್ಟು ಶೀಘ್ರದಲ್ಲಿ ಸಾಂಘಿಕ ಪ್ರಯತ್ನಗಳ ಮೂಲಕ ದೇಶವನ್ನು ಕೋವಿಡ್ ಮುಕ್ತವಾಗಿಸುವ ಪ್ರಮುಖ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.ಬಳಿಕ ಬ್ರಹ್ಮಾವರದ ಅಪ್ಪ ಅಮ್ಮ ಅನಾಥಾಶ್ರಮಕ್ಕೆ ಭೇಟಿ ನೀಡಿ 25 ಕೆಜಿ ಅಕ್ಕಿ, ನೀಲಾವರ ಗೋಶಾಲೆಗೆ ಭೇಟಿ ನೀಡಿ 50 ಕೆಜಿ ಪಶು ಆಹಾರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಗಿರಿಧರ್ ಕರಂಬಳ್ಳಿ, ಜಗದೀಶ್ ಶೆಟ್ಟಿ, ಗಣೇಶ್ ಪ್ರಸಾದ್, ನೀತಾ ಪ್ರಭು, ರಾಘವೇಂದ್ರ ಪ್ರಭು ಕರ್ವಾಲು, ಪ್ರಶಾಂತ್ ಪೂಜಾರಿ ಕಾಪು, ಕಾರ್ಕಳ ರೋಟರಾಕ್ಟ್ ಕಾರ್ಯದರ್ಶಿ ಸಮೀರ್ ಹೆಗ್ಡೆ ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!