ಬದುಕಿನ ಬಂಡಿಯ ಚೈನ್ ಎಳೆಯಿತೇ ಈ ಕೊರೋನ?!

  • ಹೇಗೋ, ಹ್ಯಾಗ್ಯಾಗೋ, ಜೀವನ ಸಾಗಿಸುತ್ತಿದ್ದ ಮನುಕುಲ, ಈಗ ಈ ಕ್ರೂರಿ ಕೊರೋನಾದ ಕಪಿಮುಷ್ಟಿಗೆ ಒಳಗಾಗಿ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಯಾರಿಗೆ ಯಾರೂ ಇಲ್ಲ ಎನ್ನೋ ಮಾತಿನಂತೆ ಈ ಕೊರೋನ ಸಂಕಷ್ಟ ದಿನೇದಿನೇ ಹೆಚ್ಚುತ್ತಿದೆ, ಯಾವ ತರಹದ ನಿಯಮ ಪಾಲನೆ, ಶುಚಿತ್ವದ ಪಾಲನೆ ಮಾಡಿಯೂ ಈ ಸೋಂಕು ಹಬ್ಬುತ್ತಿದೆ ಎಂದಾದಾರೆ, ಇದು ಮನುಷ್ಯನ ಜೀವನದ ಜೊತೆ ಚೆಲ್ಲಾಟ ವಾಡುತ್ತಿದೆ ಎಂಬುದೇ ಬೇಸರದ ಸಂಗತಿ, ಈ ಕೊರೋನ ಎಂಬ ಕ್ರೂರಿ ವೈರಸ್ ನಿಂದ ಜಾಗತಿಕ ಸೋಂಕು ಒಂದು ಕೋಟಿ ದಾಟಿದ್ದು ಲಕ್ಷಾಂತರ ಜನರು ಲಸಿಕೆ ಕಾಣದೆ ಸತ್ತರಲ್ಲ ಎಂಬ ನೋವು ಸದಾ ಕಾಡುತ್ತಲಿದೆ, ಈ ವೈರಸ್ ಹೇಗೆ ಹುಟ್ಟಿತು, ಹೇಗೆ ಹರಡಿತು ಎಂಬುದರ ಸ್ಪಷ್ಟ ಚಿತ್ರಣ ಸಿಗದೆ ಮನುಷ್ಯ ತಾನಾಗೆ ಚಪ್ಪಡಿಯನ್ನು ತನ್ನ ತಲೆಯ ಮೇಲೆ ಎಳೆದು ಕೊಂಡನೇ ಎನ್ನೋ ತರ ಅನಿಸುತ್ತಿದೆ. ಮೊದಲೆಲ್ಲ ವಿದೇಶಿ ಸಂಪರ್ಕ ಇರೋ ಜನಕ್ಕೆ ಬರುತ್ತಿದೆ ಎಂದು ಹೋ ನಾವು ಸೇಫ್ ಎನ್ನೋ ಭಾವನೆ ಮೂಡುತ್ತಿದ್ದರೆ, ಈಗ ಪೇಟೆಪಟ್ಟಣದ ನಿವಾಸಿ ಗಳಿಗೆ ಹಾಗೆಯೆ ಸಣ್ಣಪುಟ್ಟ ನಗರದ ವಾಸಿಗಳಿಗು ಈ ಸೋಂಕು ತಗುಲುತ್ತಿರುವುದು ಭೀಕರತೆಯ ನಿಜ ಸ್ವರೂಪ ಕಣ್ಣಮುಂದೆ ತೋರುತ್ತಿದೆ.

ಈ ಕೊರೋನ ಜೀವನದ ಕೊಂಡಿಯನ್ನೇ ಕಳಚುವಂತೆ ಮಾಡಿದೆ ಕಾರಣ ಈ ಜ್ವಲಂತ ಉದಾಹರಣೆ, ಒಂದು ಮಗು ಅದಕ್ಕೆ ಶಿಕ್ಷಣ ಎನ್ನೋದು ಅತಿ ಮುಖ್ಯ ಈಗ ಈ ಸೋಂಕಿನಿಂದ ಮಗು ಶಾಲೆ ತೆರೆಯದೇ ಮನೆಯಲ್ಲಿಯೇ ಆನ್ ಲೈನ್ ಶಿಕ್ಷಣ ಕಲಿಯುವಂತೆ ಆಗಿದೆ, ಆದರೆ ಒಂದು ಬೇಸರ ‘ಉಳ್ಳವರು ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್ ಕೊಳ್ಳುವರಯ್ಯ, ನಾನೇನು ಮಾಡಲಿ ಬಡವನಯ್ಯ ಹಾಗೆಯೇ ನಾನೇನು ಮಾಡಲಿ ನೆಟ್ವರ್ಕ್ ಇಲ್ಲದ ಸ್ಥಳದಲ್ಲಿ ಇರುವೆನಯ್ಯ’, ಹೀಗಿದ್ದಲ್ಲಿ ಈ ಆನ್ ಲೈನ್ ಶಿಕ್ಷಣ ನೂರಕ್ಕೆ ನೂರು ಫಲಪ್ರದವಾಗುತ್ತದೆ ಎನ್ನೊದು ದೂರದ ಮಾತು. ಪರಸ್ಪರ ಮುಖಾಮುಖಿಯಾಗಿ ಪಾಠ ಪ್ರವಚನ ಕೇಳೋದು ಮತ್ತು ತನ್ನ ಸನ್ಮಿತ್ರರ ಜೊತೆ, ಸಹ ಪಾಠಿಗಳ ಜೊತೆ ಕಲಿಯೋದು, ಶಿಕ್ಷಕರೊಂದಿಗೆ ನೇರ ಸಂವಾದದಿಂದ ವಿಷಯಗಳ ಮನನಮಾಡಿಕೊಳ್ಳೊದು ಒಟ್ಟಿನಲ್ಲಿ ಕೊರೋನ ಬರೋಕ್ಕಿಂತ ಮೊದಲಿದ್ದ ಅಥವಾ ನಾವು ನೀವು ಕಲಿಯುತ್ತಿದ್ದ ಶಿಕ್ಷಣ ಪದ್ದತಿಯೇ ನೂರಕ್ಕೆ ನೂರು ಎಫೆಕ್ಟೀವ್ ಅಂದ್ರೆ ಅಕ್ಷರಶಃ ತಪ್ಪಾಗಲಾರದು. ಕಾಲ ಬದಲಾಗಿದೆ, ನಾವೂ ಬದಲಾಗೋಣ ಎಂದು ಪ್ರಯತ್ನ ಪಟ್ಟು ಬದಲಾದರೆ ಅದರ ಎರಡರಷ್ಟು ಪೆಟ್ಟು ನಮ್ಮ ಮೇಲೆ ಆಗುತ್ತದೆ. ಆಡುವ ಮಕ್ಕಳಿಗೆ ಮೊಬೈಲ್ ಕೊಟ್ಟು ಕೂರಿಸಿದರೆ ಅದು ಅವುಗಳ ಆರೋಗ್ಯದ ಮೇಲು ಪರಿಣಾಮ ಬೀರುತ್ತದೆ ಇದು ಗೊತ್ತಿರುವ ಸತ್ಯ.

ಹಾಗೆಯೇ ಈ ರೋಗದಿಂದ ಎಷ್ಟೋ ಜನ ತಮ್ಮ ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಿ ಆರ್ಥಿಕ ಮಟ್ಟ ತೀರ ಹದಗೆಡುವಂತೆ ಮಾಡಿದೆ, ಎಷ್ಟೋ ಜನರು ಉದ್ಯೋಗ ಅರಸಿ ಪೇಟೆ ಸೇರಿದವರು ಈಗ ತಮ್ಮತಮ್ಮ ಸ್ವಸ್ಥಾನಕ್ಕೆ ಮರಳುವಂತೆ ಮಾಡಿದೆ, ಆದ್ರೆ ಎಲ್ಲರಿಗೂ ಸ್ವಸ್ಥಾನದಲ್ಲಿ ಉತ್ತಮ ಅವಕಾಶ ಮತ್ತು ನೆಲೆ ಇದೆ ಎಂದು ತಿಳಿದರೆ ಅದು ಅಕ್ಷರಶಃ ತಪ್ಪು ಕಲ್ಪನೆ ಕಾರಣ ಊರಿನಲ್ಲಿ ಜೀವನ ಕಷ್ಟ ಎಂದು ಅರಿತು ಪೇಟೆಯಲ್ಲಿ ಸಣ್ಣಪುಟ್ಟ ದುಡಿಮೆಮಾಡಿ ಬದುಕು ರೂಪಿಸಿ ಕೊಂಡವರೇ ಹೆಚ್ಚು ಅಂತವರ ಪರಿಸ್ಥಿತಿ ಮೂರಾಬಟ್ಟೆಯಾಗಿ ಜೀವನ ತ್ರಿಶಂಕು ಸ್ವರ್ಗವಾಗಿ ಎಲ್ಲಿಯೂ ನೆಲೆಇಲ್ಲಂತಾಗಿದೆ,  ಸರ್ಕಾರ ಇಂತಹ ಬಡವರ್ಗವನ್ನು ಗುರುತಿಸಿ ಸುಮಾರು 80ಕೋಟಿ ಬಡತನ ರೇಖೆಗಿಂತ ಕೆಳಗಿರುವ ಇವರಿಗೆ ‘ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ’ ಜಾರಿ ಗೊಳಿಸಿ ಮುಂದಿನ ನವೆಂಬರ್ ವರೆಗೆ ಉಚಿತ ತಲಾ ಐದು ಕೆ.ಜಿ ಅಕ್ಕಿ ಅಥವಾ ಗೋಧಿ, ಒಂದು ಕೆ.ಜಿ ಬೇಳೆ  ಕೊಡಲು ನಿರ್ಧರಿಸಿದೆ, ಅದೇನೋ ಒಳ್ಳೆಯ ಯೋಜನೆ ಆದರೂ ‘ಹೇಳಿ ಕೊಟ್ಟ ಮಾತು, ಕಟ್ಟಿಕೊಟ್ಟ ಬುತ್ತಿ’ ಎಂಬ ಗಾದೆಯಂತೆ ಎಲ್ಲಿಯವರೆಗೆ ಕೊಡಬಹುದು ​,ಈ ತರದ ಎಂಬತ್ತು ಕೋಟಿ ಜನಕ್ಕೆ ಎಂಬತ್ತು ತರದ ಸಮಸ್ಯೆಗಳಿರುತ್ತದೆ, ಸಾರಿಗೆ ಸಂಪರ್ಕ, ಅನಾರೋಗ್ಯ, ಹಣಕಾಸು, ಮಳೆಯಿಂದ ಉಂಟಾಗುವ ಹಾನಿ, ನಿರುದ್ಯೋಗ ಹೀಗೆ ಒಂದೇ ಎರಡೇ ಇವನ್ನೆಲ್ಲಾ ನಿವಾರಿಸಲು ಯಾರಿಗೂ ಸಾಧ್ಯವಿಲ್ಲ ನಿಜ ಆದರೆ ಇದು ಪರಿಹಾರವಾಗಲು ಸರ್ಕಾರ ಯಾವುದಾದರೊಂದು ಮಾರ್ಗೋಪಾಯ ಮುಂಬರುವ ನವೆಂಬರ್ ಒಳಗೆ ಹುಡುಕದಿದ್ದಲ್ಲಿ ಮುಂದಿನ ಜೀವನದ ಕಷ್ಟ ಕಾರ್ಪಣ್ಯಗಳನ್ನು ಊಹಿಸಲೂ ಅಸಾಧ್ಯ.

ದೇವರೇ ನಾನು ನಿನಗೆ ಕೇಳೋದಿಷ್ಟೆ ಮುಂದಿನ ಜೀವನದ ಹಾದಿಯಲ್ಲಿ ನಮ್ಮನ್ನು ಕೈಹಿಡಿದು ಮುನ್ನೆಡೆಸು ನಾನು ನಿನಗೆ ಈ ಕೆಳಕಂಡ ಬೇಡಿಕೆಗಳನ್ನು ಮುಂದಿಡುತ್ತೇನೆ.​ *ಶಿಕ್ಷಣ ಕ್ಷೇತ್ರ ಮುಂಚಿನಂತೇ ಆಗಲಿ ಒಳ್ಳೆಯ ಅಡ್ಮಿಶನ್, ಎಜುಕೇಶನ್, ಉದ್ಯೋಗ, ಉತ್ತಮ ಸಂಬಳ ಸಿಗುವಂತಾಗಲಿ.​ *​ವೈದ್ಯಕೀಯ ಕ್ಷೇತ್ರದಲ್ಲಿ ಕೊರೋನಕ್ಕೆ ಲಸಿಕೆ ಸಿಗಲಿ, ವೈದ್ಯೋ ನಾರಾಯಣೋ ಹರಿಃ ಎಂಬಂತೆ ವೈದ್ಯರು ಎಲ್ಲರನ್ನೂ ರೋಗಮುಕ್ತರನ್ನಾಗಿ ಮಾಡಲಿ.​ *ಕಳ್ಳತನ, ಸುಲಿಗೆ, ವಂಚನೆ ಕಡಿಮೆಯಾಗಿ ಆರಕ್ಷರು​ ​(ಪೊಲೀಸ್) ನಮ್ಮನ್ನು ಸದಾ ರಕ್ಷಣೆ ಮಾಡು ವಂತಾಗಲಿ​.*​.ಕಲಿತ ಎಲ್ಲಾ ವಿದ್ಯಾರ್ಥಿಗಳಿಗೂ ಉದ್ಯೋಗ ದೊರಕುವಂತಾಗಲಿ ಅಥವಾ ಸ್ವ-ಉದ್ಯೋಗ ಮಾಡುವಂತಾಗಲಿ​ *​ರೈತನಿಗೆ ಅತಿವೃಷ್ಠಿ ಉಂಟಾಗದೆ ಉತ್ತಮ ಮಳೆಯಾಗಿ ಬೆಳೆಬರುವಂತಾಗಲಿ.​ * ಸಾರಿಗೆ ಸಂಪರ್ಕ ಮೊದಲಿನಂತಾಗಿ ಜನಜೀವನದ ಸೇತುವೆ ಮರು ನಿರ್ಮಾಣವಾಗಲಿ​. *ಎಲ್ಲಾ ದೇವಸ್ಥಾನಗಳು ಮೊದಲಿಂತೆ ತೆರೆದು ದರ್ಶನದ ಭಾಗ್ಯ ಕರುಣಿಸೋ ಜೊತೆಗೆ, ದೇವಸ್ಥಾನದ ಅರ್ಚಕರಿಂದ ಹಿಡಿದು ಹೊರಗೆ ಹೂ,ತೆಂಗಿನಕಾಯಿ ಮಾರುವವರವರೆಗೂ ಜೀವನ ಸಹಜಸ್ಥಿತಿ ಬರುವಂತಾಗಲಿ.​ *ಸಾರ್ವಜನಿಕ ಸಾರಿಗೆ ಆಟೋ, ಕ್ಯಾಬ್ ನವರ ಜೀವನ ಸುಗಮವಾಗಲಿ,.

 *ಕುಲಕಸುಬು ಮಾಡುವ ಎಷ್ಟೋ ಜನರಿಗೆ ತಮ್ಮ ಬದುಕು ತಾವೇ ಕಟ್ಟಿಕೊಳ್ಳಲು ಶಕ್ತಿ ನೀಡಲಿ​* ಅನ್ನ ದಾತೋ ಸುಖಿಭವ ಎಂಬಂತೆ ಹಸಿದಾಗ ರುಚಿಕರವಾದ ಊಟ, ಉಪಹಾರ ನೀಡುತ್ತಿದ್ದ ಹೊಟೇಲ್ ಗಳು ಪುನರಾರಂಭವಾಗಿ ರುಚಿಕರಆರೋಗ್ಯಕರ ತಿನಿಸು ನೀಡು ವಂತಾಗಲಿ, ಹಾಗೆಯೇ ಸಭೆ ಸಮಾರಂಭಗಳಲ್ಲಿ ಹಾಲ್ ಗಳನ್ನು, ಛತ್ರಗಳನ್ನು ನಿರ್ವಹಿಸುತ್ತಿದ್ದವರಿಗೂ ಪುನರ್ ಆರಂಭವಾಗಿ, ಪುರೋಹಿತ ವರ್ಗ, ಅಡುಗೆ ತಯಾರಕ ವೃತ್ತಿಯೂ ಪುನಶ್ಚೇತನವಾಗಲಿ. ​*​ಅಂಗಡಿಮುಂಗಟ್ಟುಗಳು ತೆರೆದು ಸ್ವಲ್ಪಮಟ್ಟಿಗೆ ಆರ್ಥಿಕ ಸ್ಥಿತಿ ಮೇಲೇಳು ವಂತಾಗಲಿ,​ *​ಚಿತ್ರಮಂದಿರಗಳು ಪುನಃ ತೆರೆದು ಮನೋರಂಜನೆಗೆ ಮತ್ತೆ ಒತ್ತು ನೀಡುವಂತಾಗಲಿ, ಹೀಗೆ ಕೊರೋನ ಬರುವ ಮುನ್ನ ಹೇಗೆ ನಾವು ಬೆಳಿಗ್ಗೆಯಿಂದ ರಾತ್ರಿಯ ವರೆಗೂ ಏನೆಲ್ಲಾ ಮಾಡಿ, ಓಡಾಡಿ, ಕೆಲಸಮಾಡಿ ಜೀವಿಸುತ್ತಾ ನಮ್ಮ ಜೀವನಬಂಡಿಯನ್ನು ಸಾಗಿ ಸುತ್ತಿದ್ದೆವೋ ಅದೆಲ್ಲ ಮರಳಿ ಬರುವಂತಾಗಲಿ, ನೋವೆಲ್ಲಾ ಮರೆಯುವಂತಾಗಲಿ, ಪ್ಲೀಸ್ ದೇವಾ ಗೀವ್ ಮಿ ಒನ್ ಚಾನ್ಸ್ ಆ್ಯಗೈನ್.​  ಸರ್ವೇ ಜನಾ ಸುಖಿನೋ ಭವಂತು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply