ಯು.ಪಿ.ಎಂ.ಸಿ- ಪುಟ್ಬಾಲ್ ಟೀಂಗೆ ಚತುರ್ಥ ಸ್ಥಾನ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಪುಟ್ಬಾಲ್ ತಂಡವು ಇ.ಸಿ.ಆರ್ ಕಾಲೇಜ್ ಕೋಟದಲ್ಲಿ ಮೇ 28 ರಿಂದ 29 ರ ವರೆಗೆ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಉಡುಪಿ ವಲಯ ಅಂತರ್ಕಾಲೇಜು ಪುರುಷರ ಪುಟ್ಬಾಲ್ ಪಂದ್ಯಾಟದಲ್ಲಿ ಚತುರ್ಥ ಸ್ಥಾನವನ್ನು ಪಡೆದಿದೆ. 

ಬಹುಮಾನ ವಿತರಣಾ ಸಮಾರಂಭದಲ್ಲಿ ಪಂದ್ಯಾಟದ ಪರಿವೀಕ್ಷಕರಾದ ಶ್ರೀ ಬಿಜು ಜಾಕೋಬ್, ಇ.ಸಿ.ಆರ್ ಕಾಲೇಜಿನ ಪ್ರಾಚಾರ್ಯರಾದ ಡಾ. ಅಶೋಕ್ ಜೋಗಿ ಬಹುಮಾನದ ಫಲಕ ವಿತರಿಸಿದರು.

ತಂಡದ ಸದಸ್ಯರು ದೈ.ಶಿ.ನಿರ್ದೇಶಕ ಶ್ರೀ ಗಣೇಶ್ ಕೋಟ್ಯಾನ್ ಮುಖೇನ ಯುಪಿಎಂಸಿ ಪ್ರಾಚಾರ್ಯೆ ಶ್ರೀಮತಿ ಆಶಾ ಕುಮಾರಿಯವರಿಗೆ ಫಲಕ ಹಸ್ತಾಂತರಿಸಿದರು.

 
 
 
 
 
 
 
 
 
 
 

Leave a Reply