ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಅವಳಿ ಚಿನ್ನ ಗೆದ್ದ ರಿಯಾ ಜಿ ಶೆಟ್ಟಿ

ಕೊಬೋಡೊ ಬುಡೊಕಾನ್ ಕರಾಟೆ ಎಸೋಸಿಯೇಷನ್ ಕರ್ನಾಟಕ (ರಿ) ಅಫಿಲಿಯೇಟೆಡ್ ಟು ಬುಡೋಕೋನ್ ಇಂಟರ್ನ್ಯಾಷನಲ್ ಆಸ್ಟ್ರೇಲಿಯಾ ಪ್ರಸ್ತುತಪಡಿಸುವ
ಐದನೇ ರಾಷ್ಟ್ರಮಟ್ಟದ ಓಪನ್ ಇಂಟರ್ನ್ಯಾಷನಲ್ ಕರಾಟೆ ಚಾಂಪಿಯನ್ಶಿಪ್ 2022. ಉಡುಪಿಯ ಅಜ್ಜಾರ್ ಕಾಡುವಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಕರಾಟೆ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ
ಕಟ ಮತ್ತು ಕುಮಿಟೆ ವಿಭಾಗದಲ್ಲಿಯೂ ಉಡುಪಿ ಒಳಕಾಡು ಶಾಲೆಯ 8ನೇಯ ತರಗತಿಯ
ವಿದ್ಯಾರ್ಥಿನಿ ಹಾವಂಜೆ ಗ್ರಾಮದ ಕೀಳಂಜೆಯ
ರಿಯಾ ಜಿ.ಶೆಟ್ಟಿಯವರು ಅವಳಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಈ ಸಾಧನೆಜೊತೆಗೆ ರಾಷ್ಟ್ರಮಟ್ಟದಲ್ಲಿ ನಡೆದಿರುವ ಸತತ ನಾಲ್ಕನೇ ಪಂದ್ಯದಲ್ಲಿ ಪಂದ್ಯದಲ್ಲಿ ಎರಡು ವಿಭಾಗದಲ್ಲಿಯೂ ಅವಳಿ ಚಿನ್ನ ಬಾಚಿಕೊಂಡಿರುವುದು ವಿಶೇಷೆತೆಯಾಗಿದೆ. ರಾಷ್ಟ್ರ ಮಟ್ಟದಲ್ಲಿ –
4, ಬಾರಿ..
ಇಂಟರ್ ನಾಶನಲ್ -1, ಬಾರಿ
ಸ್ಟೇಟ್ ಲೆವೆಲ್ -2ಬಾರಿ ಹೀಗೆನೆಎರಡು ವಿಭಾಗದಲ್ಲಿ ಯೂ ಪದಕ ಗೆದ್ದುಕೊಂಡು ಅಗ್ರಸ್ಥಾನದಲ್ಲಿದ್ದು. ಕರಾಟೆಯಲ್ಲಿ ಸಾಧನೆಗೈದಿದ್ದಾರೆ. ಹಾವಂಜೆ ಗ್ರಾಮದ ಕೀಳಂಜೆಯ ಛಾಯಾಗ್ರಾಹಕ ಗಣೇಶ್ ಶೆಟ್ಟಿ ಕೀಳಂಜೆ ಹಾಗೂ ಜಯಲಕ್ಷ್ಮಿ ಜಿ. ಶೆಟ್ಟಿಯವರ ಪುತ್ರಿ ಯಾಗಿದ್ದಾರೆ ಇವರು ಅಂತಾರಾಷ್ಟ್ರೀಯ ಮಟ್ಟದ ಕರಾಟೆಪಟು ಶಿಕ್ಷಕಿ,ಪ್ರವೀಣ ಪರ್ಕಳ ಅವರ ಶಿಷ್ಯಯಾಗಿದ್ದು. ಪರ್ಕಳ ಪಿ.ಕೆ.ಸಿ ತಂಡದ ಸದಸ್ಯೆಯಾಗಿ ಕರಾಟೆಯಲ್ಲಿ ಸಾಧನೆಗೈದಿದ್ದಾರೆ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply