ಲಾರಿಯಡಿಗೆ ಬಿದ್ದು ಮಹಿಳೆ ಸಾವು!

ಮೊಡಂಕಾಪು ಎಂಬಲ್ಲಿ ಸೋಮವಾರ ಮಧ್ಯಾಹ್ನ ಲಾರಿಯಡಿಗೆ ಬಿದ್ದು ಮಹಿಳೆಯೋರ್ವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ  ನಡೆದಿದೆ.

ಮೃತಪಟ್ಟ ಮಹಿಳೆ ಬೆಂಜನಪದವು ಕರಾವಳಿ ಸೈಟ್ ನಿವಾಸಿ ಉಷಾ ಎಂದು ತಿಳಿದುಬಂದಿದೆ.

ಮೊಡಂಕಾಪು ತೆಂಗಿನ ಎಣ್ಣೆ ಮಿಲ್ ಬಳಿ ನಡೆದುಕೊಂಡು ಹೋಗುತ್ತಿದ್ದ ವೇಳೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಮಹಿಳೆಯ ಮೈ ಮೇಲೆ ಲಾರಿ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಬೆಂಜನಪದವು ಎಂಬಲ್ಲಿ ಮಹಿಳೆ ಅಂಗಡಿ ಹೊಂದಿದ್ದು, ಸಾಮಾಗ್ರಿಗಳನ್ನು ತರಲು ಪೇಟೆಗೆ ಬಂದಿದ್ದು, ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.

 
 
 
 
 
 
 
 
 
 
 

Leave a Reply