ಕ್ರಿಕೆಟ್ ಆಟಕ್ಕೂ ಸೈ.. ಕೋವಿಡ್ ಶವ ಸಂಸ್ಕಾರಕ್ಕೂ ಜೈ ಎನ್ನುವ ನಾಗಾರ್ಜುನ್

ಉಡುಪಿ ನಗರಸಭೆಯಲ್ಲಿ 5-6 ವರ್ಷಗಳಿಂದ  ಸ್ಯಾನಿಟರಿ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಿರುವ ನಾಗಾರ್ಜುನ್.ಡಿ.ಪೂಜಾರಿಯವರು ದಿನೇಶ್.ಪೂಜಾರಿ ಹಾಗೂ ಜಯ ಡಿ ಪೂಜಾರಿಯವರ ಪುತ್ರನಾಗಿದ್ದು. ಕೋರೋನಾ ಸೋಂಕಿಗೆ ಸಾವನ್ನಪ್ಪಿದ್ದ 129 ಮಂದಿಯ ಅಂತ್ಯಕ್ರಿಯೆ ಕ್ರಮಬದ್ಧವಾಗಿ ನಡೆಸಿ ಮನೆಯವರಿಗೆ ಬೂದಿ/ಅಸ್ತಿ ಓಪ್ಪಿಸುವ ತನಕ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತಿರುವ ನಾಗಾರ್ಜುನ್ ರವರ ದೊಡ್ಡ ಮನಸ್ಸಿಗೆಗೊಂದು ಸಲಾಂ.  

ಉಡುಪಿ ನಗರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರು ಸತತ 3-4 ತಿಂಗಳಿಂದ ಕೋರೋನಾ ಸೋಂಕಿತ ಮೃತದೇಹವನ್ನು ದಹನ ಮಾಡುವ ಕಾರ್ಯದಲ್ಲಿ ತನ್ನ ನಾಲ್ಕು ಜನ ಒಳಗೊಂಡ ತಂಡಕ್ಕೆ ಸಾರಥಿಯಂತೆ ಇದ್ದು ಅವರಿಗೂ ಧೈರ್ಯ ನೀಡುತ್ತ ಮಾನವೀಯತೆಯಿಂದ ನಿಸ್ವಾರ್ಥವಾಗಿ ಇಂತಹ ಕಾರ್ಯದಲ್ಲಿ ತೊಡಗಿದ್ದಾರೆ ನಾಗಾರ್ಜುನ್. 

ಗಾಂಧಿ ಆಸ್ಪತ್ರೆ ಪಂಚಲಹರಿ ಫೌಂಡೇಷನ್ ಪಂಚಮಿ ಟ್ರಸ್ಟ್ ವತಿಯಿಂದ ಗೌರವ ಅರ್ಪಣೆ ಮಾಡುವ ಮೂಲಕ ನಾಗಾರ್ಜುನ ಕಾರ್ಯವನ್ನು ಶ್ಲಾಘಿಸಿದರು. ಇಡೀ ವಿಶ್ವವನ್ನೇ ಆವರಿಸಿರುವ ಕೊರೊನಾ ಎಂಬ ಹೆಮ್ಮಾರಿಗೆ ತುತ್ತಾದವರು ಕೋಟ್ಯಾಂತರ ಜನ. ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡರು. ಉಡುಪಿಯಲ್ಲಿ ದಿನದಿಂದ ದಿನಕ್ಕೆ ಏರುತ್ತಿದೆ. ಕೊರೋನಾ ಬಹಳ ಬೇಗನೆ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸೋಂಕು ಆಗಿರುವುದರಿಂದ ಸತ್ತವರ ಅಂತ್ಯಕ್ರಿಯೆ ಕೂಡಾ ಸರಕಾರವೇ ( ಸ್ವಯಂಸೇವಕರ ಸಹಾಯ ದಿಂದ) ನೆರವೇರಿಸುತ್ತದೆ.. ಉಡುಪಿ ಜಿಲ್ಲೆಯಲ್ಲಿ ಈ ಕಾಯಕದಲ್ಲಿ ನಿಸ್ವಾರ್ಥವಾಗಿ ತನ್ನನ್ನು ತೊಡಗಿಸಿಕೊಂಡವರು ನಾಗಾರ್ಜುನ್ ಪೂಜಾರಿ..

ಕ್ರಿಕೆಟ್ ಲೋಕದ ಪ್ರತಿಭೆ ನಾಗಾರ್ಜುನ್ ಪೂಜಾರಿ 
ತನ್ನ ಹದಿಮೂರನೆಯ ವಯಸ್ಸಿಗೇ ದೊಡ್ಡಣಗುಡ್ಡೆ ಫ್ರೆಂಡ್ಸ್ ತಂಡದ ಮೂಲಕವಾಗಿ ಟೆನಿಸ್ ಕ್ರಿಕೆಟ್ ಗೆ ಪರಿಚಯ ಕಂಡು ನಂತರ ಗುರುಶ್ರೀ ಗುಂಡಿಬೈಲು ಹಾಗೂ ವಿಷ್ಣುಮೂರ್ತಿ ದೊಡ್ಡಣಗುಡ್ಡೆ, ಸಾಟರ್ಡೇ ಪ್ಯಾಂಥರ್ಸ್ ಇಂದ್ರಾಳಿ ಹಾಗೂ  ಲೋಕಲ್ ಬಾಯ್ಸ್ ಉಡುಪಿ ತಂಡದ ಪರವಾಗಿ ಬಹಳಷ್ಟು ಪಂದ್ಯಾಟವನ್ನು ಗೆಲ್ಲಿಸಿಕೊಟ್ಟ ಕ್ರಿಕೆಟಿಗ.

ಜಿಲ್ಲೆ ಹಾಗೂ ರಾಜ್ಯಮಟ್ಟದ ಪಂದ್ಯಾವಳಿಗಳಲ್ಲಿ ಆಲ್-ರೌಂಡರ್ ಆಟಗಾರನಾಗಿ ಗುರುತಿಸಿಕೊಂಡರು. ಟೆನಿಸ್ ಕ್ರಿಕೆಟ್‌ನ ಜನಪ್ರಿಯ ತಂಡಗಳಾದ ಉಡುಪಿಯ ಎ.ಕೆ. ಸ್ಪೋರ್ಟ್ಸ್, ಉಡುಪಿ ಫ್ರೆಂಡ್ಸ್, ಬಿಬಿಸಿ ಅಗ್ರಹಾರ, ಸೈಮಂಡ್ಸ್ ಕಡಿಯಾಳಿ, ರಿಯಲ್ ಫೈಟರ್ಸ್ ನಂತಹ ತಂಡಗಳನ್ನು ಪ್ರತಿನಿಧಿಸಿ ಅಪಾರ ಯಶಸ್ಸನ್ನು ಕೂಡಾ ತನ್ನದಾಗಿಸಿಕೊಂಡಿದ್ದಾರೆ. ಕರಾವಳಿಯ ಭಾಗದಲ್ಲಿ ಜನಪ್ರಿಯತೆಯನ್ನು ಪಡೆದಿರುವ  40 ಗಜಗಳ ಮಾದರಿಯ ಪಂದ್ಯಾಕೂಟಗಳಲ್ಲಿ ಆ ಪಂದ್ಯಾಕೂಟಗಳ ಶ್ರೇಷ್ಠ ತಂಡಗಳೆನಿಸಿಕೊಂಡ ಜಾನ್ಸನ್ ಕುಂದಾಪುರ, ಚಾಲೆಂಜ್ ಕುಂದಾಪುರ, ಈಗಲ್ಸ್ ಕುಂಭಾಶಿಯ ಪರವಾಗಿ ಉತ್ತಮ ನಿರ್ವಹಣೆ ನೀಡಿದ್ದಾರೆ..2011 ರಿಂದ ಈಚೆಗೆ ತನ್ನನ್ನು ಸಂಪೂರ್ಣವಾಗಿ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡು ಇಲ್ಲಿಯವರೆಗೆ ತನ್ನ ಸಾಧನೆಗಾಗಿ 350 ಕ್ಕೂ ಅಧಿಕ ಪಂದ್ಯಶ್ರೇಷ್ಠ ಪ್ರಶಸ್ತಿ, 170 ಕ್ಕೂ ಹೆಚ್ಚು ಉತ್ತಮ ದಾಂಡಿಗ ಹಾಗೂ ಉತ್ತಮ ಬೌಲರ್ ಹಾಗು  45 ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಇವರ ಕಾರ್ಯಕ್ಸಮತೆಗೆ ಸಾಕ್ಷಿ.  ಉಡುಪಿಯ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ತಂಡಕ್ಕೆ ಸತತ ಮೂರು ವರ್ಷಗಳ ಕಾಲ ಉಚಿತವಾಗಿ ಕ್ರಿಕೆಟ್ ತರಬೇತಿ ನೀಡಿ ಒಟ್ಟು ನಾಲ್ಕು ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

 ಬಹುತೇಕ ಎಲ್ಲಾ ಬಿಲ್ಲವ ಸಮಾಜ ಬಾಂಧವರು ತಮ್ಮ ಕ್ರೀಡಾಪ್ರತಿಭೆಯ ಪ್ರದರ್ಶನಕ್ಕಾಗಿ ಕಾಯುತ್ತಿದ್ದರು. ಮೂಲ್ಕಿ ವಿಜಯ ಕಾಲೇಜಿನ ಮೈದಾನದಲ್ಲಿ ಸಾಗಿದ ಅಂತರಾಜ್ಯ ಮಟ್ಟದ ಬಿಲ್ಲವ ಸಮಾಜ ಬಾಂಧವರ ಎರಡು ಲಕ್ಷ ರೂಪಾಯಿಗಳ ಬಹುಮಾನ ಮೊತ್ತದ ಪ್ರತಿಷ್ಠಿತ ಪಂದ್ಯಾಕೂಟದ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ , ಉತ್ತಮ ಬೌಲರ್ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಗಳೆಲ್ಲವೂ ನಾಗಾರ್ಜುನ್ ಪಾಲಾಗಿದ್ದವು ಎನ್ನುವುದು ಅವರ ಸಮಾರೋಪಾದಿ ಯಶಸ್ಸಿನ ನಾಗಾಲೋಟಕ್ಕೆ ಸಾಕ್ಷಿ.

ಉಡುಪಿ ಜಿಲ್ಲೆಯಲ್ಲಿ ತನ್ನ ಉತ್ತಮ ರೀತಿಯ ದಾಂಡಿಗತನ ಹಾಗೂ ನಿಖರವಾಗಿ ಚೆಂಡನ್ನು ತಿರುಗಿಸಬಲ್ಲ ಚಾಣಾಕ್ಷ ಎಸೆತಗಾರನಾಗಿ ತನ್ನನ್ನು ಗುರುತಿಸಿಕೊಂಡು ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿಕೊಂಡಿದ್ದಾರೆ. 
ಆಲ್ ದಿ ಬೆಸ್ಟ್ ನಾಗಾರ್ಜುನ್ ~ಟೀಮ್ ಕರಾವಳಿ 
 
 
 
 
 
 
 
 
 
 
 

Leave a Reply