ಡಾ.ಅಜೆಕಾರು, ಸಾಣೂರ್ ಅರುಣ್, ಅನ್ವಿತಾ ವಿಟ್ಲ ಚೈತನ್ಯಶ್ರೀ ಕರ್ನಾಟಕ ರತ್ನ ಗೌರವಕ್ಕೆ ಆಯ್ಕೆ

ಕಾರ್ಕಳ: ಮಂಗಳೂರು ಕಥಾ ಬಿಂಧು ಪ್ರಕಾಶನ ಜನವರಿ 9 ರಂದು ಆಯೋಜಿಸಿರುವ ಶಿಶಿರ ಕಾವ್ಯ ಸಂಭ್ರಮದಲ್ಲಿ ಮೂವರು ವೃತ್ತಿ ಸಾಧಕರಿಗೆ ವರ್ಷದ ಚೈತನ್ಯಶ್ರೀ ಕರ್ನಾಟಕ ರತ್ನ ರಾಜ್ಯ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಸಂಘಟಕ, ಜನಪ್ರಿಯ ಕಾದಂಬರಿಕಾರ ಪಿ.ವಿ.ಪ್ರದೀಪ್ ಕುಮಾರ್ ತಿಳಿಸಿದ್ದಾರೆ.

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಸಾರ್ಥಕ ಸೇವೆ ಗೈದಿರುವ ಸಂಘಟಕ, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ರೂವಾರಿ, ಸಾಹಿತಿ ಡಾ.ಶೇಖರ ಅಜೆಕಾರು, ಸಮಾಜ ಸೇವಾಸಕ್ತ ಡಿಸೇಲ್ ಮೆಕಾನಿಕ್ ಆಗಿ 25 ವರ್ಷಗಳ ಸೇವೆಯ ಮೂಲಕ ಹೆಸರುಗಳಿಸಿರುವ ಸಾಣೂರು ಅರುಣ್ ಶೆಟ್ಟಿಗಾರ್, ಸ್ಯಾಕ್ಸೋಫೊನ್‌ನಲ್ಲಿ ಬಾಲ್ಯದಿಂದಲೇ ಸಾಧನೆ ಮಾಡುತ್ತಾ ನೂರಾರು ಕಚೇರಿಗಳನ್ನು ನಡೆಸಿರುವ ಯುವ ಪ್ರತಿಭೆ ಅನ್ವಿತಾ ವಿಟ್ಲ ಈ ವರ್ಷದ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾಗಲಿರುವರು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅವರು ಮಂಗಳೂರಿನ ವುಡ್‌ಲ್ಯಾಂಡ್ಸ್ ಹೊಟೇಲಿನಲ್ಲಿ ಸೋಮವಾರ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನಿಸುವರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply