Janardhan Kodavoor/ Team KaravaliXpress
30.6 C
Udupi
Wednesday, August 17, 2022
Sathyanatha Stores Brahmavara

ಶೋಕ ಅಧಿಕವಾದಾಗ ಭಗವದ್ಗೀತಾ ಶ್ಲೋಕ ಅಗತ್ಯ~ ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದರು.   

ಶೋಕ ಅಧಿಕವಾದಾಗ ಭಗವದ್ಗೀತಾ ಶ್ಲೋಕ ಅಗತ್ಯ, ಮಾಧ್ವ ಮತ ಪ್ರಚಾರದಲ್ಲಿ ಕ್ರಾಂತಿ ಮಾಡಿಕೊಂಡು ಬನ್ನಂಜೆ ಗೋವಿಂದ  ಆಚಾರ್ಯ ನಾಸ್ತಿಕರನ್ನು ಆಸ್ತಿಕರನ್ನಾಗಿಸುವಲ್ಲಿ ವಿಶೇಷ ಪ್ರಯತ್ನ ಮಾಡಿದ್ದ ದಿವ್ಯ ಚೇತನ ಎಂದರು. ನಮ್ಮ ಸಮಾಜಕ್ಕೆ ಧಾರ್ಮಿಕ, ಸಾಂಸ್ಕೃತಿಕವಾಗಿ  ವಿಶೇಷ ಕೊಡುಗೆ ನೀಡಿದ ವಿದ್ಯಾ ವಾಚಸ್ಪತಿ ಬನ್ನಂಜೆ ಗೋವಿಂದ ಆಚಾರ್, ಉದ್ಯಾವರ ಮಾಧವ  ಆಚಾರ್, ದಾಮೋದರ ಐತಾಳ್  ಆದರ್ಶಗಳು  ಮುಂದಿನ ಪೀಳಿಗೆಯಲ್ಲಿ ಬರುವಂತಾಗಲಿ ಎಂದು ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ಮಾಡಿ ನುಡಿ ನಮನ ಸಲ್ಲಿಸಿದರು.
 
ಈತ್ತಿಚೆಗಷ್ಟೇ  ಸಮಾಜದ ಗಣ್ಯ ವ್ಯಕ್ತಿಗಳಾಗಿರುವ ಉಡುಪಿಯ ದಿ. ಶ್ರೀ ವಿದ್ಯಾವಚಸ್ಪತಿ ಬನ್ನಂಜೆ ಗೋವಿಂದ ಆಚಾರ್ಯ, ಶ್ರೀ ಉದ್ಯಾವರ ಮಾಧವ ಆಚಾರ್ಯ, ಶ್ರೀ ದಾಮೋದರ ಐತಾಳ್ ಇವರಿಗೆ  ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ (ರಿ )ವತಿಯಿಂದ ಎಲ್ಲಾ ವಲಯದ ವಿಪ್ರ ಬಾಂದವರು ಹಾಗೂ ಸಮಾಜ ಬಾಂದವರು ಸೇರಿ ಕೊಂಡು ಗೀತಾ ಜಯಂತಿ ಹಾಗೂ ಏಕಾದಶಿಯ ಪರ್ವ ಕಾಲದಲ್ಲಿ ಶ್ರೀ ವಿಷ್ಣು ಸಹಸ್ರ ನಾಮ ಪಾರಾಯಣ ನಡೆಸಿ ಬಳಿಕ  ಶ್ರದ್ದಾಂಜಲಿಯನ್ನು ಬ್ರಾಹ್ಮೀ ಸಭಾ ಭವನದಲ್ಲಿ ಸಲ್ಲಿಸಲಾಯಿತು. 
 
ವಿಪ್ರ ಬಾಂದವರ ಪರವಾಗಿ ಶ್ರೀ ವಿದ್ವಾನ್ ಗೋಪಾಲ ಆಚಾರ್, ಶ್ರೀ ವಿದ್ವಾನ್ ಹೆರ್ಗ ಹರಿ ಪ್ರಸಾದ್, ಶ್ರೀ ರಂಜನ್ ಕಲ್ಕೂರ್, ಶ್ರೀ ಕೃಷ್ಣ ರಾಜ್ ಕೋಡಂಚ, ಶ್ರೀ ಹರಿಕೃಷ್ಣ ಶಿವತ್ತಾಯ,(ಪೆರಂಪಳ್ಳಿ )ಶ್ರೀ ಶ್ರೀನಿವಾಸ್ ಬಲ್ಲಾಳ್(ಕರಂಬಳ್ಳಿ ವಲಯ ), ಶ್ರೀ ವಾದಿರಾಜ್ಅಂಬಲ್ಪಾಡಿ  (ಕರ್ನಾಟಕ ಬ್ಯಾಂಕ್ ), ಶ್ರೀ ಪ್ರಸನ್ನ ಆಚಾರ್ಯ (ಶ್ರೀ ಪುತ್ತಿಗೆ ಮಠ )ಶ್ರೀ ರಮೇಶ್ ಅಡಿಗ, (ತೋನ್ಸೆ ವಲಯ ) ಸುಬ್ರಮಣ್ಯ ಭಟ್ (ಉಪ್ಪುರ್ ವಲಯ ). 
ಎಂ ಬಲರಾಮ್ ರಾವ್ (ಮಟ್ಟು ವಲಯ ), ಶ್ರೀ ರಾಮಕಾಂತ್ (ಕನ್ನರ್ಪಾಡಿ ವಲಯ ) ಗೋಪಾಲ್ ಭಟ್ (ಇಂಜಿನೀಯರ್ ) ಶ್ರೀ ರವಿ ಪ್ರಕಾಶ್ (ತುಶಿಮಾ ಮ ),  ಪದ್ಮಲತಾ ವಿಷ್ಣು (ಬೈಲೂರ್ ವಲಯ ), ಸುಬ್ರಮಣ್ಯ ಜೋಶಿ (ಪುತ್ತೂರು ವಲಯ ),ಶ್ರೀ ಅಡೂರ್ (ಜಿಲ್ಲಾ ಬ್ರಾಹ್ಮಣ ಸಭಾ )ಇತರ ಎಲ್ಲಾ ಪ್ರಮುಖರು ನುಡಿ ನಮನ ಸಲ್ಲಿಸಿ ಗೌರವ ಸಲ್ಲಿಸಿದರು.
 
ಅಧ್ಯಕ್ಷ ಶ್ರೀ ವಿಷ್ಣು ಪ್ರಸಾದ್ ಪಾಡಿಗಾರ್ ಸ್ವಾಗತಿಸಿದರು, ರಂಜನ್ ಕಲ್ಕೂರ್ ಪ್ರಸ್ತಾಪಿಸಿದರು,  ಅಶ್ವಥ್ ಭಾರದ್ವಾಜ್ ನಿರೂಪಿಸಿದರು, ಕಾರ್ಯದರ್ಶಿ ಪ್ರವೀಣ್ ಉಪಾಧ್ಯ ವಂದಿಸಿದರು.  

 

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!