ಶ್ರೀ ಮಹಾಲಿಂಗೇಶ್ವರ ಕಲಾರಂಗ (ರಿ) ವಡ್ಡರ್ಸೆಯ ದಶಮಾನೋತ್ಸವ ಪ್ರಯುಕ್ತ ಕರಪತ್ರ ಹಾಗೂ ಪೋಸ್ಟರ್ ಬಿಡುಗಡೆ

ಶ್ರೀ ಮಹಾಲಿಂಗೇಶ್ವರ ಕಲಾರಂಗ (ರಿ) ವಡ್ಡರ್ಸೆ..ಇವರ ದಶಮಾನೋತ್ಸವ ಕಾರ್ಯಕ್ರಮವು ಫೆಬ್ರವರಿ 26 ರಂದು ನಡೆಯಲಿದ್ದು ಇದರ ಅಂಗವಾಗಿ ‌ಈ ದಿನ ದೇವಸ್ಥಾನದಲ್ಲಿ ಕಲಾರಂಗದ ನೂತನ ಲೋಗೋ, ಕರಪತ್ರ ಹಾಗೂ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ನೆರವೇರಿತು.

ಬಳಿಕ‌ ಕಲಾರಂಗದ ಗುರುಗಳಾದ ಪ್ರಸಾದ್ ಕುಮಾರ್ ಮೊಗೆಬೆಟ್ಟುರವರು ” ಕಲಾರಂಗವು ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತನ್ನದೇ ರೀತಿಯಲ್ಲಿ ಶ್ರಮಿಸುತ್ತಿದ್ದು ಪ್ರಬುದ್ದ ಕಲಾವಿದರಿಂದ ಕೂಡಿದ ತಂಡವಾಗಿದೆ.ಹಲವು ಹೊಸತನದ ವಿನೂತನ ಪ್ರಯೋಗಗಳ ಮೂಲಕ ಎಲ್ಲರ‌ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ” ಹೇಳಿದರು.

 

ದೇವಸ್ಥಾನದ ಆಡಳಿತ ಮುಕ್ತೇಸರರಾದ ಕೊತ್ತಾಡಿ‌ ಉದಯ್ ಕುಮಾರ್‌‌ಶೆಟ್ಟಿಯವರು ಕಲಾರಂಗದ ಮುಂದಿನ‌ ದಶಮಾನೋತ್ಸವ ‌ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.. ಈ ಸಂದರ್ಭದಲ್ಲಿ ಭಜನಾ ಮಂಡಳಿ ಹಾಗೂ ಕಲಾರಂಗ ಸದಸ್ಯರು,ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರು‌ ,ಹಾಗೂ ಆಹ್ವಾನಿತ ಹವ್ಯಾಸಿ ಕಲಾತಂಡದ ಸದಸ್ಯರು ಉಪಸ್ಥಿತರಿದ್ದರು..

 
 
 
 
 
 
 
 
 
 
 

Leave a Reply