ಈದ್ ಉಲ್‌ ಫಿತರ್‌: ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಇಂದು (ಏ.10) ಸರಕಾರಿ ರಜೆ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಇಂದು (ಎ.10 ರಂದು) ಈದ್ ಉಲ್‌ ಫಿತರ್‌ ಹಬ್ಬವಿರುವುದರಿಂದ, ಸರಕಾರಿ ರಜೆಯನ್ನು ಬುಧವಾರ ಘೋಷಿಸಿಲಾಗಿದೆ.

ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳನ್ನು ಹೊರತು ಪಡಿಸಿ ರಾಜ್ಯದೆಲ್ಲೆಡೆ ಗುರುವಾರ ಎ.11 ರಂದು ಈದ್‌ ಉಲ್‌ ಫಿತರ್‌ ಹಬ್ಬದ ಆಚರಣೆ ನಡೆಯಲಿದೆ. ಈ ಸಂಬಂಧ ರಾಜ್ಯ ಸರಕಾರದ ಅಧಿಕೃತ ರಜೆ ಗುರುವಾರ ಎ.11 ಕ್ಕೆ ನಿಗದಿಯಾಗಿತ್ತು. ಈ ಹಿನ್ನಲೆಯಲ್ಲಿ ಸ್ಥಳೀಯರು ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ರಜೆ ಬದಲಾಯಿಸುವಂತೆ ಸ್ಪೀಕರ್‌ ಯು ಟಿ ಖಾದರ್ ಅವರಿಗೆ ಮನವಿ ಮಾಡಿದ್ದರು.

ಸ್ಪೀಕರ್ ಅವರು ಈ ಸಂಬಂಧ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಗೆ ಸರಕಾರಿ ರಜೆಯನ್ನು ಮಾರ್ಪಾಡು ಮಾಡುವ ಬಗ್ಗೆ ಪರಿಶೀಲಿಸುವಂತೆ ಸೂಚಿಸಿದ್ದರು. ಸ್ಪೀಕರ್‌ ಸೂಚನೆಯನ್ನು ಪರಿಗಣಿಸಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯವರು, ಜಿಲ್ಲಾಧಿಕಾರಿಯವರಿಗೆ ಸ್ಥಳೀಯ ಪರಿಸ್ಥಿತಿಗನುಸಾರವಾಗಿ ರಜೆ ಮಾರ್ಪಾಡು ಮಾಡುವಂತೆ ಸೂಚನೆ ನೀಡಿದ್ದಾರೆ.

ಈ ಸಂಬಂಧ ಉಡುಪಿ ಹಾಗೂ ದ.ಕ ಜಿಲ್ಲಾಧಿಕಾರಿಗಳು ಏ.10 ರಂದು(ಇಂದು) ಸರಕಾರಿ ಕಚೇರಿಗಳಿಗೆ ರಜೆ ನೀಡಿ ಆದೇಶ ಹೊರಡಿಸಿದ್ದಾರೆ. ಈ ಆದೇಶವು ಮೊದಲೇ ನಿಗದಿಯಾಗಿರುವ ಶಾಲಾ ಕಾಲೇಜುಗಳ ಪರೀಕ್ಷೆಗಳಿಗೆ ಅನ್ವಯಿಸುವುದಿಲ್ಲ.

 
 
 
 
 
 
 
 
 
 
 

Leave a Reply