ಕೊರೋನಾ ಚಿಕಿತ್ಸೆ ನಡುವೆಯೂ ನಿರಂತರ ಜಪಾನುಷ್ಠಾನ

                                      ಕೊರೋನಾ ಚಿಕಿತ್ಸೆ ನಡುವೆಯೂ ನಿರಂತರ ಜಪಾನುಷ್ಠಾನ
ಉಡುಪಿ, ಇಲ್ಲಿನ ಅಷ್ಟ ಮಠಗಳಲ್ಲೊಂದಾದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಕೋವಿಡ್ 19ಸೋಂಕಿನಿಂದ ಬಳಲುತ್ತಿದ್ದು, ಪ್ರಸ್ತುತ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಯ ನಡುವೆಯೂ ಶ್ರೀಪಾದರು ವಿಶ್ರಾಂತಿ ಜೊತೆಗೆ ನಿರಂತರ ಜಪಾನುಷ್ಠಾನಗಳಲ್ಲಿ ತೊಡಗಿಕೊಂಡಿದ್ದಾರೆ. ಶ್ರೀಗಳ ಈ ಕ್ರಮ ಸಾರ್ವಜನಿಕರ ಗಮನ ಸೆಳೆದಿದ್ದು, ಶ್ರೀಗಳ ಆರೋಗ್ಯ ಬಗ್ಗೆ ಆತಂಕಗೊಂಡಿದ್ದ ಭಕ್ತರು ಹಾಗೂ ಅಭಿಮಾನಿಗಳಿಗೆ ಕೊಂಚ ನಿರಾಳವಾಗಿದೆ. ಶ್ರೀಗಳು ಶೀಘ್ರ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿ ಎಂದು ಭಕ್ತರು ಹಾರೈಸುತ್ತಿದ್ದಾರೆ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply