ಕೈ ಸರಕಾರ ಜನತೆಗೆ ಕೈ ಕೊಟ್ಟಿದೆ – ವಿಜಯ್ ಕೊಡವೂರು

ಕರ್ನಾಟಕದ ರಾಜ್ಯ ಸರ್ಕಾರ ಕಾಂಗ್ರೆಸ್ ಜನತೆಗೆ ಕೈ ಕೊಡುವಂತ ದುಸ್ಥಿತಿ ಕಾಣುತ್ತಿದೆ. ರಾಜ್ಯ ಸರಕಾರದ ಚುನಾವಣೆ ಸಂದರ್ಭದಲ್ಲಿ ತಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಅನೇಕ ಬಿಟ್ಟಿ ಭಾಗ್ಯಗಳನ್ನು ಕೊಡುತ್ತೇವೆ ಎಂದು ನೀಡಿದ ಮಾತು ಉಳಿಸುವ ಸಲುವಾಗಿ ಜನತೆಗೆ ಮಣ್ಣೆರೆಚುವ ಸ್ಥಿತಿ ಕಾಣುತ್ತಿದೆ. ಎಲ್ಲಾ ಸಮಾಗ್ರಿಗಳ ಬೆಲೆಗಳನ್ನು ಏರಿಸಿದರೂ ಗ್ಯಾರಂಟಿ ಬಾಗ್ಯಗಳನ್ನು ಜನತೆಗೆ ಸರಿಯಾಗಿ ನೀಡಲು ಆಗುತ್ತಿಲ್ಲ.
ಇನ್ನೂ ಕರ್ನಾಟಕದ ಜನತೆಗೆ ನೋವು ನೀಡಲು ಪೆಟ್ರೋಲ್ ಬೆಲೆ 3 ರೂಪಾಯಿ ಮತ್ತು ಡೀಸೆಲ್ ಬೆಲೆ ರೂ, 3.50  ದರಗಳನ್ನು ಏರಿಕೆ ಮಾಡಿರುವುದು ಜನತೆಗೆ ಮಾಡಿರುವಂತಹ ದ್ರೋಹ. ಆದ್ದರಿಂದ ಈ ದ್ರೋಹದ ಮೂಲಕ ಜನತೆಗೆ ಅಕ್ಕಿ ನೀಡುತ್ತೇವೆ ಉಚಿತವಾಗಿ ವಿದ್ಯುತ್ ನೀಡುತ್ತೇವೆ ಪ್ರತಿ ತಿಂಗಳು 2000 ಗೃಹಲಕ್ಷ್ಮಿ ಭಾಗ್ಯ ಯೋಜನೆಯನ್ನು ನೀಡುತ್ತೇವೆ, ಉಚಿತ ಬಸ್ಸು ನೀಡುತ್ತೇವೆ ಎಂಬ ಗ್ಯಾರಂಟಿಗಳ ಭರವಸೆ ನೀಡಿ ಇನ್ನೊಂದು ಕಡೆಯಲ್ಲಿ ಗಾಳಿ ಮಳೆ ಇಲ್ಲದೆ ಇದ್ದರೂ ನಿತ್ಯ ವಿದ್ಯುತ್ ಕಡಿತಗೊಳಿಸುವುದು ಈ ಮುಖಾಂತರ ಕರ್ನಾಟಕದ ಜನತೆಗೆ ಸಮಸ್ಯೆಯಾಗುತ್ತಿದೆ.
ಇಂತಹನೀಚ ಸರಕಾರ ಉರುಳಿ ಮತ್ತೊಮ್ಮ ಉತ್ತಮ ಸರಕಾರ ಬರಬೇಕಾಗಿದೆ. ಬೇರೆ ಬೇರೆ ಕಾರಣಗಳನ್ನು ನೀಡುವ ಮೂಲಕ ತೈಲಬೆರೆ ಏರಿಕೆ ಆಗಿರುವುದು ಖಂಡನೀಯವಾಗಿದೆ ಎಂದು ವಿಜಯ ಕೊಡವೂರು ಆಗ್ರಹಿಸಿದರು
 
 
 
 
 
 
 
 
 
 
 

Leave a Reply