ಡಾ ಉಷಾ ಚಡಗರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಮೂಲತಃ ವಿಜ್ಞಾನಿಯಾಗಿ ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾದ ( 60 ವರ್ಷದ ಬಳಿಕ) ಬಳಿಕ ಸ್ವಯಂ ಆಸಕ್ತಿಯಿಂದ ಸಂಸ್ಕೃತ ಭಾಷೆಯ ಕಾಗುಣಿತಗಳನ್ನು ಕಲಿತು , ದ್ವೈತ ವೇದಾಂತಾಧ್ಯಯನಕ್ಕೆ ಸಂಪ್ರದಾಯಸ್ಥರಿಂದ ತೊಡಕು ಎದುರಾದರೂ ಡಾ ಬನ್ನಂಜೆ ಗೋವಿಂದಾಚಾರ್ಯರ ಪ್ರೋತ್ಸಾಹದಿಂದ ವೇದಾಂತಶಾಸ್ತ್ರದಲ್ಲಿ ವಿದ್ವತ್ ಸಂಪಾದಿಸಿದ ಪ್ರಾಯಃ ಮೊದಲ ಮಹಿಳೆ ಎಂಬ ಮನ್ನಣೆಗೂ ಪಾತ್ರರಾಗಿ , ಅಲ್ಲಿಗೂ ಅಧ್ಯಯನಾಸಕ್ತಿಯನ್ನು ನಿಲ್ಲಿಸದೇ ಮಧ್ವಶಾಸ್ತ್ರದ ವಿಷಯವೊಂದರ ಮೇಲೆ ಸಂಶೋಧನಾ ಪ್ರಬಂಧವನ್ನು ಮಂಡಿಸಿ ಪಿಎಚ್ ಡಿ ಪದವಿಗೆ ಭಾಜನರಾದ ಅಪರೂಪದ ಸಾಧಕ ಮಹಿಳೆ ಡಾ ಉಷಾ ಚಡಗರನ್ನು ಈ ಬಾರಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಅತ್ಯಂತ ಅಭಿನಂದನೀಯವಾಗಿದೆ . ಈ ಮೂಲಕ ಪ್ರಶಸ್ತಿಯ ಗೌರವ ಹೆಚ್ಚಿಸಿದ ಜಿಲ್ಲಾಡಳಿತಕ್ಕೆ ಶಾಸಕ ಕೆ ರಘುಪತಿ ಭಟ್ಟರಿಗೆ ಮತ್ತು ಪ್ರಶಸ್ತಿ ಪುರಸ್ಕೃತರಾದ ಡಾ ಉಷಾ ಚಡಗರಿಗೆ ಆದರದ ಅಭಿನಂದನೆಗಳು

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply