ವಿಶ್ವ ತಂಬಾಕು ರಹಿತ ದಿನ -2024ರ ಅಂಗವಾಗಿ ಕಲಾಕೃತಿ ಅನಾವರಣ

ವಿಶ್ವ ತಂಬಾಕು ರಹಿತ ದಿನ -೨೦೨೪ ಇದರ ಅಂಗವಾಗಿ ಸಮುದಾಯ ವೈದ್ಯಕೀಯ ವಿಭಾಗ ಕೆ ಎಮ್ ಸಿ ಮಣಿಪಾಲ, ಇವರ ಸಹಯೋಗದೊಂದಿಗೆ ರಚಿಸಿದ ಕಲಾಕೃತಿಯನ್ನು ಕೆ ಎಮ್ ಸಿ ಯ ಅಸೋಸಿಯೆಟ್ ಡಿನ್ ಡಾ.ಕೃಷ್ಣಾನಂದ ಪ್ರಭು ಮತ್ತು ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಅಶ್ವಿನಿ ಕುಮಾರ್ ಅನಾವರಣಗೊಳಿಸಿದರು.

ಸಮುದಾಯ ವೈದ್ಯಕೀಯ ವಿಭಾಗದ ಪ್ರಾದ್ಯಾಪಕ ಡಾ ಮುರಳೀಧರ್ ಕುಲಕರ್ಣಿ ಕಲಾವಿದ ಶ್ರೀನಾಥ್ ಮಣಿಪಾಲ್ ಮತ್ತು ರವಿಹಿರೆಬೆಟ್ಟು ರಚಿಸಿದ ತಂಬಾಕು ಜಾಗೃತಿ ಕಲಾಕೃತಿಯ ಬಗ್ಗೆ ವಿವರಿಸಿದರು.

ಸಮುದಾಯ ವೈದ್ಯಕೀಯ ವಿಭಾಗದ ಡಾ ವೀನಾ ಕಾಮತ್, ಡಾ ಚೈತ್ರಾ ರಾವ್, ಡಾ ಸ್ನೇಹಾ ಕಾಮತ್, ಡಾ ಈಶ್ವರಿ, ಡಾ ಯಶ್, ಡಾ ಅಖಿಲಾ, ಡಾ ಮಂಜುಳ, ಡಾ ಅರುಣ್‌ದಾಸ್, ಸಮುದಾಯ ವೈದ್ಯಕೀಯ ವಿಭಾಗದ ಬೋಧಕೇತರ ಸಿಬ್ಬಂದಿ, ಸ್ನಾತಕೋತ್ತರ ಹಾಗೂ ಪದವಿಪೂರ್ವ ವೈದ್ಯಕೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply