“ಸಿನೆಮಾದ ಸಾಮಾಜಿಕ ಮಹತ್ವ ಏನು?” – ಪ್ರೊ.ಫಣಿರಾಜ್

“ಚೌಕಟ್ಟು ಮತ್ತು ಬಿಂಬ ನಿರ್ಮಾಣ,ಕೆಮರಾ ಕೋನ ಹಾಗು ದೃಷ್ಟಿ ಕೋನಗಳೆಂಬ ವ್ಯಾಕರಣ ಪರಿಕಲ್ಪನೆಗಳ ಅರಿವಿನ ಮೂಲಕ ನಾವು ಚಲನಚಿತ್ರಗಳನ್ನು ಅರ್ಥಮಾಡಿಕೊಳ್ಳಬೇಕು. ಸಿನೆಮಾ ಒಂದು ದೃಶ್ಯ ಮಾಧ್ಯಮವಾಗಿ ನಮ್ಮ ಅಂತರಂಗದ ಕತ್ತಲಕೋಣೆಯಲ್ಲಿ ದಮನಿಸಿಟ್ಟ ಭಾವನೆಗಳನ್ನು ತಟ್ಟಿ ಬಿಡುಗಡೆಗೊಳಿಸುತ್ತದೆ. ಅದು ನಮ್ಮೊಳಗಿನ ಹಿಂಸೆಯನ್ನು ಪುಷ್ಡೀಕರಿಸಬಹುದು ಅಥವಾ ಅದನ್ನು ಭಾವ ಉದಾತ್ತೀಕರಣ ಮಾಡುವ ಸಾಧ್ಯತೆಗಳನ್ನೂ ತೋರಬಹುದು. ಆದರೆ ಯಾವುದೇ ಸಿನೆಮಾವನ್ನು ವಿಮರ್ಶಿಸುವಾಗ ಅದು ಸಾಮಾಜಿಕವಾಗಿ ಎಷ್ಡು ಮಹತ್ವದ್ದು ಅಥವಾ ಸಾಮಾಜಿಕ ಸ್ವಾಸ್ಥ್ಯಕ್ಕೆ ಎಷ್ಟು ಗಂಡಾಂತರಕಾರಿ ಎಂಬುದನ್ನು ಪರಿಗಣಿಸದೆ ಇರಲು ಸಾಧ್ಯವಿಲ್ಲ” ಎಂದು ನಾಡಿನ ಖ್ಯಾತ ಚಲನಚಿತ್ರ ವಿಮರ್ಶಕ ಪ್ರೊ ಕೆ.ಫಣಿರಾಜ್ ಅಭಿಪ್ರಾಯಪಟ್ಟರು.ಅವರು ಈಚೆಗೆ ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ವಿದ್ಯಾರ್ಥಿ- ಶಿಕ್ಷಕರಿಗಾಗಿ ಆಯೋಜಿಸಲಾದ ಚಲನಚಿತ್ರ ರಸಗ್ರಹಣ ಕಾರ್ಯಾಗಾರವನ್ನು ನಡೆಸಿಕೊಡುತ್ತಾ ಹೀಗೆ ಅಭಿಪ್ರಾಯ ಪಟ್ಟರು. ಕಾಲೇಜಿನ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ಕಾರ್ಯಾಗಾರದ ಉದ್ದೇಶವನ್ನು ವಿವರಿಸಿ ಸ್ವಾಗತ ಕೋರಿ ಅಭ್ಯಾಗತರಿಗೆ ಸ್ಮರಣಿಕೆ ನೀಡಿದರು. ಕುಮಾರಿ ನಿರುತ ಭಟ್ ಧನ್ಯವಾದ ಸಲ್ಲಿಸಿದರು.

 
 
 
 
 
 
 
 
 
 
 

Leave a Reply