ಟಿ.ಎ.ಪೈ ಪ್ರೌಢಶಾಲೆ : ವಿಶ್ವ ಯೋಗ ದಿನಾಚರಣೆ

ಕುಂಜಿಬೆಟ್ಟಿನ ಟಿ ಎ ಪೈ ಇಂಗ್ಲೀಷ್ ಮೀಡಿಯಂ ಹೈಸ್ಕೂಲಿನಲ್ಲಿ
ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಶಾಂತಿವನ ಟ್ರಸ್ಟ್ ಇಲ್ಲಿನ ಯೋಗ ಶಿಕ್ಷಕಿ ಶ್ರೀಮತಿ ಅನಿತಾ ಡಿ ಸುವರ್ಣ ದೀಪ ಬೆಳಗಿಸಿ ಉದ್ಫಾಟಿಸಿ ಯೋಗದ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಶಾಲೆಯ ಜೀವಶಾಶಾಸ್ತ್ರ ಶಿಕ್ಷಕಿ ಶ್ರೀಮತಿ ಕಲ್ಪನಾ ಪೈ ಯವರು ಧ್ಯಾನದ ಬಗ್ಗೆ ಪ್ರಾತ್ಯಕ್ಷಿಕೆ
ನಡೆಸಿಕೊಟ್ಟು, ಧ್ಯಾನವು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಸ್ವಾಸ್ತ್ಯವನ್ನು ಕಾಪಾಡುವುದು ಮಾತ್ರವಲ್ಲದೆ ಏಕಾಗ್ರತೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ
ಎಂದರು.

ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಿನೋದಾ ಶೆಟ್ಟಿಯವರು ಪ್ರಾಸ್ತವನೆಗೈದು ಅತಿಥಿಗಳನ್ನು ಸ್ವಾಗತಿಸಿದರು. ಕು.ರಿತಿಕಾ ಆರ್ ನಾಯಕ್ ಅತಿಥಿಗಳನ್ನು ಪರಿಚಯಿಸಿದರು.
ಕುಮಾರಿ ಇಶಾ ಡಿ ಶೆಣೈ ವಂದನಾರ್ಪಣೆಗೈದರು. ಕುಮಾರಿ ಸಾನ್ವಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಕರಾದ ಶ್ರೀ. ಸುಧೀರ್ ಕುಮಾರ್ ಹಾಗೂ ಶಿಕ್ಷಕಿ
ಶ್ರೀಮತಿ ಬೇಜಾವತಿ ಪಿ ಎಸ್ ಕಾರ್ಯಕ್ರಮವನ್ನು ಸಂಘಟಿಸಿದರು.

 
 
 
 
 
 
 
 
 
 
 

Leave a Reply