ಎಸ್.ವಿ.ಟಿ : ಕುಂಬಳೆ ಕೃಷ್ಣ ಭಕ್ತರಿಗೆ ಅಭಿನಂದನೆ

ಶತಮಾನೋತ್ಸವ ಸಂದರ್ಭದಲ್ಲಿ ನಿರ್ಮಾಣಗೊಂಡ ಎಸ್.ವಿ.ಟಿ ವಿದ್ಯಾ ಸಂಸ್ಥೆಗಳ ಅಂಡಾರು ರುಕ್ಮಿಣಿ ಕಿಣಿ ಸಭಾ ಭವನಕ್ಕೆ ಅಂದು ಶ್ರೀಮತಿ ಕುಂಬಳೆ ಬಾಯಿ ಮಂಜುನಾಥ ಭಕ್ತ ಹೆಸರಿನಲ್ಲಿ ವೇದಿಕೆ ನಿರ್ಮಾಣ ಮಾಡುವಲ್ಲಿ ಹಾಗೂ ಇತ್ತೀಚೆಗೆ ನೂತನವಾಗಿ ನಿರ್ಮಾಣಗೊಂಡಿರುವ ಕಟ್ಟಡಕ್ಕೆ ಆರ್ಥಿಕ ನೆರವು ನೀಡಿದ ಕೊಡುಗೈ ದಾನಿಯಾದ ಶ್ರೀಯುತ ಕುಂಬಳೆ ಕೃಷ್ಣ ಭಕ್ತರಿಗೆ ಎಸ್.ವಿ.ಟಿ ವಿದ್ಯಾ ಸಂಸ್ಥೆಗಳ ಎಸ್. ವಿ ಎಜ್ಯುಕೇಶನ್ ಟ್ರಸ್ಟ್(ರಿ.) ಕಾರ್ಕಳದ ವತಿಯಿಂದ ಅಭಿನಂದಿಸಲಾಯಿತು.

ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ವೆಂಕಟರಮಣ ದೇವಳದ ಒಂದನೇ ಮೊಕ್ತೇಸರರಾದ ಕೆ.ಜಯರಾಮ ಪ್ರಭು ವಹಿಸಿದ್ದರು.
ಎಸ್. ವಿ. ಎಜ್ಯುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಕೆ.ಪಿ.ಶೆಣೈ ಪ್ರಾಸ್ತಾವಿಕವಾಗಿ ಮಾತಾಡಿ ಅಭಿನಂದನಾ
ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಕುಂಬಳೆ ಕೃಷ್ಣ ಭಕ್ತರ ಮಗಳಾದ ಅರ್ಚನಾ ಶಾನುಭೋಗ್, ಎಸ್. ವಿ.ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಕೆ. ಮೋಹನದಾಸ್ ಶೆಣೈ, ಉಪಾಧ್ಯಕ್ಷರಾದ ಎನ್. ಗಣೇಶ್ ಕಾಮತ್, ಕೋಶಾಧಿಕಾರಿ ಐ.ರವೀಂದ್ರನಾಥ ಪೈ, ಮುಖ್ಯೋಪಾಧ್ಯಾಯರಾದ ಯೋಗೇಂದ್ರ ನಾಯಕ್, ಜಾನಕಿನಾಥ ರಾವ್, ಉಪನ್ಯಾಸಕ ನೇಮಿರಾಜ ಶೆಟ್ಟಿ ಹಾಗೂ ದೇವಳದ ಆಡಳಿತ ಮುಖ್ಯಸ್ಥರು ಮತ್ತು ಎಸ್. ವಿ.ಟಿ ವಿದ್ಯಾಸಂಸ್ಥೆಗಳ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವೆಂಕಟರಮಣ ಪದವಿ ಕಾಲೇಜಿನ ಪ್ರಾಚಾರ್ಯೆ ಪ್ರೋ. ಉಷಾ ನಾಯಕ್ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮದಾಸ್ ಪ್ರಭು ವಂದಿಸಿದರು. ಅಧ್ಯಾಪಕ ದೇವದಾಸ್ ನಿಸರ್ಗ ನಗರ ನಿರೂಪಿಸಿದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply