ಸ್ನೇಹಲ್ ಸಾಮಂತ್ ಅವರಿಗೆ ಪಿ.ಎಚ್.ಡಿ

ಮಣಿಪಾಲ ತಾಂತ್ರಿಕ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಸ್ನೇಹಲ್ ಸಾಮಂತ್ ಅವರು ಮಂಡಿಸಿದ “ಡಿಸೈನ್ ಆ್ಯಂಡ್ ಇಂಪ್ಲಿಮೆಂಟೇಶನ್ ಆಫ್ ಲೈಟ್ ವೆಯ್ಟ್ ಕ್ರಿಪ್ಟೋಗ್ರಾಫಿಕ್ ಟೆಕ್ನಿಕ್ಸ್ ಫಾರ್ ಸೆಕ್ಯೂರ್ ಡ್ರೋನ್ ಕಮ್ಯುನಿಕೇಶನ್” ಎಂಬ ಸಂಶೋಧನ ಮಹಾ ಪ್ರಬಂಧಕ್ಕೆ ಮಾಹೆ ವಿ. ವಿ ಪಿ.ಎಚ್.ಡಿ ನೀಡಿದೆ.

ಎಂ. ಐ. ಟಿ ಬೆಂಗಳೂರು ಸಿ. ಎಸ್. ಇ ವಿಭಾಗದ ಪ್ರಾಧ್ಯಾಪಕಿ ಹಾಗೂ ಮುಖ್ಯಸ್ಥೆ ಡಾ| ಪ್ರೇಮಾ ಕೆ. ವಿ ಅವರ ಮಾರ್ಗ ದರ್ಶನದಲ್ಲಿ ಹಾಗೂ ಎಂ. ಐ. ಟಿ ಮಣಿಪಾಲದ ಸಿ.ಎಸ್.ಇ ವಿಭಾಗದ ಪ್ರಾಧ್ಯಾಪಕಿ ಡಾ| ಮಮತ ಬಾಲಚಂದ್ರ ಅವರ ಸಹ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ಮಂಡಿಸಿದ್ದಾರೆ

ಇವರು ಎಂ. ಐ. ಟಿ ಮಣಿಪಾಲದ ಆಡಳಿತಾಧಿಕಾರಿ, ಮಾಜಿ ಯೋಧ ರತ್ನಾಕರ ಸಾಮಂತ್ ಹಾಗೂ ಜಯಲಕ್ಷ್ಮೀ ದಂಪತಿಗಳ ಪುತ್ರ.

 
 
 
 
 
 
 
 
 
 
 

Leave a Reply