ಪೂರ್ಣಪ್ರಜ್ಞ ಕಾಲೇಜಿಗೆ ಐದು ರ‍್ಯಾಂಕ್

ಬಿಎಸ್‌ಸಿ ವಿಭಾಗಕ್ಕೆ ಪ್ರಥಮ ರ‍್ಯಾಂಕ್, ಬಿಬಿಎ ವಿಭಾಗಕ್ಕೆ ನಾಲ್ಕು ರ‍್ಯಾಂಕ್.
ಉಡುಪಿ : ಮಂಗಳೂರು ವಿಶ್ವವಿದ್ಯಾಲಯವು 2022-23ನೇ ಸಾಲಿನ ಪದವಿ ವಿಭಾಗದ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ (ಸ್ವಾಯತ್ತ) ಬಿಎಸ್‌ಸಿ ವಿಭಾಗಕ್ಕೆ ಒಂದು, ಬಿಬಿಎ ವಿಭಾಗಕ್ಕೆ ನಾಲ್ಕು ರ‍್ಯಾಂಕ್ ಲಭಿಸಿದೆ.

ಬಿಎಸ್‌ಸಿ ವಿಭಾಗದಲ್ಲಿ ಕು. ಅದಿತಿ ಎನ್ ಪ್ರಥಮ ರ‍್ಯಾಂಕ್, ಬಿಬಿಎಯಲ್ಲಿ ಕು. ವಾರುಣಿ ಹಾಗೂ ಕು. ರಕ್ಷಿತಾ ತೃತೀಯ ರ‍್ಯಾಂಕ್, ಕು. ನಿಖಿತಾ ಯು ಆರನೆಯ ರ‍್ಯಾಂಕ್, ಕು. ಭಟ್ ಜೋತ್ಸ್ನಾ ರವೀಂದ್ರ ಇವರಿಗೆ ಒಂಬತ್ತನೆಯ ರ‍್ಯಾಂಕ್ ಲಭಿಸಿದೆ.

ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷರಾಗಿರುವ ಪರಮಪೂಜ್ಯ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಆಡಳಿತ ಮಂಡಳಿಯವರು, ಪ್ರಾಂಶುಪಾಲರಾದ ಡಾ. ರಾಮು ಎಲ್ ಹಾಗೂ ಅಧ್ಯಾಪಕ ವೃಂದದವರು ಅಭಿನಂದಿಸಿದರು.
 
 
 
 
 
 
 
 
 
 
 

Leave a Reply