ಜೂನ್ ಮೊದಲವಾರ ಪೂರ್ವ ಆಕಾಶದಲ್ಲಿ ಬೆಳಗಿನ ಸೂರ್ಯೋದಯಕ್ಕೆ ಮುನ್ನ ಆರು ಗ್ರಹಗಳನ್ನು ನೋಡಬಹುದು. ಬರೆಕಣ್ಣಿಗೆ ಕಾಣುವ ಶನಿ , ಮಂಗಳ, ಗುರು ಹಾಗೂ ಬುಧನ ಜೊತೆ ಬೈನಾಕುಲರ್ ನಲ್ಲಿ ನೋಡಬಹುದಾದ ನೆಪ್ಚೂನ್ ಹಾಗೂ ಯುರೇನಸ್ ಗಳೂ , ಗ್ರಹಗಳ ಮೆರವಣಿಗೆಯೋ ಎನ್ನುವ ರೀತಿಯಲ್ಲಿ ಕಾಣಿಸಲಿವೆ.
ಕೆಲ ವಾರಗಳಿಂದ ಸೂರ್ಯನ ನೇರ ಬಂದು ಅಸ್ತವಾಗಿದ್ದ ಗುರುಗ್ರಹ , ಜೂನ್ ಒಂದರಿಂದ ಪೂರ್ವ ಆಕಾಶದಲ್ಲಿ ಕಾಣಿಸಲಿದೆ. ಗುರುಗ್ರಹದ ಜೊತೆ ಜೊತೆಯಾಗಿ ಅಪರೂಪದ ಬುಧಗ್ರಹವೂ ಗೋಚರಿಸಲಿದೆ. ಬುಧ ಯಾವಾಗಲೂ ಬರೆಕಣ್ಣಿಗೆ ಕಾಣಿಸುವುದಿಲ್ಲ, ವರ್ಷದಲ್ಲಿ ಬರೇ ಆರು ಬಾರಿ ಕೆಲ ದಿನಗಳು ಕೆಲ ನಿಮಿಷಗಳು ಮಾತ್ರ.
ಸುಮಾರು ಸೂರ್ಯೋದಯಕ್ಕೆ 20ನಿಮಿಷವುಂಚಿತವಾಗಿ ಪೂರ್ವ ಆಕಾಶದಲ್ಲಿ ದಿಗಂತದಿಂದ ಗುರು , ಬುಧ, ಯರೇನಸ್, ಮಂಗಳ, ನೆಪ್ಚೂನ್ ನ ನಂತರ ಶನಿಗ್ರಹಗಳು ಗೋಚರಿಸಲಿವೆ.
ಇವನ್ನೆಲ್ಲ ಪರಿಚಯಿಸಲೋ ಎನ್ನುವಂತೆ ಅಮವಾಸ್ಯೆಗೆ ಸೂರ್ಯನನ್ನ ಸಮೀಪಿಸುವ ಚಂದ್ರ ಈ ಎಲ್ಲಾ ಗ್ರಹಗಳ ಸಮೀಪ ಹಾದು ದಿಗಂತದೆಡೆಗೆ ಸರಿಯುತ್ತಿರುತ್ತದೆ
ಜೂನ್ ಒಂದರಂದು ಶನಿಗ್ರಹದ ಸಮೀಪ, ಜೂನ್ 2 ರಂದು ನೆಪ್ಚೂನ ಮಂಗಳ ಗಳ ಸಮೀಪ , ಜೂನ್ 3 ರಂದು ಯರೇನಸ್ ಸಮೀಪ ಸರಿದು ಜೂನ್ 4ರಂದು ಗುರು ಬುಧ ರ ಸಮೀಪ ಕಾಣಲಿದೆ. ಈ ಆಕಾಶದ ಭವ್ಯತೆಗೆ ಹಣತೆಯಂತೆ ( crescent moon ) ಕಾಣುವ ಬೆಳಗಿನ ಚಂದ್ರ ಎಲ್ಲರನ್ನೂ ಆಕರ್ಶಿಸಲಿದೆ.
ಆಶ್ಚರ್ಯವೆಂದರೆ ಈಗ ಸುಮಾರು 3ಲಕ್ಷದ 70 ಸಾವಿರ ಕಿಮೀ ದೂರದ ಚಂದ್ರ ಕೋಟಿ ಕೋಟಿ ಕಿಮೀ ದೂರದ ಗ್ರಹಗಳ ಜೊತೆ ( ಇಂದು ಬುಧ ಗ್ರಹ 17.5 ಕೋಟಿ ಕಿಮೀ , ಮಂಗಳ 27.8 ಕೋಟಿ ಕಿಮೀ , ಗುರು ಗ್ರಹ 90 ಕೋಟಿ ಕಿಮೀ , ಶನಿಗ್ರಹ. 146.5 ಕೋಟಿ ಕಿಮೀ , ಒಂದೇ ದೂರದಲ್ಲಿರುವಂತೆ ಕಾಣುವುದು.
ನೋಡಿ ಆನಂದಿಸಿ.
ಡಾ. ಎ. ಪಿ . ಭಟ್ ಉಡುಪಿ.
![](https://karavalixpress.com/wp-content/uploads/2024/04/satyanath-ad.jpeg)
![](https://karavalixpress.com/wp-content/uploads/2023/11/WhatsApp-Image-2023-11-10-at-6.56.43-PM-300x300.jpeg)
![](https://karavalixpress.com/wp-content/uploads/2024/01/WhatsApp-Image-2024-01-15-at-4.30.33-PM.jpeg)
![](https://karavalixpress.com/wp-content/uploads/2024/01/WhatsApp-Image-2024-01-15-at-4.31.20-PM.jpeg)
![](https://karavalixpress.com/wp-content/uploads/2024/01/WhatsApp-Image-2024-01-15-at-4.31.21-PM.jpeg)
![](https://karavalixpress.com/wp-content/uploads/2024/01/WhatsApp-Image-2024-01-14-at-3.17.01-PM.jpeg)
![](https://karavalixpress.com/wp-content/uploads/2024/01/WhatsApp-Image-2024-01-13-at-12.44.55-PM.jpeg)
![](https://karavalixpress.com/wp-content/uploads/2024/01/IMG-20231228-WA0095.jpg)
![](https://karavalixpress.com/wp-content/uploads/2024/01/WhatsApp-Image-2024-01-10-at-2.44.28-PM.jpeg)
![](https://karavalixpress.com/wp-content/uploads/2024/03/WhatsApp-Image-2024-03-23-at-5.02.15-PM-1.jpeg)
![](https://karavalixpress.com/wp-content/uploads/2024/03/WhatsApp-Image-2024-03-30-at-1.38.35-PM-1.jpeg)