ಗಾಂಧಿ ಆಸ್ಪತ್ರೆಯಲ್ಲಿ 74ನೇ ಸ್ವಾತಂತ್ರೋತ್ಸವ ಆಚರಣೆ

ಗಾಂಧಿ ಆಸ್ಪತ್ರೆಯಲ್ಲಿ 74ನೇ ಸ್ವಾತಂತ್ರೋತ್ಸವದಲ್ಲಿ ಬೆಂಗಳೂರಿನ ಟಿ.ಸಿ.ಎಸ್. ಕಂಪೆನಿಯ  ಹಿರಿಯ ತಜ್ಞ ಅರುಣ್ ಕುಮಾರ್ ರೆಂಜಾಳ್‌ರವರು ಧ್ವಜಾರೋಹಣಗೈದು ಸ್ವಾತಂತ್ರೋತ್ಸವದ ಮಹತ್ವ ಮತ್ತು ಗಾಂಧಿ ಆಸ್ಪತ್ರೆಯ ಸಾಮಾಜಿಕ ಕಳಕಳಿಯ ಕೆಲಸ, ಸ್ವಚ್ಚತೆಯೊಂದಿಗೆ ಉತ್ತಮ ವೈದ್ಯಕೀಯ ಸೇವೆ ನೀಡುವ ಸಿಬ್ಬಂದಿಗಳ ಕಾರ್ಯದಕ್ಷತೆ ಹಾಗೂ ಪ್ರತೀ ಭಾನುವಾರ ನಡಯುವ ಸ್ವಚ್ಛ್ ಭಾರತ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹಾಗೆಯೇ ಆಸ್ಪತ್ರೆಯ ರಜತ ಮಹೋತ್ಸವಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉಡುಪಿ ನಗರ ಸಭೆಯ ಪೌರ ಕಾರ್ಮಿಕರಾದ ಮನೋಹರ್ ಕರ್ಕಡ, ರವಿ ಕುಲಾಲ್, ನಾಗಾರ್ಜುನ ಪೂಜಾರಿ, ಪ್ರವೀಣ್ ಮತ್ತು ಕೊಟ್ರಿ ಬಾಯಿ ಹಾಗೂ ಆಸ್ಪತ್ರೆಯ ತ್ಯಾಜ್ಯ ವಿಲೇವಾರಿ ಮಾಡುವ ಸೂರಜ್, ಪ್ರಕಾಶ್ ಮತ್ತು ವೀರೇಶರವರನ್ನು ಅಭಿನಂದಿಸಲಾಯಿತು.
ಉಡುಪಿಯ ಉಪ್ಪೂರು ಸಾಲ್ಮರದ ಸ್ಪಂದನ ವಿಶೇಷ ಮಕ್ಕಳ ಶಾಲೆಗೆ ಸಹಾಯಧನ ನೀಡಲಾಯಿತು.
ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಹಲವು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅರ್ಥಿಕ ನೆರವು ನೀಡಲಾಯಿತು. ಪರಿಸರ ಕಾಳಜಿಯ ಪ್ರಯುಕ್ತ ಹಲವಾರು ರೀತಿಯ ಸಸಿಗಳನ್ನು ವಿತರಿಸಲಾಯಿತು.
ಡಾ. ಸುರೇಶ್ ಹೆಗ್ಡೆ, ಡಾ. ಹರ್ಷ ಶೆಟ್ಟಿ, ಡಾ. ವಿದ್ಯಾ ವಿ. ತಂತ್ರಿ, ದಾಮೋದರ್ ಭಟ್, ಹಯವದನ ಭಟ್ ಹಾಗೂ ಪಂಚಮಿ ಟ್ರಸ್ಟ್ನ ಶ್ರೀಮತಿ ಲಕ್ಷ್ಮೀ ಹರಿಶ್ಚಂದ್ರ ಮತ್ತು ಪಂಚಮಿ ಉಪಸ್ಥಿತರಿದ್ದರು.
ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಎಂ. ಹರಿಶ್ಚಂದ್ರರವರು ಪ್ರಸ್ತಾವಿಸಿದರು. ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ ಸ್ವಾಗತಿಸಿದರು. ಶ್ವೇತಾರವರು ನಿರೂಪಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
 
 
 
 
 
 
 
 
 

Leave a Reply