ತಂದೆಯನ್ನೇ ಕೊಚ್ಚಿ ತುಂಡರಿಸಿ ಬೋರ್ವೆಲ್ ಗುಂಡಿಗೆ ಹಾಕಿ ಮುಚ್ಚಿಟ್ಟ ಮಗ!

ಕುಡಿದು ಬಂದು ಜಗಳವಾಡುತ್ತಿದ್ದ ತಂದೆಯನ್ನು ಮಗನೇ ಕೊಡಲಿ ಬೀಸಿ ಕೊಚ್ಚಿದ್ದಲ್ಲದೆ, ದೇಹವನ್ನು ತುಂಡು ತುಂಡು ಮಾಡಿ ಹೊಲದ ನಡುವಿನ ನಿರುಪಯುಕ್ತ ಬೋರ್ವೆಲ್ ಗೆ ಹಾಕಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ಘಟನೆ ಬಾಗಲಕೋಟ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. 

ಬಾಗಲಕೋಟೆ ಜಿಲ್ಲೆಯ ಮುಧೋಳದ ಜಂಜರಕೊಪ್ಪ ಗಲ್ಲಿಯಲ್ಲಿ ಘಟನೆ ನಡೆದಿದ್ದು ಪರಶುರಾಮ (54) ಕೊಲೆಯಾದ ವ್ಯಕ್ತಿ. ಕೊಲೆ ಆರೋಪಿ, ಆತನ ಮಗ ವಿಠ್ಠಲ್ ನನ್ನು ಪೊಲೀಸರು ಬಂಧಿಸಿದ್ದಾರೆ. ‌

ತಾಯಿ ಸರಸ್ವತಿ ಗಂಡ ಕಾಣೆಯಾಗಿರುವ ಬಗ್ಗೆ ಮುಧೋಳ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮುಧೋಳ ಪೊಲೀಸರು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಸಂಶಯದ ಮೇರೆಗೆ ಮಗ ವಿಠಲ್ ನನ್ನು ವಶಕ್ಕೆ ಪಡೆದಾಗ ನಿಜ ವಿಚಾರ ತಿಳಿದುಬಂದಿದೆ. 

ಡಿಸೆಂಬರ್ 7 ರಂದು ಹೊಲದ ಶೆಡ್ ನಲ್ಲಿ ಕೊಲೆ ಕೃತ್ಯ ನಡೆದಿತ್ತು. ಆನಂತರ, ಕೊಲೆಯ ಬಗ್ಗೆ ಗುರುತು ಸಿಗಬಾರದು ಮತ್ತು ಯಾರಿಗೂ ತಿಳಿಯಬಾರದು ಎನ್ನುವ ಉದ್ದೇಶದಿಂದ ಹೊಲದ ನಡುವೆ ಇದ್ದ ನಿರುಪಯುಕ್ತ ಕೊಳವೆ ಬಾವಿಯಲ್ಲಿ ದೇಹವನ್ನು ತುಂಡರಿಸಿ ಒಳಗೆ ತುರುಕಿದ್ದ. ನಿತ್ಯ ಕುಡಿದು ಬಂದು ಮನೆಯಲ್ಲಿ ಜಗಳ ಮಾಡುತ್ತಿದ್ದರಿಂದ ತ‌ಂದೆ – ಮಗನಿಗೆ ಜಟಾಪಟಿ ಉಂಟಾಗಿತ್ತು. 

ಪೊಲೀಸರು ಶವದ ಪತ್ತೆಗಾಗಿ ಬೋರ್ವೆಲ್ ಗುಂಡಿಯನ್ನು ಜೆಸಿಬಿಯಲ್ಲಿ ತೋಡಿದ್ದು ಹುಡುಕಾಟ ನಡೆಸುತ್ತಿದ್ದಾರೆ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply