ಮೋದಿ ಪದಗ್ರಹಣದ ವಿಜಯೋತ್ಸವದಲ್ಲಿ ಪಾಲ್ಗೊಂಡ ಬಿಜೆಪಿ ಕಾರ್ಯಕರ್ತರಿಗೆ ಚಾಕು ಇರಿದು ಹಲ್ಲೆ!

ಮಂಗಳೂರು ಹೊರಭಾಗದ ಮುಡಿಪು ಸಮೀಪದ ಬೋಳಿಯಾರು ಎಂಬಲ್ಲಿನ ಸಮಾಧಾನ್ ಬಾರ್ ಎದುರುಗಡೆ ಸಕ್ರಿಯ ಬಿಜೆಪಿ ಕಾರ್ಯಕರ್ತ ಒಬ್ಬನಿಗೆ ಸುಮಾರು 30-40 ಜನ ಸೇರಿಕೊಂಡು ಚಾಕು ಇರಿದು ಹಲ್ಲೆ ನಡೆಸಿರುವ ಘಟನೆ ನಡೆದಿದೆ. 

ಹಲ್ಲೆಗೊಳಗಾದ ವ್ಯಕ್ತಿ ಬಿಜೆಪಿಯ ಸಕ್ರಿಯ ಕಾರ್ಯಕರ್ತ ಬೋಳಿಯಾರು ನಿವಾಸಿ ಹರೀಶ್ ಅಂಚನ್ ಧರ್ಮನಗರ ಎಂದು ತಿಳಿದುಬಂದಿದೆ. ಮೋದಿ ಪದಗ್ರಹಣದ ವಿಜಯೋತ್ಸವದಲ್ಲಿ ತೊಡಗಿ ನಂತರ ತನ್ನ ಊರಿಗೆ ಮರಳುವ ಸಂದರ್ಭದಲ್ಲಿ ಹರೀಶ್ ಎಂಬಾತನನ್ನು ತಡೆದ 40 ಜನರ ಮುಸ್ಲಿಂಮರ ತಂಡ ಅಡ್ಡಗಟ್ಟಿ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಮುಂದಿನ ವರದಿ ಪೊಲೀಸ್ ಇಲಾಖೆಯ ತನಿಖೆಯಿಂದ ಹೊರಬರಲಿದೆ.

 
 
 
 
 
 
 
 
 
 
 

Leave a Reply