ರೌಡಿ ಶೀಟರ್ ಕಿಶನ್ ಹೆಗ್ಡೆ ಕೊಲೆಗೈದ ಐವರು ಆರೋಪಿಗಳ ಬಂಧನ.?

ಹಿರಿಯಡ್ಕ: ಸೆ. 24ರಂದು ಹಿರಿಯಡ್ಕ ಪೇಟೆಯಲ್ಲಿ ನಡೆದಿದ್ದ ರೌಡಿ ಶೀಟರ್ ಕಿಶನ್ ಹೆಗ್ಡೆ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಇಂದು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.ಪ್ರಮುಖ ಆರೋಪಿಯಾದ ಮನೋಜ್ ಕೋಡಿಕೆರೆ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಪೊಲೀಸರು ನ್ಯಾಯಲಯಕ್ಕೆ ಹಾಜರು ಪಡಿಸಲಿದ್ದಾರೆ. ಮುಂದಿನ ತನಿಖೆಗಾಗಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ಈಗಾಗಲೇ ಈ ಕೊಲೆಗೆ ಬಳಸಿದ್ದ ರಿಟ್ಜ್ ಮತ್ತು ಇನೋವಾ ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಕಿಶನ್ ಹೆಗ್ಡೆ ಹಾಗೂ ಮನೋಜ್ ಕೋಡಿಕೆರೆ ಮಧ್ಯೆ ಹಣಕಾಸಿನ ವಿಚಾರ ದಲ್ಲಿ ತಕಾರಾರು ಉಂಟಾಗಿದ್ದು. ಈ ವೈಮನಸ್ಸಿನಲ್ಲಿ ಮನೋಜ್ ಕೋಡಿಕೆರೆ ಇತರರೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ಸೆ. 24ರಂದು ಮಧ್ಯಾಹ್ನ ದಿವ್ಯರಾಜ್ ಶೆಟ್ಟಿ, ಕಿಶನ್ ಹೆಗ್ಡೆ ಹಾಗೂ ಹರಿ ಪ್ರಸಾದ್ ಶೆಟ್ಟಿ ಹಿರಿಯಡ್ಕ ವೀರಭದ್ರ ದೇವಾಲಯಕ್ಕೆ ಹೋಗಲು ಕಾರಿನಿಂದ ಇಳಿಯುತ್ತಿರುವಾಗ ಕಾರಿನಲ್ಲಿ ಬಂದ 7-8 ಮಂದಿ ದುಷ್ಕರ್ಮಿ ಗಳು ತಲವಾರಿನಿಂದ ಕಡಿದು ಕೊಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಹರಿಪ್ರಸಾದ್ ಶೆಟ್ಟಿ ಗಾಯಗೊಂಡಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply