ರಾ.ಹೆ 169: ಸಾಣೂರಿನಲ್ಲಿ ಗುಡ್ಡ ಕುಸಿತದ ಭೀತಿ!

ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದಿಂದ ದ.ಕ .ಜಿಲ್ಲೆ ಮಂಗಳೂರಿನ ಬಿಕರ್ನಕಟ್ಟೆಯ ವರೆಗಿನ 45 ಕಿ.ಮೀ. ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ, ರಸ್ತೆ ಸುರಕ್ಷತೆಯ ಬಗ್ಗೆ ನಿರ್ಲಕ್ಷದ ಧೋರಣೆಯಿಂದ ಜನ ಜೀವಭಯದಿಂದ ಓಡಾಡುವಂತಾಗಿದೆ. 

 ಟಾರ್ಪಾಲ್ ತಂತ್ರಜ್ಞಾನ…!?!?

ರಾಷ್ಟ್ರೀಯ ಹೆದ್ದಾರಿ _169 ಸಾಣೂರು ಯುವಕ ಮಂಡಲ ಕಟ್ಟಡದ ಮುಂಭಾಗದ ಮೈದಾನದಿಂದ ಪದ್ಮನಾಭನಗರದ ಕಡೆಗೆ ಹೋಗುವ ರಸ್ತೆಯವರೆಗೆ ಹೆದ್ದಾರಿ ಕಾಮಗಾರಿಯ ವೇಳೆ ಗುಡ್ಡ ಕಡಿದಿದ್ದು, ಗುಡ್ಡಜರಿದು ಬೀಳುವ ಭಾಗಕ್ಕೆಕಳೆದ ವರ್ಷದ ಮಳೆಗಾಲದ ಸಂದರ್ಭದಲ್ಲಿ ಟಾರ್ಪಾಲು ಹೊದಿಸಿ ಗುಡ್ಡಜರಿತಕ್ಕೆ ಹೊಸ ತಂತ್ರಜ್ಞಾನವನ್ನು ಗುತ್ತಿಗೆದಾರ *ಕಂಪನಿ ಪರಿಚಯಿಸಿತ್ತು.

ಆ ಬಳಿಕ ಹಲವಾರು ಬಾರಿ ರಾಷ್ಟ್ರೀಯ ಹೆದ್ದಾರಿ ಇಲಾಕಾಧಿಕಾರಿಗಳಿಗೆ ಗುತ್ತಿಗೆದಾರ ಕಂಪನಿ ದಿಲೀಪ್ ಬಿಲ್ಡ್ ಕಾನ್ ಕಂಪನಿಯವರಿಗೆ ,ಡಿಸಿ ಮತ್ತು ಜನಪ್ರತಿನಿಧಿಗಳಿಗೆ ಆದಷ್ಟು ಶೀಘ್ರ ಗುಡ್ಡಜರಿದ ಭಾಗಕ್ಕೆ ತಡೆಗೋಡೆ ನಿರ್ಮಾಣ ಮಾಡದಿದ್ದರೆ ಪಕ್ಕದಲ್ಲಿರುವ ಹೈ ಟೆನ್ಶನ್ ಟವರ್ ಮತ್ತು ಅದರ ಹಿಂಭಾಗದಲ್ಲಿರುವ ಒಂದು ಲಕ್ಷ ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಟ್ಯಾಂಕ್ ಧರಾಶಾಯಿಯಾಗುವ ಬಹುದೊಡ್ಡ ಅಪಾಯಕಾದಿದೆ ಎಂದು ಸಾರ್ವಜನಿಕರು ತಿಳಿಸಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. 

 ಕಳೆದ ವರ್ಷ ಪಶು ಚಿಕಿತ್ಸಾಲಯ ಧರಾಶಾಯಿ..!

ಕಳೆದ ವರ್ಷ ಇದೇ ಗುಡ್ಡದ ಪಕ್ಕದಲ್ಲಿದ್ದ ಪಶು ಚಿಕಿತ್ಸಾಲಯ ಕಟ್ಟಡ ಜರಿದು ಬೀಳುವ ಸಂಭವವಿದೆ ಎಂದು ಸಾರ್ವಜನಿಕರು ಎಚ್ಚರಿಸಿದಾಗ ಅಂದಿನ ಡಿಸಿ ಶ್ರೀ ಕೂರ್ಮ ರಾವ್ ರವರು ಕೂಡಲೇ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಎಚ್ಚರಿಕೆ ನೀಡಿ ಕಟ್ಟಡ ತೆರವು ಗೊಳಿಸಿ ಸಂಭಾವ್ಯ ಅಪಾಯದಿಂದ ಪಾರು ಮಾಡಿದ್ದರು. 

ಇದೀಗ ಹೈ ಟೆನ್ಶನ್ ವಯರ್ ಟವರ್ ಪಕ್ಕದಲ್ಲಿಯೇ ಗುಡ್ಡದ ಮಣ್ಣು ಭಾರಿ ಮಳೆಗೆ ಸಡಿಲಗೊಂಡು ಕುಸಿಯತೊಡಗಿದೆ.

ಇನ್ನೆರಡು ದಿನ ನಿರಂತರ ಧಾರಾಕಾರ ಮಳೆ ಸುರಿದರೆ ಗುಡ್ಡದ ಮಣ್ಣು ಸಡಿಲವಾಗಿ ರಸ್ತೆಗೆ ಬಿದ್ದು, ಭಾರಿ ಅಪಾಯ ಸಂಭವಿಸಲಿದೆ.

 

 ರಸ್ತೆ ಸುರಕ್ಷತೆಯ ಬಗ್ಗೆ ದಿವ್ಯ ನಿರ್ಲಕ್ಷ

ಕಳೆದ ಒಂದು ವರ್ಷದಿಂದ ಈ ಬಗ್ಗೆ ಹಲವಾರು ಪತ್ರಿಕಾ ವರದಿಗಳು, ಸಚಿವರು,ಶಾಸಕರು, ಡಿಸಿ, ನೇತೃತ್ವದಲ್ಲಿ ನಡೆದ ಹೆದ್ದಾರಿ ಪ್ರಗತಿ ಪರಿಶೀಲನ ಸಭೆಯ ಸಂದರ್ಭದಲ್ಲಿ, ಸಾಮಾಜಿಕ ಜಾಲತಾಣದ ಮೂಲಕ ಸಂಬಂಧಪಟ್ಟವರಿಗೆ ಎಚ್ಚರಿಸಿದ್ದರೂ ಕಣ್ಣಿದ್ದೂ ಕುರುಡರು …ಕಿವಿ ಇದ್ದೂ ಕಿವುಡರು… ಎನ್ನುವ ರೀತಿಯಲ್ಲಿ ವರ್ತಿಸುತ್ತಿರುವ ಹೆದ್ದಾರಿ ಇಲಾಖೆ, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳೇ ಮುಂದೆ ಸಂಭವಿಸುವ ಎಲ್ಲಾ ದುರಂತಗಳಿಗೆ ಹೊಣೆಗಾರರಾಗಬೇಕಾಗುತ್ತದೆ.

 ಭಾರಿ ಪ್ರತಿಭಟನೆಯ ಎಚ್ಚರಿಕೆ

ಭಾರಿ ದುರಂತ ಸಂಭವಿಸುವ ಮೊದಲೇ ಕೂಡಲೇ ಕಾರ್ಯ ಪ್ರವೃತ್ತರಾಗಿ ತಾತ್ಕಾಲಿಕವಾಗಿ ಗುಡ್ಡದ ಮಣ್ಣು ಜರಿದು ಬೀಳದಂತೆ ವ್ಯವಸ್ಥೆಯ ಜೊತೆಗೆ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಹೆದ್ದಾರಿ ಇಲಾಖೆ ಮುಂದಾಗದಿದ್ದರೆ ಗ್ರಾಮ ಪಂಚಾಯತ್ ಆಡಳಿತ ವಿವಿಧ ಸಾಮಾಜಿಕ ಸಂಘಟನೆಗಳು, ಹೆದ್ದಾರಿ ಹೋರಾಟ ಸಮಿತಿ ಮತ್ತು ಸ್ಥಳೀಯ ನಾಗರಿಕರು ಭಾರೀ ಪ್ರತಿಭಟನೆ ಮಾಡಬೇಕಾಗಿದೀತು ಎಂದು ರಾಷ್ಟ್ರೀಯ ಹೆದ್ದಾರಿ ಭೂ ಮಾಲಕರ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ರವರು ಎಚ್ಚರಿಸಿರುತ್ತಾರೆ.

 
 
 
 
 
 
 
 
 
 
 

Leave a Reply