ಮಾಹೆಯಲ್ಲಿ ವೈದ್ಯಕೀಯ ಉಪಕರಣಗಳ ವಿನ್ಯಾಸ, ಅಭಿವೃದ್ಧಿ ಮತ್ತು ವಾಣಿಜ್ಯೀಕರಣದ ಕುರಿತ ಮಹತ್ತ್ವದ ಕಾರ್ಯಾಗಾರ

ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ [ಮಾಹೆ] ಸಂಸ್ಥೆಯು ವಿಜ್ಞಾನ ಮತ್ತು ತಂತ್ರಜ್ಞಾನ [ಡಿಎಸ್‌ಟಿ] ವಿಭಾಗ, ಭಾರತ ಸರ್ಕಾರ ಇದರ ಸಹಭಾಗಿತ್ವದೊಂದಿಗೆ ಮಿಡಾಸ್‌ [ಮೆಡಿಕಲ್‌ ಇನ್‌ಸ್ಟ್ರುಮೆಂಟ್ಸ್‌, ಡಿವೈಸಸ್‌ ಆ್ಯಂಡ್‌ ಎಲೈಡ್‌ ಸರ್ವಿಸಸ್‌- ಎಂಐಡಿಎಎಸ್‌ ] ಕೇಂದ್ರವನ್ನು ಆರಂಭಿಸಿದ್ದು, ಸಚಿವಾಲಯದಿಂದ ಇದು ಇನ್ಸ್ಟಿಟ್ಯೂಟ್ ಆಫ್ ಎಮಿನೆನ್ಸ್ ಎಂದು ಗುರುತಿಸಲ್ಪಟ್ಟಿದೆ. ವೈದ್ಯಕೀಯ ಉಪಕರಣಗಳ ವಿನ್ಯಾಸ, ಅಭಿವೃದ್ಧಿ ಮತ್ತು ವಾಣಿಜ್ಯೀಕರಣಕ್ಕೆ ಸಂಬಂಧಿಸಿ ಮಹತ್ತ್ನದ ಕಾರ್ಯಾಗಾರವನ್ನು ಆಯೋಜಿಸಿತ್ತು.

ಈ ಕಾರ್ಯಾಗಾರವನ್ನು ಉದ್ಘಾಟಿಸಿದ ಮಾಹೆಯ ಉಪಕುಲಪತಿಗಳಾದ ಲೆ. ಜ. [ಡಾ.] ಎಂ. ಡಿ. ವೆಂಕಟೇಶ್‌ ಅವರು ಮಾತನಾಡಿ, ’ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ ಮತ್ತು ಮಾಹೆಯ ಸಹಯೋಗದಲ್ಲಿ ಮಿಡಾಸ್‌ [ಎಂಐಡಿಎಎಸ್‌- ವೈದ್ಯಕೀಯ ಸಾಧನಗಳು, ಉಪಕರಣಗಳು ಮತ್ತು ಸಂಬಂಧಿತ ಸೇವೆಗಳು] ಒಂದು ಉತ್ತಮ ಉಪಕ್ರಮವಾಗಿ ಹೊರಹೊಮ್ಮಿದ್ದು ಭವಿಷ್ಯದಲ್ಲಿ ಶಿಕ್ಷಣವೇತ್ತವರಿಗೆ , ಉದ್ಯಮಶೀಲರಿಗೆ ಇದರಿಂದ ವ್ಯಾಪಕವಾದ ಪ್ರಯೋಜನವಿದೆ. ಮಾಹೆ ಮಾತ್ರವಲ್ಲದೆ, ಅನ್ಯ ಸಂಸ್ಥೆಗಳ ಬೋಧಕರು, ವೈದ್ಯಕೀಯ ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿರುವುದು ಇದರ ಮಹತ್ತ್ವವನ್ನು ಎತ್ತಿಹಿಡಿಯುತ್ತದೆ’ ಎಂದರು.   

ಮಾಹೆ ಸಹ-ಉಪಕುಲಪತಿಗಳಾದ ಡಾ. ಶರತ್‌ ಕೆ. ರಾವ್‌ ಅವರು ಮಿತ ವೆಚ್ಚ ಮತ್ತು ಅತ್ಯುತ್ತಮ ಗುಣಮಟ್ಟದ ದೇಸೀಯವಾದ ವೈದ್ಯಕೀಯ ಉಪಕರಣಗಳ ಅಗತ್ಯ ಇಂದು ಇದೆ. ಈ ನಿಟ್ಟಿನಲ್ಲಿ ಸಕ್ರಿಯವಾಗಿ ಸಂಶೋಧನೆಗಳು ನಡೆಯಬೇಕಿವೆ’ ಎಂದರು. 

ಮಣಿಪಾಲ್‌ ಕಾಲೇಜ್ ಆಫ್ ಹೆಲ್ತ್‌ ಪ್ರೊಫೆಶನಲ್ಸ್‌ನ ಡೀನ್‌ ಮತ್ತು ಡಿಎಸ್‌ಟಿ-ಮಾಹೆ ಹಬ್‌ನ ಪ್ರಧಾನ ಸಂಚಾಲಕ ಡಾ. ಜಿ. ಅರುಣ್‌ ಮಯ್ಯ ಸ್ವಾಗತಿಸಿ, ಕೇಂದ್ರದ ಉದ್ದೇಶಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. 

ಕಾರ್ಯಾಗಾರದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ತಜ್ಞರಾದ ಹಿರಿಯ ಸಲಹೆಗಾರ ಡಾ. ಲಾಜಾರ್‌ ಮಾಥ್ಯೂ, ಪುಣೆಯ ವೆಂಚರ್‌ ಸೆಂಟರ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಪ್ರೇಮನಾಥ್‌, ಚಂಢೀಘರ್‌ನ ಪಿಜಿಐಎಂಇಆರ್‌ನ ಡಾ. ಜೋಸೆಫ್‌ ಎಲ್‌ ಮಾಥ್ಯೂ, ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ ವಿಶ್ವವಿದ್ಯಾನಿಲಯದ ಯುಸಿಟಿ ಮೆಡ್‌ ಟೆಕ್‌ ಲ್ಯಾಬೋರೇಟರಿಯ ಮುಖ್ಯಸ್ಥ ಡಾ. ಸುದೇಶ್‌ ಎಸ್‌. ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.  

ಆರೋಗ್ಯ ರಕ್ಷಣೆಯ ತಂತ್ರಜ್ಞಾನ ಅಭಿವೃದ್ಧಿಯ ವಿವಿಧ ಆಯಾಮಗಳಿಗೆ ಸಂಬಂಧಿಸಿ ತರಬೇತಿ ನೀಡುವುದು ಪ್ರಸ್ತುತ ಡಿಎಸ್‌ಟಿ-ಮಾಹೆ ಹಬ್‌ನ ಮುಖ್ಯ ಉದ್ದೇಶವಾಗಿದೆ. ಪ್ರಸ್ತುತ ಕಾರ್ಯಾಗಾರವು ವಿನ್ಯಾಸ, ಅಭಿವೃದ್ದಿ ಮತ್ತು ವಾಣಿಜ್ಯೀಕರಣಕ್ಕೆ ಸಂಬಂಧಿಸಿ ಆಯೋಜನೆಗೊಂಡಿರುವುದು ಗಮನಾರ್ಹವಾಗಿದೆ.

ಇಂದಿನ ಆರೋಗ್ಯಪಾಲನೆಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಪಾತ್ರ ಮಹತ್ತ್ವದ್ದಾಗಿದೆ. ಆಸ್ಪತ್ರೆ ಮತ್ತು ಆರೋಗ್ಯ ಶುಶ್ರೂಷೆ ಕೇಂದ್ರಗಳಲ್ಲಿ ದುಬಾರಿಯಾದ ವೈದ್ಯಕೀಯ ಉಪಕರಣಗಳನ್ನು ಬಳಸುತ್ತಾರೆ ಮತ್ತು ಇವುಗಳನ್ನು ವಿದೇಶಗಳಿಂದ ಆಮದು ಮಾಡಲಾಗುತ್ತದೆ. ನಮ್ಮ ದೇಶದಲ್ಲಿಯೇ ಈ ಉಪಕರಣಗಳನ್ನು ತಯಾರಿಸುವ ಪ್ರಯತ್ನಗಳು ನಡೆದಿದ್ದರೂ ಯಶಸ್ಸು ಬಹಳ ಮಿತವಾದದ್ದಾಗಿದೆ. ಇದರ ಬಗ್ಗೆ ಅಧ್ಯಯನ ಮತ್ತು ಸಂಶೋಧನೆ ನಡೆಸುವ ಆಶಯದಲ್ಲಿ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಬೆಂಬಲದೊಂದಿಗೆ ಮಾಹೆಯು ಮಿಡಾಸ್‌ [ಎಂಐಡಿಎಎಸ್‌- ವೈದ್ಯಕೀಯ ಸಾಧನಗಳು, ಉಪಕರಣಗಳು ಮತ್ತು ಸಂಬಂಧಿತ ಸೇವೆಗಳು] ನ ಮೂಲಕ ಸಕ್ರಿಯವಾಗಿ ಸಂಶೋಧನೆ ಮತ್ತು ಪ್ರಯೋಗಗಳಲ್ಲಿ ಉಪಕ್ರಮಿಸಿವೆ. [ಮಿಡಾಸ್‌ ಎಂಐಡಿಎಎಸ್‌] ಖಾಸಗಿ-ಸರ್ಕಾರಿ ಮಾದರಿಯ ಸಹಭಾಗಿತ್ವವಾಗಿದೆ.

ಯಾವುದೇ ರೀತಿ ವಿಚಾರಣೆ ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :

ಡೆಪ್ಯುಟಿ ಡೆರೆಕ್ಟರ್‌,- ಸಾರ್ವಜನಿಕ ಸಂಪರ್ಕ ಮತ್ತು ಸಂವಹನ. 

ದೂರವಾಣಿ : 7338625909, ಈಮೇಲ್‌: [email protected]

 
 
 
 
 
 
 
 
 
 
 

Leave a Reply