ಲಯನ್ಸ್ ಕ್ಲಬ್ ಉಡುಪಿ ವತಿಯಿಂದ ಎನ್-95 ಮಾಸ್ಕ್‌ ಕೊಡುಗೆ

ಉಡುಪಿ : ಲಯನ್ಸ್ ಕ್ಲಬ್ ಉಡುಪಿ ವತಿಯಿಂದ ಜಿಲ್ಲಾ ಆರೋಗ್ಯ ಇಲಾಖೆಯ ಕೊರೊನಾ ವಾರಿಯರ್ಸ್‌ಗಳ ಉಪಯೋಗಕ್ಕೆಂದು ಒಟ್ಟು ರೂ. 20,000 ಮೊತ್ತದ 200 ಎನ್-95 ಮಾಸ್ಕ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು.

ಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷ ಪ್ರಸಾದ್ ಶೆಟ್ಟಿ ವರ್ವಾಡಿ ಅವರು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ಅವರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಹಸ್ತಾಂತರಿಸಿದರು. ಪ್ರಸಾದ್ ಶೆಟ್ಟಿ, ಲಯನ್ಸ್ ಕ್ಲಬ್ ಉಡುಪಿ ನಿರ್ದೇಶಕ ಡಾ. ಕೆ.ಕೆ. ಕಲ್ಕೂರ ಹಾಗೂ ಗಿರಿಜಾ ಸರ್ಜಿಕಲ್ಸ್‌ನ ಮಾಲಕ ರವೀಂದ್ರ ಶೆಟ್ಟಿ ಅವರು ಜಂಟಿಯಾಗಿ ಈ ಮಾಸ್ಕ್‌ಗಳನ್ನು ಪ್ರಾಯೋಜಿಸಿದ್ದರು.

ಲಯನ್ಸ್ ಕ್ಲಬ್ ಕಾರ್ಯದರ್ಶಿ ಅಲೆವೂರು ದಿನೇಶ್ ಕಿಣಿ, ಕೋಶಾಧಿಕಾರಿ ಲೂಯಿಸ್ ಲೋಬೊ, ಜಿಲ್ಲಾ ಕುಟುಂಬ ಯೋಜನಾಧಿ ಕಾರಿ ಡಾ. ಶ್ರೀರಾಮ್ ರಾವ್, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ ಡಾ. ರಾಮ, ಬೈಂದೂರು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾ ನಂದ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply