ಉಡುಪಿಯಲ್ಲಿ 79 ಮಂದಿ ಗುಣಮುಖ

ಉಡುಪಿಯಲ್ಲಿ 79 ಮಂದಿ ಗುಣಮುಖ

ಜಿಲ್ಲೆಯ ಕೊರೊನಾ ಸೋಂಕಿತರ ಪೈಕಿ ಜು. 25ರಂದು 79 ಮಂದಿ ಗುಣಮುಖರಾಗಿದ್ದಾರೆ. ಆ ಮೂಲಕ ಜಿಲ್ಲೆಯ ಒಟ್ಟು ಗುಣಮುಖರಾದವರ ಸಂಖ್ಯೆ 2008 ತಲುಪಿದೆ. ಜಿಲ್ಲೆಯಲ್ಲಿ ಶನಿವಾರ 182 ಹೊಸ ಕೋವಿಡ್ 19 ಪ್ರಕರಣ ಪತ್ತೆಯಾಗಿದೆ. ಆ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ ೩,೨೧೮ ತಲುಪಿದೆ. ಪ್ರಸ್ತುತ 1199 ಸಕ್ರಿಯ ಪ್ರಕರಣಗಳಿವೆ. ಅವರಲ್ಲಿ 539ಮಂದಿ ಗೃಹ ಚಿಕಿತ್ಸೆಯಲ್ಲಿದ್ದಾರೆ. ಇಂದು28 ಮಂದಿ ಐಸೊಲೇಶನ್ ವಾರ್ಡಿಗೆ ದಾಖಲಾಗಿದ್ದಾರೆ. 17 ಮಂದಿ ಬಿಡುಗಡೆಗೊಂಡಿದ್ದಾರೆ. 592 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದೆ. ಇಂದಿನ ಲಭ್ಯ ವರದಿ ಪೈಕಿ 893 ನೆಗೆಟಿವ್ ವರದಿ ಬಂದಿದೆ. ಇನ್ನೂ ೫೨೮ ವರದಿ ಬಾಕಿ ಇದೆ ಎಂದು ಡಿಎಚ್‌ಓ ಡಾ. ಸುಧೀರಚಂದ್ರ ಸೂಡ ತಿಳಿಸಿದ್ದಾರೆ.

ಈರ್ವರ ಸಾವು
ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಈರ್ವರು ಸಾವನ್ನಪ್ಪಿದ್ದಾರೆ. ಆ ಮೂಲಕ ಕೊರೊನಾ ಪೀಡಿತರಾಗಿ ಜಿಲ್ಲೆಯಲ್ಲಿ ಒಟ್ಟು ೧೫ ಮಂದಿ ಸಾವನ್ನಪ್ಪಿದಂತಾಗಿದೆ. ಕುಂದಾಪುರ ಬಸ್ರೂರು ಸಮೀಪದ ಕೋಣಿ ನಿವಾಸಿ 63ರ ಹರೆಯದ ವ್ಯಕ್ತಿಯೋರ್ವರು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸೆಯಲ್ಲಿರುವಾಗಲೇ ಶುಕ್ರವಾರ ರಾತ್ರಿ ಸಾವನ್ನಪ್ಪಿದ್ದಾರೆ. ಅವರಿಗೆ ಕೊರೊನಾ ದೃಢವಾಗಿದೆ.
ಶ್ವಾಸಕೋಶ ಮತ್ತು ಕಿಡ್ನಿ ಸಮಸ್ಯೆಯಿಂದಾಗಿ ಮಣಿಪಾಲ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿವಮೊಗ್ಗ ಜಿಲ್ಲೆಯ 75ರ ಹರೆಯದ ವೃದ್ಧರೋರ್ವರು ಶನಿವಾರ ಅಸುನೀಗಿದ್ದಾರೆ.  

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply