Janardhan Kodavoor/ Team KaravaliXpress
30.6 C
Udupi
Wednesday, August 17, 2022
Sathyanatha Stores Brahmavara

ರಾಜ್ಯದ ಮೊದಲ ರೋ ರೋ ರೈಲು ಸೇವೆಗೆ ಚಾಲನೆ

ಬೆಂಗಳೂರು: ಬೆಂಗಳೂರು ನಗರದಿಂದ ಮೊದಲ ರೋ ರೋ ಸೇವೆ ಭಾನುವಾರ ಆರಂಭಗೊಂಡಿದೆ. ಇದೇ ಮೊದಲ ಬಾರಿಗೆ ನೈಋತ್ಯ ರೈಲ್ವೆಯು ಆರಂಭಿಸಿರುವ ಈ ರೋ ರೋ ನೂತನ ಸೇವೆಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾ ದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ರೈಲಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಈ ಸಂಧರ್ಭದಲ್ಲಿ ಕೇಂದ್ರ ರೈಲ್ವೆ ರಾಜ್ಯಸಚಿವ ಸುರೇಶ್ ಅಂಗಡಿ, ಕಂದಾಯ ಸಚಿವ ಆರ್. ಅಶೋಕ್, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೋಳಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಶಂಕರ್ ಗೌಡ ಪಾಟೀಲ್ ಶಾಸಕ ನಾರಾಯಣಸ್ವಾಮಿ ಉಪಸ್ಥಿತರಿದ್ದರು. ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಹಾಗೂ ತೆಲಂಗಾಣ ಗಳ ಕೃಷಿ ಬಳಕೆ ಕೇಂದ್ರಗಳ ನಡುವೆ ಈ ರೈಲು ಸಂಪರ್ಕ ಕಲ್ಪಿಸಲಿದೆ.ಬೆಂಗಳೂರು ನಗರದಿಂದ ಆರಂಭವಾಗಲಿ ರುವ ನೂತನ ರೋ ರೋ ಸೇವೆಯಲ್ಲಿ 43 ಓಪನ್ ವ್ಯಾಗನ್‌ಗಳು ಇರಲಿವೆ. ಒಟ್ಟು 682 ಕಿ. ಮೀ. ಮಾರ್ಗದಲ್ಲಿ ಈ ರೈಲು ಸಂಚಾರ ನಡೆಸಲಿದ್ದು, ಒಂದು ಬಾರಿ ರೈಲು ಸಂಚಾರ ನಡೆಸಲು 7 ದಿನಗಳ ಅವಧಿ ತೆಗೆದುಕೊಳ್ಳ ಲಿದೆ. 43ಕ್ಕೂ ಅಧಿಕ ಲಾರಿಗಳನ್ನು ಲಾರಿಗಳ ಗಾತ್ರದ ಆಧಾರದ ಮೇಲೆ ರೈಲು ವ್ಯಾಗನ್‌ ನಲ್ಲಿ ಸಾಗಿಸಬಹುದಾಗಿದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!