ಮೀನುಗಾರಿಕಾ ಇಲಾಖೆ ಯಿಂದ ರಾಜ್ಯದಲ್ಲಿ ಪಂಜರ ಮೀನು ಕೃಷಿಗೆ ಆದ್ಯತೆ : ಸಚಿವ ಕೋಟ

ಮಂಗಳೂರು: ಕೇಂದ್ರ ಸರಕಾರದ ಆತ್ಮ ನಿರ್ಭರ ಭಾರತ ಯೋಜನೆಯಡಿ ರಾಜ್ಯದಲ್ಲಿ ಪಂಜರ ಮೀನು ಕೃಷಿಗೆ ಮೀನುಗಾರಿಕಾ ಇಲಾಖೆ ಆದ್ಯತೆ ನೀಡಿದೆ. ಪಂಜರ ಮೀನು ಕೃಷಿ ಬಗ್ಗೆ ರಾಜ್ಯದ ಎಲ್ಲ ಕಡೆ ತರಬೇತಿ ನೀಡಲಾಗುತ್ತಿದ್ದು, 10 ಸಾವಿರ ಜನರಿಗೆ ಸ್ವಂತ ಉದ್ಯೋಗ ಸೃಷ್ಟಿಸುವ ಗುರಿ ಹೊಂದ ಲಾಗಿದೆ ಎಂದು ಮೀನುಗಾರಿಕೆ, ಬಂದರು ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.


ಆತ್ಮ ನಿರ್ಭರ ಭಾರತ ಯೋಜನೆಯಡಿ ಮೀನು ಗಾರಿಕಾ ಇಲಾಖೆ ವತಿಯಿಂದ ನಗರದ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಶನಿವಾರ ನಡೆದ ಪಂಜರ ಮೀನು ಕೃಷಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.


ಪಂಜರ ಮೀನು ಕೃಷಿ ಮೀನುಗಾರಿಕಾ ಇಲಾಖೆಯ ಮಹತ್ವದ ಕಾರ್ಯಕ್ರಮ. ಸ್ವಂತ ಉದ್ಯೋಗ ಸೃಷ್ಟಿಸುವ ಗುರಿಯನ್ನೂ ಯೋಜನೆ ಹೊಂದಿದೆ. ಪಂಜರ ಮೀನು ಕೃಷಿಗೆ 2ರಿಂದ 3 ಲಕ್ಷ ರೂ.ವರೆಗೆ ಬಂಡವಾಳ ಅಗತ್ಯವಿದೆ. ಇದಕ್ಕಾಗಿ ಡಿಸಿಸಿ ಬ್ಯಾಂಕ್ ಮೂಲಕ ಬಡ್ಡಿ ರಹಿತ ಸಾಲ ನೀಡಲಾಗು ವುದು.

ಪಂಜರ ಮೀನು ಕೃಷಿ, ಸಾಲದ ವ್ಯವಸ್ಥೆಗೆ ಬೇಕಾದ ಎಲ್ಲ ಸಹಕಾರವನ್ನು ಇಲಾಖೆ ಅಧಿಕಾರಿಗಳು ನೀಡಲಿದ್ದಾರೆ. ತರಬೇತಿ ಪಡೆದವರು ಪಂಜರ ಕೃಷಿಗೆ ಮುಂದಾಗ ಬೇಕು. ಈ ಬಗ್ಗೆ ಇಲಾಖೆ ಕಣ್ಗಾವಲು ಇರಿಸಲಿದೆ ಎಂದರು.


ಶಾಸಕ ಡಿ. ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಉಮಾನಾಥ ಕೋಟ್ಯಾನ್, ಡಾ. ವೈ. ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ದ.ಕ. ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿ ಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಮೀನುಗಾರಿಕಾ ಇಲಾಖೆ ನಿರ್ದೇಶಕ ರಾಮಾ ಚಾರ್ಯ, ಟ್ರಾಲ್‌ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ನಿತಿನ್ ಕುಮಾರ್, ದ.ಕ. ಮತ್ತು ಉಡುಪಿ ಮೀನು ಮಾರಾಟ ಮಹಾಮಂಡಲ ಅಧ್ಯಕ್ಷ ಯಶ್‌ ಪಾಲ್ ಸುವರ್ಣ ಅತಿಥಿಗಳಾಗಿದ್ದರು.


ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಪಿ. ಪಾಶ್ವನಾಥ್ ಸ್ವಾಗತಿಸಿದರು. ಸಹಾಯಕ ನಿರ್ದೇಶಕಿ ಡಾ. ಕೆ. ಸುಶ್ಮಿತಾ ರಾವ್ ವಂದಿಸಿ ದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


ಆಗಸ್ಟ್‌ನಲ್ಲಿ ಪ್ರಾರಂಭವಾಗಬೇಕಿದ್ದ ಮೀನು ಗಾರಿಕೆ ಕೋವಿಡ್ ಹಿನ್ನೆಲೆಯಲ್ಲಿ ಸೆ.01ರಂದು ಪ್ರಾರಂಭವಾಗಲಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು, ಕೋವಿಡ್‌ನ ಎಲ್ಲ ನಿಯಮಗಳನ್ನು ಪಾಲಿಸಿ ಮೀನುಗಾರಿಕೆ ನಡೆಸಲು ಉದ್ದೇಶಿಸಲಾಗಿದೆ. ಮೀನು ಗಾರಿ ಕೆಗೆ ತೆರಳಿದ ಸಂದರ್ಭ ದುರಂತ ಸಂಭವಿಸು ತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಮೀನುಗಾರರಿಗೆ ಲೈಫ್ ಜಾಕೆಟ್ ಕಡ್ಡಾಯಗೊಳಿಸುವ ಪ್ರಸ್ತಾವನೆಯಿದೆ. ಮೀನುಗಾರರ ರಕ್ಷಣೆ ಸರಕಾರದ ಜವಾಬ್ದಾರಿ ಎಂದು ಮೀನು ಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply