Janardhan Kodavoor/ Team KaravaliXpress
23.6 C
Udupi
Thursday, December 8, 2022
Sathyanatha Stores Brahmavara

ಆಗಸ್ಟ್ 2ರಿಂದಲೇ  ಲಾಕ್ ಡೌನ್ ರದ್ದು

ಬೆಂಗಳೂರು: ಕೇಂದ್ರ ಸರ್ಕಾರ ಅನ್ ಲಾಕ್-3 ಮಾರ್ಗಸೂಚಿ ಬಿಡುಗಡೆ ಮಾಡಿದ ಮಾರನೇ ದಿನವೇ ರಾಜ್ಯ ಸರ್ಕಾರ ಸಹ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಆಗಸ್ಟ್ 2ರಿಂದಲೇ ಜಾರಿಗೆ ಬರುವಂತೆ ಭಾನುವಾರದ ಲಾಕ್ ಡೌನ್ ಅನ್ನು ರದ್ದುಗೊಳಿಸಿದೆ. 
ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಿದ್ದು, ಆಗಸ್ಟ್ 5ರಿಂದ ಜಾರಿಗೆ ಬರುವಂತೆ ರಾಜ್ಯದಲ್ಲಿ ಜಿಮ್ ಮತ್ತು ಯೋಗ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಿದೆ. ಅಲ್ಲದೆ ರಾತ್ರಿ ಕರ್ಫ್ಯೂ ಸಹ ರದ್ದುಗೊಳಿಸಿದೆ. ಕೋವಿಡ್ ಸೋಂಕು ಹೆಚ್ಚುತ್ತಲೇ ಇರುವುದರಿಂದ ಆಗಸ್ಟ್ 31ರವರೆಗೂ ಶಾಲಾ, ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಅನುಮತಿ ನೀಡಿಲ್ಲ.ತೆರೆಯುವುದಕ್ಕೆ ಅನುಮತಿ ನೀಡಲಾಗಿಲ್ಲ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ  ಸದ್ಯಕ್ಕೆ ಮೆಟ್ರೋ ಸಂಚಾರ, ಚಿತ್ರಮಂದಿರ, ಸ್ವಿಮ್ಮಿಂಗ್ ಪೂಲ್, ಮನರಂಜನಾ ಉದ್ಯಾನವನ, ಜನರು ಗುಂಪು ಸೇರು  ಸೇರುವುದರ ಮೇಲಿದ್ದ ನಿರ್ಬಂಧವನ್ನು ಮುಂದುವರಿಸಲಾಗಿದೆ.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!