ಹರಿಖಂಡಿಗೆ:  ಮುನಿಯಾಲು ಯೋಗ ಮತ್ತು ನ್ಯಾಚುರೋಪತಿ ಕಾಲೇಜಿನಲ್ಲಿ ಯೋಗ ಶಿಬಿರ

ಪ್ರಕೃತಿ ಮಡಿಲಿನಂತಿರುವ ಹರಿಖಂಡಿಗೆಯ ಮಹಾಲಸ ನಾರಾಯಣಿ ದೇವಸ್ಥಾನದ ಹತ್ತಿರದಲ್ಲಿರುವ ನವೀಕರಿಸಲ್ಪ ಕಟ್ಟಡದಲ್ಲಿ ಮುನಿಯಾಲು ಯೋಗ ಮತ್ತು ನ್ಯಾಚುರೋಪತಿ ಕಾಲೇಜಿನಲ್ಲಿ ವಿಶ್ವ ಯೋಗ ದಿನದ ಪ್ರಯುಕ್ತ ಯೋಗ ಸಪ್ತಾಹ ಶಿಬಿರವನ್ನು ಆಚರಿಸುತ್ತಿದೆ.
ದಟ್ಟ ಅರಣ್ಯ ಪರಿಸರ ಹಾಗೂ ಸಕಲ ಸೌಲಭ್ಯಗಳನ್ನೂ ಹೊಂದಿರುವ ಈ ವಿದ್ಯಾಸಂಸ್ಥೆಯು ಉಡುಪಿ ಜಿಲ್ಲೆಯ ಪ್ರಥಮ ಯೋಗ ಮತ್ತು ನ್ಯಾಚುರೋಪತಿ ಕಾಲೇಜು ಆಗಿದ್ದು ಇಂದು ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಶಾಲಾ ಮಕ್ಕಳಿಗೆ ಮತ್ತು ಸ್ಥಳೀಯರಿಗೆ ಯೋಗ ಹಾಗೂ ಉಚಿತ ವೈದ್ಯಕೀಯ ತಪಾಸಣೆ ನಡೆಯಲಿದ್ದು ಸಾರ್ವಜನಿಕರು ಈ ಸೌಲಭ್ಯಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಉಪಯೋಗಿಸಿಕೊಳ್ಳಬಹುದು ಎಂದು ಸಂಸ್ಥೆಯು ತಿಳಿಸಿದೆ.
 
 
 
 
 
 
 
 
 
 
 

Leave a Reply