ಭಾರತೀಯ ದಂತ ವೈದ್ಯರ ಸಂಘ~ ರಾಜ್ಯ ಮಟ್ಟದ ಪದಾಧಿಕಾರಿಗಳ ಕಾರ್ಯಾಗಾರ.

ಭಾರತೀಯ ದಂತ ವೈದ್ಯರ ಸಂಘ, ಉಡುಪಿ. ಇವರ ವತಿಯಿಂದ ರಾಜ್ಯಮಟ್ಟದ ಪದಾಧಿಕಾರಿಗಳ ಕಾರ್ಯಗಾರವನ್ನು ಮಾರ್ಚ್ ಭಾನುವಾರದಂದು ವ್ಯಾಲಿ ವ್ಯೂ ಕಂಟ್ರಿ ಕ್ಲಬ್  ಮಣಿಪಾಲದ ಆಯೋಜಿಸಲಾಗಿತ್ತು.  ಭಾರತೀಯ ದಂತ ವೈದ್ಯ ಸಂಘದ ರಾಜ್ಯಾಧ್ಯಕ್ಷ  ಡಾ. ಭರತ್ ಎಸ್.ವಿ. ಸಮಾರಂಭ ಉದ್ಘಾಟಿಸಿದರು. ಡಾ. ರಂಗನಾಥ್ ವಿ. ಹಾಗೂ ಡಾ.ಶ್ರೀನಿಧಿ ಡಿ. ಅವರು ಕಾರ್ಯಗಾರವನ್ನು ನಡೆಸಿಕೊಟ್ಟರು. ಕಾರ್ಯಾಗಾರದಲ್ಲಿ ಹೊಸ ಹೊಸ ತಂತ್ರಜಾನವನ್ನು ಅಳವಡಿಸಕೊಳ್ಳುವ ಬಗ್ಗೆ ವಿಸೃತ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಭಾರತೀಯ ದಂತ ವೈದ್ಯ ಸಂಘ ಉಡುಪಿ ಇದರ ಅಧ್ಯಕ್ಷ  ಡಾ ಜಗದೀಶ್ ಜೋಗಿ, ಕೋಶಾಧಿಕಾರಿ  ಡಾ. ವಿಜೇಶ್ ಶೆಟ್ಟಿ, ಡಾ.ಶಿವಶರಣ್ ಶೆಟ್ಟಿ, ಡಾ.ವಿಜಯೇಂದ್ರ ವಸಂತ್ ರಾವ್, ಡಾ. ಪ್ರಮೋದ್ ಶೆಟ್ಟಿ, ಡಾ.ಸಂಜಯ್ ಕುಮಾರ್, ಡಾ.ನರೇಂದ್ರ ಹಾಗೂ  ಡಾ . ಸಚಿನ್  ವೇದಿಕೆಯಲ್ಲಿ ಉಪಸ್ಥತರಿದ್ದರು.
ಭಾರತೀಯ ದಂತ ವೈದ್ಯ ಸಂಘದ ರಾಜ್ಯ ಕಾರ್ಯದರ್ಶಿ  ಡಾ. ಮಹೇಶ್ಚಂದ್ರ ಧನ್ಯವಾದವಿತ್ತರು. ಭಾರತೀಯ ದಂತ ವೈದ್ಯ ಸಂಘ ಉಡುಪಿ ಜಿಲ್ಲಾ ಶಾಖೆಯ ಕಾರ್ಯದರ್ಶಿ ಡಾ. ಅತುಲ್ ಯು.ಆರ್ ನಿರೂಪಿಸಿದರು.
 
 
 
 
 
 
 
 
 
 
 

Leave a Reply