​ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ವಚ್ಯು೯ಯಲ್ ಓಣಂ ಆಚರಣೆ

ಉಡುಪಿ, ಸೆಪ್ಟಂಬರ್14, ಓಣಂ ಹಬ್ಬವು ಭಾರತ ಸಂವಿಧಾನದ ಪೂವ೯ಪೀಠಿಕೆಯಲ್ಲಿ ಹೇಳಲಾದ ಜ್ಯಾತ್ಯಾತೀತ ತತ್ವಕ್ಕೆ ಅನುಗುಣವಾಗಿ ಎಲ್ಲಾ ಜಾತಿ, ಧಮ೯ ಹಾಗೂ ವಗ೯ದವರೂ ಒಟ್ಟು ಸೇರಿ ಆಚರಿಸುವ ಹಬ್ಬವಾಗಿದೆ ಎಂದು ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.(ಡಾ.) ಪ್ರಕಾಶ್ ಕಣಿವೆಯವರು ಹೇಳಿದರು.

​ಅವರು ​ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ನಡೆದ ವಚ್ಯು೯ಯಲ್ ಓಣಂ ಹಬ್ಬದ ಆಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ​ ​ಹಬ್ಬದ ಆಚರಣೆಗಳು ಮನುಷ್ಯರ ನಡುವಿನ ​ಸಂಬಂಧಗಳನ್ನು ಗಟ್ಟಿಗೊಳಿಸಿ ಹೊಸ ಚೇತನವನ್ನು ನೀಡುವಂತಿರಬೇಕು. ಆದರೆ ಇಂದಿನ ಯುವ ಜನಾಂಗ ವೀಕೆಂಡ್ ಹಾಗೂ ಇನ್ನಿತರ ಆಚರಣೆಗಳ ಹೆಸರಿನಲ್ಲಿ ಡ್ರಗ್ಸ್ ಹಾಗೂ ಇನ್ನಿತರ ಮಾದಕ ವಸ್ತುಗಳ ವ್ಯಸನಿಗಳಾಗಿದ್ದಾರೆ. ಯುವ ಜನಾಂಗ ಅದರಲ್ಲೂ ಪ್ರಮುಖವಾಗಿ ವಿದ್ಯಾಥಿ೯ಗಳು ಈ ಮಾದಕ ವ್ಯಸನಗಳಿಂದ ಮುಕ್ತಿ ಹೊಂದಿ ತಮ್ಮ ಗುರಿ ಸಾಧಿಸಲು ಕಷ್ಟಪಟ್ಟು ವಿದ್ಯಾಬ್ಯಾಸ ಮಾಡಬೇಕು ಎಂದು ಕರೆ ನೀಡಿದರು.

ಕಾಯ೯ಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾ​ಲೆ ​ ಪ್ರೊ.(ಡಾ.) ನಿಮ೯ಲಾ ಹರಿಕೃಷ್ಣ ವಹಿಸಿದ್ದರು. ಕಾಯ೯ಕ್ರಮದಲ್ಲಿ ವಿದ್ಯಾಥಿ೯ ಕ್ಷೇಮಾಭಿವೃದ್ದಿ ಅಧಿಕಾರಿ ಶ್ರೀ.ಶಂಕರ ಮೂತಿ೯ಯವರು ಉಪಸ್ಥಿತರಿದ್ದರು. ವಿದ್ಯಾಥಿ೯ನಿ ಆಯ೯ ​ಪ್ರಾರ್ಥಿಸಿದರು. ದೃಶ್ಯ ​ಧನ್ಯವಾದವಿತ್ತರು. ಜಾಸ್ಮಿನ್ ಹಾಗೂ ​ಸಂಸ್ಕೃತಿ ಸುರೇಶ್ ನಿರೂಪಿಸಿದರು. ಈ ಕಾಯ೯ಕ್ರಮವು ನೈಜ ಮತ್ತು ವಚ್ಯು೯ಯಲ್‌ನ ಸಮ್ಮಿಳಿತವಾಗಿದ್ದುದು ವಿಶೇಷವಾಗಿತ್ತು.

 
 
 
 
 
 
 
 
 
 
 

Leave a Reply