ಯುಪಿಎಂಸಿ : ಸೈಬರ್ ಸೆಕ್ಯೂರಿಟಿ ಅಧ್ಯಯನ ಕೈಪಿಡಿ ಬಿಡುಗಡೆ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಾಣಿಜ್ಯ ಉಪನ್ಯಾಸಕರಾದ ಶ್ರೀ ರಾಘವೇಂದ್ರ ಜಿ.ಜಿ ಇವರು ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಿಸಿದ ಮಂಗಳೂರು ವಿಶ್ವವಿದ್ಯಾನಿಲಯ ದ್ವಿತೀಯ ಪದವಿಗೆ ನಿಗದಿಪಡಿಸಿದ ‘ಸೈಬರ್ ಸೆಕ್ಯೂರಿಟಿ’ ಪಠ್ಯ ವಿಷಯಕ್ಕಾಗಿ ರಚಿಸಿದ ಅಧ್ಯಯನ ಕೈಪಿಡಿಯನ್ನು ಯುಪಿಎಂಸಿಯ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಮೇ 23 ರಂದು ಅನಾವರಣಗೊಳಿಸಿದರು. 

ಅವರು ಈ ಸಂದರ್ಭದಲ್ಲಿ ಇತ್ತೀಚೆಗೆ ಘಟಿಸುತ್ತಿರುವ ಸಾಕಷ್ಟು ಸೈಬರ್ ಪ್ರಕರಣಗಳಿಗೆ ಪ್ರಜ್ಞಾವಂತ ನಾಗರಿಕರು ಮತ್ತು ಯುವಪೀಳಿಗೆ ಸಿಲುಕುತ್ತಿರುವುದು ತುಂಬಾ ಆಘಾತಕಾರಿ ಇಂತಹ ಪಠ್ಯಗಳು ಪದವಿ ಹಂತದಲ್ಲಿ ಇರುವುದು ಯುವ ಪೀಳಿಗೆಗೆ ಅರಿವು ಮೂಡಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಉಪ ಪ್ರಾಚಾರ್ಯರಾದ ಶ್ರೀ ರಾಧಾಕೃಷ್ಣ ರಾವ್, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ಪ್ರಭಾ ಕಾಮತ್, ಐಕ್ಯೂಎಸಿ ಸಂಯೋಜಕ ಶ್ರೀ ಜಾವೆದ್, ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ ಜಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply