ಪಿಪಿಸಿ~ ಇಕೋ ಕ್ಲಬ್

ಹಾವು ಮುಗ್ಧ ಜೀವಿ. ಎರಡು ವರ್ಷದ ಮಗುವಿನಂತೆ. ಮಗುವನ್ನು ಯಾವ ರೀತಿಯಲ್ಲಿ ಎತ್ತಿಕೊಳ್ಳುತ್ತೇವೋ, ನೋಡಿಕೊಳ್ಳು ತ್ತೇವೋ ಅದರಂತೆ ಆ ಮಗು ಸಂವೇದಿಸುತ್ತದೆ. ಹಾವು ಹೂವಿನಷ್ಟೇ ಸೂಕ್ಷ್ಮ. ಹಾವನ್ನು ಹೂವಿನಂತೆ ಎತ್ತಬೇಕು. ಆಗ ಅದು ಕಚ್ಚದು. ಅದಕ್ಕೆ ನೋವಾದರೆ ಮಾತ್ರ ಕಚ್ಚುತ್ತದೆ’ ಎಂದು ಉರಗ ತಜ್ಞ ಗುರುರಾಜ ಸನಿಲ್ ಹೇಳಿದರು.
ಉಡುಪಿಯ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಇಕೋ-ಕ್ಲಬ್ ವತಿಯಿಂದ ನಡೆಸಲ್ಪಟ್ಟ ‘ಹಾವು ನಾವು ಮತ್ತು ಪರಿಸರ’ ಎಂಬ ವಿಷಯದ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ಮಾತನಾಡಿದ ಶ್ರೀಯುತರು ‘ಪರಿಸರದ ಸಮತೋಲನದಲ್ಲಿ ಹಾವು ಸಹ ಮುಖ್ಯ. ಹಾವಿನ ಬಗ್ಗೆ ಜನರಲ್ಲಿರುವ ವಿವಿಧ ರೀತಿಯ ನಂಬಿಕೆ- ಅಪನ೦ಬಿಕೆಗಳಿ೦ದ ಅದನ್ನು ಆರಾಧಿಸುತ್ತಾರೆ, ಹಾನಿಯೂ ಮಾಡುತ್ತಾರೆ. ಆರಾಧನೆಯಿಂದ ಪರಿಸರ ಸಂರಕ್ಷಣೆಗೆ ಕಾರಣವಾಗಿದೆ’ ಎಂದು ಹೇಳಿದರು.
ಕೊನೆಗೆ ವಿದ್ಯಾರ್ಥಿಗಳೊಂದಿಗೆ ಸ೦ವಾದ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪ್ರತಿಮಾ ಬಾಳಿಗರವರು ವಹಿಸಿದ್ದರು. ಇಕೋ-ಕ್ಲಬ್ ಸಂಯೋಜಕರಾದ ಗಣೇಶ್ ವಾಟೆ, ಪದ್ಮಾ ಎ ಆಚಾರ್ಯ ಕಾರ್ಯಕ್ರಮ ವನ್ನು ಆಯೋಜಿಸಿದ್ದರು. ಸಂಘದ ಕಾರ್ಯದರ್ಶಿ ಸ್ಕಂದ ಇವರು ಸ್ವಾಗತಿಸಿ, ವಂದಿಸಿದರು.
 
 
 
 
 
 
 
 
 
 
 

Leave a Reply