ಆನ್‌ಲೈನ್ ಶಿಕ್ಷಣ ಇಂದಿನ ಅಗತ್ಯ-ನ್ಯಾಯಾಧೀಶ ಸುಬ್ರಮಣ್ಯ ಜೆ.ಎನ್.

ಉಡುಪಿ : ಕೋವಿಡ್-19 ಪಿಡುಗಿನ ಪರಿಣಾಮದಿಂದ ವಿಶ್ವದಲ್ಲಿ ಹಲವಾರು ಬದಲಾವಣೆಗಳಾಗಿದ್ದು ವಿದ್ಯಾಥಿ೯ಗಳು ಆನ್‌ಲೈನ್‌ನಲ್ಲಿ ಶಿಕ್ಷಣವನ್ನು ಪಡೆಯುವುದು ತೀರಾ ಅನಿವಾಯ೯ವಾಗಿದೆ. ಈ ಹೊಸ ಶೈಕ್ಷಣಿಕ ಸ್ಥಿತ್ಯಂತರಕ್ಕೆ ವಿದ್ಯಾಥಿ೯ಗಳು ತಮ್ಮನ್ನು ಒಗ್ಗಿಸಿಕೊಂಡು ಜ್ಞಾನಾಜ೯ನೆ ಮಾಡಬೇಕೆಂದು ಉಡುಪಿಯ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಶ್ರೀ.ಸುಬ್ರಮಣ್ಯ ಜೆ.ಎನ್. ರವರು ಹೇಳಿದರು.
ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ 2020-21ನೇ ಸಾಲಿನ ಶೈಕ್ಷಣಿಕ ವಷ೯ಕ್ಕೆ ಸಂಬಂಧಿಸಿದಂತೆ ಆನ್‌ಲೈನ್ ತರಗತಿಗಳು ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಆನ್‌ಲೈನ್‌ನಲ್ಲಿ ಸಿಗುವ ಇ-ಲೈಬ್ರರಿಯನ್ನು ಹಾಗೂ ಆನ್‌ಲೈನ್ ತರಗತಿಗಳನ್ನು ವಿದ್ಯಾಥಿ೯ಗಳು ಪೂಣ೯ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು. ವಿದ್ಯಾಥಿ೯ಗಳು ಹಲವಾರು ವಿಷಯಗಳನ್ನು ಹಾಗೂ ಕಾನೂನುಗಳನ್ನು ನಿರಂತರ ಆಧ್ಯಯನ ಮಾಡುದರಿಂದ ಮುಂದೆ ವೃತ್ತಿಯಲ್ಲಿ ಯಶಸ್ಸು ಗಳಿಸಲು ಹಾಗೂ ಕಾನೂನುಗಳನ್ನು ಅಥ್ಯೆ೯ಸಲು ಅನುಕೂಲವಾಗುತ್ತದೆ ಎಂದು ವಿದ್ಯಾಥಿ೯ಗಳಿಗೆ ತಿಳಿಸಿದರು.ಕಾಲೇಜಿನ ಪೋಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಡಾ.ತುಂಗೇಶ್ ಜಿ.ಎಮ್. ರವರು ವಿದ್ಯಾಥಿ೯ಗಳು ಸಮಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ತಮ್ಮ ಗುರಿಸಾಧಿಸಲು ಕಷ್ಟಪಟ್ಟು ಅಧ್ಯಯನ ಮಾಡಬೇಕೆಂದು ವಿದ್ಯಾಥಿ೯ಗಳಿಗೆ ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ.(ಡಾ.) ನಿಮ೯ಲಾ ಹರಿಕೃಷ್ಣ ರವರು ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ವಿದ್ಯಾಥಿ೯ಗಳು ಸರಿಯಾದ ಶಿಕ್ಷಣವನ್ನು ಪಡೆಯುದರಿಂದ ಜ್ಞಾನಯೋಗ, ಕ್ರಿಯಾಯೋಗ, ಸಹಯೋಗ ಮತ್ತು ಅತ್ಮಯೋಗ ದೊರೆಯುತ್ತದೆ ಎಂದು ಹೇಳಿದರು.
ಕಾಲೇಜಿನ ವಿದ್ಯಾಥಿ೯ ಕ್ಷೇಮಾಧಿಕಾರಿಗಳಾದ ಶ್ರೀ.ಶಂಕರಮೂತಿ೯ ಬಿ.ಜಿ. ರವರು ಆತಿಥಿಗಳನ್ನು ಸ್ವಾಗತಿಸಿದರು. ಕಾಲೇಜಿನ ಸಹಾಯಕ ಪ್ರಾದ್ಯಾಪಕರುಗಳಾದ ಶ್ರೀ.ರಘುನಾಥ್ ಕೆ.ಎಸ್. ರವರು ವಂದನಾಪ೯ಣೆ ಸಲ್ಲಿಸಿದರು. ಡಾ.ಶ್ರೀನಿವಾಸ ಪ್ರಸಾದ್ ಆರ್. ರವರು ಕಾಯ೯ಕ್ರಮವನ್ನು ನಿರೂಪಿಸಿದರು.
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply