ಝೇಂಕಾರ ಟ್ರೂಪ್‌ನ ದಶಮಾನನೋತ್ಸವ; ಗುರುವಂದನೆ

ಉಡುಪಿ ತೆಂಕಪೇಟೆಯ ಯುವಕಲಾವಿದರ  ಝೇಂಕಾರ ಟ್ರೂಪ್‌ನ 10 ನೇ ವಾರ್ಷಿಕೋತ್ಸವ ಜೂ.9 ರಂದು ಉಡುಪಿಯ ಪುರಭವನದಲ್ಲಿ ನೆಡೆಯಿತು.
ತಂಡದ ಸದಸ್ಯರಿಗೆ ಸಂಗೀತ ವಿದ್ಯೆ ಕಲಿ ಸಿಕೊಟ್ಟು ಸದಾ ಯುವ ಸಂಗೀತದಾರಿಗೆ ಪ್ರೋತ್ಸಹ ನೀಡುತ್ತಿರುವ ಗುರುಗಳಿಗೆ ಗುರುವಂದನೆಯ ಗೌರವ ಅರ್ಪಣೆ ನೆಡೆಯಿತು. ಗುರುಗಳಾದ ಸುಧೀರ್ ನಾಯಕ್, ಶ್ರೀ ಶಂಕರ್ ಶೆಣೈ, ಸತ್ಯವಿಜಯ ಭಟ್, ಮಾಧವ ಆಚಾರ್ಯ, ಮಹಾಬಲೇಶ್ವರ ಭಾಗವತ್, ಸತ್ಯಚರಣ್ ಶೆಣೈ, ವಿಠ್ಠಲದಾಸ ಭಟ್, ನರಸಿಂಹ ಕಿಣಿ, ರಾಮ ಭಟ್, ಯೋಗೀಶ್ ಕಿಣಿರವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ಬೆಳ್ಳಿಗೆಯಿಂದ ರಾತ್ರಿ ತನಕ ಪ್ರಸಿದ್ಧ ಸಂಗೀತಜ್ಞರುಗಳಿಂದ ವೈವಿಧ್ಯಮ ಮಯ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು. ಅವಧೂತ್ ಗಾಂಧಿ  ಹಾಗೂ ತಂಡದವರಿಂದ  ಮಹಾರಾಷ್ಟçದ ಋಷಿ ಸಾಹಿತ್ಯದಲ್ಲಿ ಜಾನಪದ ಸಂಗೀತ, ಅಪರಾಹ್ನ 3,30 ಕ್ಕೆ ಸ್ವರಾಂಜಲಿ ಕಾರ್ಯಕ್ರಮದಲ್ಲಿ ಸಿದ್ಧಾರ್ಥ ಬೆಳ್ಮಣ್ಣು ಅವರಿಂದ ಹಿಂದೂಸ್ತಾನಿ ಸಂಗೀತ ನೆಡೆಸಿಕೊಟ್ಟರು. 
ಸಾವಿರಾರು ಸಂಗೀತ ಅಭಿಮಾನಿಗಳು  ವೈವಿಧ್ಯಮ ಮಯ ಸಂಗೀತ ಕಾರ್ಯಕ್ರಮಗಳನ್ನು  ಆನಂದಿಸಿದರು  ಖುಷಿಪಟ್ಟರು.
 
 
 
 
 
 
 
 
 
 
 

Leave a Reply