ಮಣಿಪಾಲ ಸಮುದಾಯ ಬಾನುಲಿ ಕೇಂದ್ರಕ್ಕೆ ವಿದ್ಯಾರ್ಥಿನಿಯರ ಭೇಟಿ

ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನ ಮೂರನೆಯ ಸೆಮಿಸ್ಟರ್ ವಿದ್ಯಾರ್ಥಿ- ಶಿಕ್ಷಕರು ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ಅವರ ನೇತೃತ್ವದಲ್ಲಿ ಈಚೆಗೆ ಮಣಿಪಾಲ ಸಮುದಾಯ ಬಾನುಲಿ ಕೇಂದ್ರಕ್ಕೆ ಭೇಟಿ ನೀಡಿದರು. ಕೇಂದ್ರದ ನಿರ್ದೇಶಕಿ ಡಾ ರಶ್ಮಿ ಅಮ್ಮೆಂಬಳ ತಂಡವನ್ನು ಸ್ವಾಗತಿಸಿ ಸಮುದಾಯ ಬಾನುಲಿ ಕೇಂದ್ರದ ಕಾರ್ಯವೈಖರಿ, ಉದ್ದೇಶ, ಪ್ರಸಾರಕಾರ್ಯದ ರೀತಿನೀತಿಗಳ ಬಗ್ಗೆ ಬೆಳಕು ಚೆಲ್ಲಿದರಲ್ಲದೆ ಸಮೂಹ ಸಂವಹನ ವಿಭಾಗದ ಗ್ರಂಥಾಲಯವನ್ನೂ ಪರಿಚಯಿಸಿದರು.

ವಿದ್ಯಾರ್ಥಿ ಶಿಕ್ಷಕರು ವಿಭಾಗದ ಸ್ಥಾಪಕ ನಿರ್ದೇಶಕ ದಿ ಎಂವಿ ಕಾಮತ್ ಕಾರ್ನರ್ ಗೆ ಭೇಟಿ ನೀಡಿ ಕಾಮತ್ ಅವರು ಬಳಸುತ್ತಿದ್ದ ಟೈಪ್ ರೈಟರ್ ಹಾಗು ಅವರು ರಚಿಸಿದ ಗ್ರಂಥಗಳನ್ನು ವೀಕ್ಷಿಸಿದರು. ಬಳಿಕ ವಿದ್ಯಾರ್ಥಿ ಶಿಕ್ಷಕರು ನೀಡಿದ ಒಂದು ಗಂಟೆ ಅವಧಿಯ ಕಾರ್ಯಕ್ರಮ ವೈವಿಧ್ಯವನ್ನು ಪ್ರಸಾರದ ಸಲುವಾಗಿ ಧ್ವನಿಮುದ್ರಿಸಿಕೊಳ್ಳಲಾಯಿತು. ಕುಮಾರಿ ನಿರುತ ಭಟ್ ಕೃತಜ್ಞತೆ ಸಲ್ಲಿಸಿದರು.

 
 
 
 
 
 
 
 

Leave a Reply